‘ಅಸ್ತ್ರ’ ರಾಷ್ಟ್ರಮಟ್ಟದಲ್ಲಿ ತನ್ನ ಛಾಪು ಮೂಡಿಸಿರುವ ಉದ್ಯಮ. ಭಾರತದ ರಕ್ಷಣಾ ವ್ಯವಸ್ಥೆಗೆ ಆಯುಧಗಳನ್ನು ಸರಬರಾಜು ಮಾಡುವ ಕರ್ತವ್ಯ ನಿಭಾಯಿಸುತ್ತಿರುವ ಸಂಸ್ಥೆಯಾಗಿದೆ. ಧಾರವಾಡ ಜಿಲ್ಲೆಯ (Jobs In Dharwad) ಕಲಘಟಗಿಯ ಕಾಡನಕೊಪ್ಪದಲ್ಲಿ ಪ್ರಾರಂಭವಾಗಿರುವ ಈ ಸಂಸ್ಥೆಯು ಈಗ ಒಂದು ಆಕರ್ಷಕ ಮಾದರಿಯ ತರಬೇತಿ ಜೊತೆಗೆ ಉದ್ಯೋಗಾವಕಾಶವನ್ನು (Jobs In Astra) ಜನರಿಗೆ ನೀಡುತ್ತಿದೆ.
ಸಂಸ್ಥೆಯ ಹೆಸರು | ಅಸ್ತ್ರ |
ಕೆಲಸದ ಸ್ಥಳ | ಧಾರವಾಡ ಜಿಲ್ಲೆಯ ಕಲಘಟಗಿ |
ವಿದ್ಯಾರ್ಹತೆ | SSLC, ಪಿಯುಸಿ ಹಾಗೂ ಐಟಿಐ ಮುಗಿದ ವಿದ್ಯಾರ್ಥಿಗಳು |
ವಯೋಮಿತಿ | 18-24 ವರ್ಷ |
ಕೊನೆಯ ದಿನಾಂಕ | ಮೇ 25 |
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ | 9611273368 |
ಇದನ್ನೂ ಓದಿ: Sharavati Hanging Bridge: ನದಿಯ ಮೇಲಿನ ತೂಗುಯ್ಯಾಲೆ, ಇಲ್ಲಿ ನಿಂತ್ರೆ ಗಾಳಿಯಲ್ಲೇ ತೇಲಿದಂತಾಗುತ್ತೆ!
ಹೇಗಿರುತ್ತೆ ಟ್ರೈನಿಂಗ್?
60 ದಿನಗಳ ಅವಧಿಯ ತರಬೇತಿ ಇದಾಗಿದ್ದು ಈ ತರಬೇತಿಯಲ್ಲಿ ಪಾಲ್ಗೊಂಡವರಿಗೆ CNC Machining, Defence Components Manufacturing, Sheet Metal Products Making, Tools And Die Handling, Inspection, Testing And Assembly Safety And Security ಈ ಆರು ಹಂತದ ಟ್ರೈನಿಂಗ್ ನೀಡಲಾಗುವುದು.
ಇದನ್ನೂ ಓದಿ: Hubballi Special Tractor: ಟ್ರ್ಯಾಕ್ಟರ್ ಒಂದೇ ಆದ್ರೂ, ಉಪಯೋಗ ಹಲವು! ಕರುನಾಡ ಹುಡುಗನ ಸಾಧನೆ
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಯನ್ನು ಮೇ 25ರ ಒಳಗೆ ಫೋಟೋ ಹಾಗೂ ಬಯೋಡೇಟಾದೊಂದಿಗೆ ಸಂಸ್ಥೆಗೆ ತಲುಪಿಸಬೇಕು. ಸಂಪೂರ್ಣ ಅರವತ್ತು ದಿನ ತರಬೇತಿಗೆ ಹಾಜರಿರಬೇಕು. ಅರ್ಜಿಯನ್ನು Astr ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್, 4/2A. ಕಾಡನಕೊಪ್ಪ, ಕಲಘಟಗಿ ತಾಲೂಕು, ಧಾರವಾಡ ಇಲ್ಲಿ ತಲುಪಿಸಬೇಕು. ದೂರವಾಣಿ ಸಂಖ್ಯೆ 9611273368 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ