ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡಿನಲ್ಲಿ ಗಂಡು ಮಕ್ಕಳ ಹಬ್ಬದ ಸಂಭ್ರಮ! ಬಣ್ಣದೋಕುಳಿಯಲ್ಲಿ ಮಿಂದೇಳುತ್ತಲೇ ವಾಣಿಜ್ಯ ನಗರಿಯಲ್ಲಿ (Hubballi News) ಝಗಮಗಿಸಿತು ಜಗ್ಗಲಗಿ ಹಬ್ಬ. ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಹುಬ್ಬಳ್ಳಿಯ ಜಗ್ಗಲಗಿ ಹಬ್ಬ ಝಗಮಗಿಸಿತು. ಕೋವಿಡ್ ಹಿನ್ನೆಲೆಯಲ್ಲಿ (Covi-19) ಎರಡು ವರ್ಷಗಳಿಂದ ಕಳೆಗಟ್ಟಿದ್ದ ಹಬ್ಬಕ್ಕೆ (Jaggalagi Habba) ಈ ಬಾರಿ ವಿಶೇಷ ಮೆರುಗು ಸಿಕ್ಕಿತು. 2016ರಿಂದ ಪ್ರಾರಂಭಗೊಂಡಿರುವ ಜಗ್ಗಲಗಿ ಹಬ್ಬಕ್ಕೆ ಧಾರವಾಡ ಜಿಲ್ಲೆಯ (Dharwad News) ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಿ ಮೆರುಗು ನೀಡಿದರು.
ಮೂರು ಸಾವಿರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಜಗ್ಗಲಗ್ಗಿ ಹಬ್ಬಕ್ಕೆ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಸ್ವಾಮೀಜಿಗಳು ವೈಭವದ ಚಾಲನೆ ನೀಡಿದರು.
ಇದನ್ನೂ ಓದಿ:Dharwad: ಮದುವೆ, ಮಕ್ಕಳು ಆಗದಿದ್ರೆ ತಪ್ಪದೇ ಕಾಮಣ್ಣನ ಆಶೀರ್ವಾದ ಪಡೆಯಿರಿ! ಈ ಊರಲ್ಲಿದೆ ದೇಗುಲ
ನಗರದುದ್ದಕ್ಕೂ ಭವ್ಯ ಮೆರವಣಿಗೆ
ಮೂರುಸಾವಿರ ಮಠದಿಂದ ಪ್ರಾರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯ ಉದ್ದಕ್ಕೂ ಬ್ಯಾಹಟ್ಟಿ, ರಾಯನಾಳ, ಹುಬ್ಬಳ್ಳಿ, ಕುಸುಗಲ್, ಕಮಡೊಳ್ಳಿ, ಬೆಳಗಾವಿ ಜಿಲ್ಲೆಯ ಜಗ್ಗಲಗಿ ತಂಡದ ಮಹಿಳಾ ಹಾಗೂ ಪುರುಷ ಕಲಾವಿದರು ತಮ್ಮ ಪ್ರತಿಭೆ ಮೆರೆದರು.
ಇದನ್ನೂ ಓದಿ: Kalaghatagi Jatra: ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಮಹಿಮೆ!
ಗಮನ ಸೆಳೆದ ಬೇಡರ ವೇಷ
ಮೆರವಣಿಗೆಯುದ್ದಕ್ಕೂ ಕಲಾವಿದರು ತಾಳಬದ್ದವಾಗಿ ಹಲಗೆ ಬಾರಿಸುತ್ತಾ ಕುಣಿದು ಸಂಭ್ರಮಿಸಿದ್ರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕನ್ನಡ ನಾಡಿನ ಕಲೆಯನ್ನ ಕಣ್ತುಂಬಿಕೊಂಡ್ರೆ, ಹಾನಗಲ್ಲಿನ ಬೇಡರ ವೇಷ ತಂಡ ಎಲ್ಲರ ಗಮನ ಸೆಳೆಯಿತು.
ವರದಿ: ಕ್ಯಾಮರಾಮೆನ್ ರವಿ ಲಮಾಣಿ ಜೊತೆ ಶಿವರಾಮ ಅಸುಂಡಿ, ನ್ಯೂಸ್ 18, ಹುಬ್ಬಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ