• Home
 • »
 • News
 • »
 • hubballi-dharwad
 • »
 • Hubballi News: ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವದ ಸಂಭ್ರಮ, ಆಕಾಶದಲ್ಲಿ ಬಣ್ಣಗಳ ರಂಗು

Hubballi News: ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವದ ಸಂಭ್ರಮ, ಆಕಾಶದಲ್ಲಿ ಬಣ್ಣಗಳ ರಂಗು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Hubballi Kite Festival: ದೇಶದ ನಾನಾ ಭಾಗದ ಆಟಗಾರರು ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿದ್ದರು. ಹುಬ್ಬಳ್ಳಿಯ ಜೆಕೆ ಶಾಲಾ ಮೈದಾನದ ಹಿಂಭಾಗದಲ್ಲಿ ಸಾವಿರಾರು ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. 

 • Share this:

  ಹುಬ್ಬಳ್ಳಿ: ಪಟಾ ಪಟಾ..ಹಾರೋ ಗಾಳಿಪಟ! ಹುಬ್ಬಳ್ಳಿ ಆಕಾಶದಲ್ಲಿ ಗಾಳಿಪಟಗಳದ್ದೇ ಕಲವರ.ಹುಬ್ಬಳ್ಳಿಯ (Hubballi News) ನೃಪತುಂಗ‌ ಬೆಟ್ಟದ ಹಿಂಭಾಗದ ಮೈದಾನದಲ್ಲಿ ಗಾಳಿಪಟ ಉತ್ಸವಕ್ಕೆ (Hubballi Kite Festival) ಚಾಲನೆ ನೀಡಲಾಯಿತು.


  ಹುಬ್ಬಳ್ಳಿಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ಕಾಂತಾರದ ಪಂಜುರ್ಲಿ ಶೈಲಿಯ ಗಾಳಿಪಟ ಹಾರಿಸುವುದರ ಮೂಲಕ ಗಾಳಿಪಟ ಉತ್ಸವಕ್ಕೆ ಚಾಲನೆ ಕೊಡಲಾಯಿತು.
  ಇದನ್ನೂ ಓದಿ: Positive Story: ಹುಟ್ಟುಹಬ್ಬಕ್ಕೆ ಚಾಕೊಲೇಟ್ ಅಲ್ಲ, ಸಸಿ ಗಿಫ್ಟ್! ಶಿರಸಿಯ ಸರ್ಕಾರಿ ಶಾಲೆಯಲ್ಲಿ ಮಾದರಿ ಕಾರ್ಯ


  ನಾನಾ ಭಾಗದ ಆಟಗಾರರು ಭಾಗಿ
  ದೇಶದ ನಾನಾ ಭಾಗದ ಆಟಗಾರರು ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿದ್ದರು.  ಹುಬ್ಬಳ್ಳಿಯ ಜೆಕೆ ಶಾಲಾ ಮೈದಾನದ ಹಿಂಭಾಗದಲ್ಲಿ ಸಾವಿರಾರು ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. 


  ಇದನ್ನೂ ಓದಿ: Kalaburagi: ಕಲಬುರಗಿಯ ಈ ಹಳ್ಳಿಯ ಪ್ರತಿ ಮನೆಯಲ್ಲೂ ಡಾಕ್ಟರ್, ಇಂಜಿನಿಯರ್!


  ಎಕ್ಸಾಮ್ ವಾರಿಯರ್ ಕುರಿತು ಸಲಹೆ
  ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ವರ್ಷ, ಪರೀಕ್ಷೆಗೆ ಮೊದಲು ಎಕ್ಸಾಮ್ ವಾರಿಯರ್ ಕಾರ್ಯಕ್ರಮ ಮಾಡ್ತಾರೆ. ಇದೇ 27 ರಂದು ಎಕ್ಸಾಮ್ ವಾರಿಯರ್ ಕಾರ್ಯಕ್ರಮ ಇದೆ. ನೀವೆಲ್ಲ ಭಾಗವಹಿಸಬೇಕೆಂದು ಮಕ್ಕಳಿಗೆ ಸಚಿವ ಜೋಶಿ ಸಲಹೆ ನೀಡಿದರು. ಇತ್ತ ಹುಬ್ಬಳ್ಳಿ ಪೇಟೆಯ ಮಂದಿ ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಖುಷಿಪಟ್ಟರು

  Published by:ಗುರುಗಣೇಶ ಡಬ್ಗುಳಿ
  First published: