• Home
 • »
 • News
 • »
 • hubballi-dharwad
 • »
 • Hubballi News: ಉತ್ತರ ಕರ್ನಾಟಕಕ್ಕೆ ಉತ್ತರ ಭಾರತ ಇನ್ನಷ್ಟು ಹತ್ತಿರ! ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಆರಂಭ

Hubballi News: ಉತ್ತರ ಕರ್ನಾಟಕಕ್ಕೆ ಉತ್ತರ ಭಾರತ ಇನ್ನಷ್ಟು ಹತ್ತಿರ! ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಆರಂಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hubballi To Delhi Direct Flight: ಈ ಮೂಲಕ ಉತ್ತರ ಕರ್ನಾಟಕ ಭಾಗದ ಜನರು ಹುಬ್ಬಳ್ಳಿಯಿಂದ ದೇಶದ ರಾಜಧಾನಿ, ಉತ್ತರ ಭಾರತದ ಪ್ರಮುಖ ನಗರ ದೆಹಲಿಗೆ ಸುಲಭವಾಗಿ ವಿಮಾನ ಯಾನ ಮಾಡಬಹುದಾಗಿದೆ.

 • News18 Kannada
 • Last Updated :
 • Hubli-Dharwad (Hubli), India
 • Share this:

  ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರಿಗೆ ಸಂತಸದ ಸುದ್ದಿಯೊಂದು (Hubballi News) ಹೊರಬಿದ್ದಿದೆ. ಹುಬ್ಬಳ್ಳಿಯಿಂದ ದೆಹಲಿಗೆ (Hubballi To Delhi) ಸಂಚರಿಸಲು ಹೊಸ ಸೌಲಭ್ಯವೊಂದು ಉದ್ಘಾಟನೆಗೊಂಡಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ (Union Civil Aviation Minister Jyotiraditya M Scindia) ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನಯಾನವನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ (Uttara Karnataka News) ಜನರು ಹುಬ್ಬಳ್ಳಿಯಿಂದ ದೇಶದ ರಾಜಧಾನಿ, ಉತ್ತರ ಭಾರತದ ಪ್ರಮುಖ ನಗರ ದೆಹಲಿಗೆ (Hubballi To Delhi Direct Flight) ಸುಲಭವಾಗಿ ವಿಮಾನ ಯಾನ ಮಾಡಬಹುದಾಗಿದೆ. ಈ ಕೆಳಗಿನ ವೇಳಾಪಟ್ಟಿಯಂತೆ ವಾರದ ಎಲ್ಲಾ ಏಳು ದಿನವೂ ವಿಮಾನ ಹಾರಾಟ ಸೇವೆ ದೊರೆಯಲಿದೆ.


  ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನ ಸಂಖ್ಯೆ 6E 5624 ದೆಹಲಿಯಿಂದ ಹೊರಟು ಹುಬ್ಬಳ್ಳಿ ತಲುಪುತ್ತದೆ. ಫ್ಲೈಟ್ 6E 5625 ಹುಬ್ಬಳ್ಳಿಯಿಂದ ಹೊರಟು ದೆಹಲಿಗೆ ತಲುಪುತ್ತದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯು ಈ ಮಾರ್ಗದಲ್ಲಿ ಏರ್‌ಬಸ್ ವಿಮಾನಗಳನ್ನು ನಿರ್ವಹಿಸಲಿದೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ ಜನರು ಹುಬ್ಬಳ್ಳಿಯಿಂದ ನೇರವಾಗಿ ದೆಹಲಿಗೆ ಪ್ರಯಾಣ ಮಾಡಬಹುದಾಗಿದೆ.


  ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕಿದೆ ಪ್ರಾಮುಖ್ಯತೆ
  ಹುಬ್ಬಳ್ಳಿ ವಿಮಾನ ನಿಲ್ದಾಣವು ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ನಿವಾಸಿಗಳಿಗೆ ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮೂಲಸೌಕರ್ಯ ವಿಸ್ತರಣೆಯಲ್ಲಿ ನರೇಂದ್ರ ಮೋದಿ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಹೇಳಿದ್ದಾರೆ.


  ಇದನ್ನೂ ಓದಿ: Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ


  ಇಲ್ಲಿವೆ ಹಲವು ಆಧುನಿಕ ಸೌಲಭ್ಯಗಳು
  ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗಿದೆ. ಐಎಲ್‌ಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ರನ್‌ವೇಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ.


  ಇದನ್ನೂ ಓದಿ: Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ


  ಹುಬ್ಬಳ್ಳಿಯ ಫ್ಲೈಯಿಂಗ್ ತರಬೇತಿ ಸಂಸ್ಥೆಯು ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಲಿದೆ. ನವೀಕರಿಸಬಹುದಾದ ಇಂಧನ ಬಳಕೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಕಾರ್ಯಕ್ಷಮತೆಯು ಶ್ಲಾಘನೆಗೂ ಪ್ರಾಪ್ತವಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: