ಹುಬ್ಬಳ್ಳಿ: ಹುಬ್ಬಳ್ಳಿ (Hubballi) ಹಾಗೂ ಪುಣೆಗೂ (Pune) ಬಹಳ ಅವಿನಾಭವ ನಂಟು. ಹುಬ್ಬಳ್ಳಿ ಹಾಗೂ ಪುಣೆಯ ನಿವಾಸಿಗಳು ಅನೇಕ ಕಾರಣದಿಂದ ಪ್ರಯಾಣ ಮಾಡುತ್ತಿರುತ್ತಾರೆ. ಅದರಲ್ಲೂ ವ್ಯವಾಹಾರಿಕವಾಗಿ ಪ್ರಯಾಣಿಸುವವರಿಗೆ ವಿಮಾನ (Flight) ವ್ಯವಸ್ಥೆ ಬಹಳ ಅನುಕೂಲಕರವಾಗಿರಲಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಆದ ನಂತರ ಅಲ್ಲಿನ ನಿವಾಸಿಗಳು ದೇಶದ ಇತರ ನಗರಗಳಿಗೆ ಸಹ ಹೆಚ್ಚಿನ ವಿಮಾನ ಸೇವೆಯನ್ನು ಆರಂಭಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಪುಣೆಗೆ ಪ್ರತಿದಿನ ಇಂಡಿಗೋ ವಿಮಾನ ಹಾರಾಟ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿದಿನ ವಿಮಾನ ಸೇವೆ ಆರಂಭ
ಇಂಡಿಗೋ ಮತ್ತು ಸ್ಟಾರ್ ಏರ್ ಹುಬ್ಬಳ್ಳಿಯಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ಮೈಸೂರು, ಮಂಗಳೂರು ಮತ್ತು ನವದೆಹಲಿಗೆ ವಿಮಾನ ಸೇವೆಗಳನ್ನು ನಡೆಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಇದು ಪ್ರಯಾಣಿಕರಿಗೆ ಬಹಳ ಅನುಕೂಲಕರವಾಗಿರಲಿದೆ.
ಇನ್ನು ಪುಣೆಗೆ ಈಗ ವಾರಕ್ಕೆ ಎರಡು ಬಾರಿ ವಿಮಾನ ಸೇವೆ ಇದೆ. ಕೇವಲ
ಶನಿವಾರ ಮತ್ತು ಭಾನುವಾರದಂದು ಇದ್ದ ಈ ವಿಮಾನವನ್ನು ಈಗ ಪ್ರತಿದಿನ ಆರಂಭಿಸಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ನಗರಗಳಿಗೆ ಸಹ ವಿಮಾನ ಸೇವೆ ಒದಗಿಸಲಾಗುತ್ತದೆ.
ಮಾರ್ಚ್ 12ರಿಂದ ಆರಂಭ
ಸದ್ಯದ ಮಾಹಿತಿ ಪ್ರಕಾರ ಇಂಡಿಗೋ ತನ್ನ ದೈನಂದಿನ ವಿಮಾನವನ್ನು ಪುಣೆಗೆ ಮಾರ್ಚ್ 13ರಿಂದ ಹಾರಾಟ ಆರಂಭಿಸಲಿದೆ, ಇದರ ನಂತರ ಗೋವಾ, ಕೊಚ್ಚಿನ್, ಜೋಧ್ಪುರ ಸೇರಿದಂತೆ ಅಹಮದಾಬಾದ್ ಮತ್ತು ಇತರ ನಗರಗಳಿಗೆ ವಿಮಾನ ಹಾರಾಟ ಆರಂಭ ಮಾಡಲಾಗುತ್ತದೆ ಎಂದು ಇಂಡಿಗೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹುಬ್ಬಳ್ಳಿ ಹಾಗೂ ಪುಣೆ ವಿಮಾನ ಸೇವೆಯು ಉತ್ತರ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಟ್ಟು ಈ ವಿಮಾನ ಸೇವೆಯ ಆರಂಭದಿಂದ ವ್ಯವಹಾರಿಕವಾಗಿ ಪ್ರಯಾಣ ಮಾಡುವವರಿಗೆ ಬಹಳ ಸಹಾಯವಾಗುತ್ತದೆ.
ಇದನ್ನೂ ಓದಿ: ಮಾರ್ಚ್ 6 ರಿಂದ ಧಾರವಾಡ-ಬೆಳಗಾವಿ ರೈಲು ಆರಂಭ, ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್
ಒಟ್ಟಾರೆಯಾಗಿ ನಗರದಲ್ಲಿ ಒಂದೆಲ್ಲಾ ಒಂದು ರೀತಿಯಲ್ಲಿ ನಗರ ಬೆಳವಣಿಗೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರ ನಗರಗಳಿಗೆ ವಿಮಾನ ಸೇವೆ ಆರಂಭಿಸಿದರೆ, ಇನ್ನೂ ದೊಡ್ಡ ಮಟ್ಟದಲ್ಲಿ ಆರ್ಥಿಕವಾಗಿ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಬೆಳವಣಿಗೆ ಆಗಲಿದೆ,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ