• Home
 • »
 • News
 • »
 • hubballi-dharwad
 • »
 • Hubballi News: ನಾಗಲಾವಿಯ ದರ್ಗಾ ಹಜರತ್ ಷರೀಫ್ ಉರೂಸ್​ಗಾಗಿ 2 ನಿಮಿಷ ನಿಲ್ಲಲಿವೆ 8 ರೈಲುಗಳು; ಭಕ್ತರಿಗೆ ಅನುಕೂಲ

Hubballi News: ನಾಗಲಾವಿಯ ದರ್ಗಾ ಹಜರತ್ ಷರೀಫ್ ಉರೂಸ್​ಗಾಗಿ 2 ನಿಮಿಷ ನಿಲ್ಲಲಿವೆ 8 ರೈಲುಗಳು; ಭಕ್ತರಿಗೆ ಅನುಕೂಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಮೂಲಕ ಸೌತ್ ವೆಸ್ಟರ್ನ್ ರೈಲ್ವೇ ವಿಭಾಗವು ನಾಗಲಾವಿಯ ದರ್ಗಾ ಹಜರತ್ ಷರೀಫ್ ಇಲ್ಲಿನ ಉರೂಸ್ ಕಾರ್ಯಕ್ರಮಕ್ಕೆ ಆಗಮಿಸುವರಿಗೆ ಸೌಲಭ್ಯ ಕಲ್ಪಿಸಿದೆ. 

 • News18 Kannada
 • Last Updated :
 • Hubli-Dharwad (Hubli), India
 • Share this:

  ಧಾರವಾಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಲಾವಿಯ ದರ್ಗಾ ಹಜರತ್ ಷರೀಫ್ ಇಲ್ಲಿನ ಉರೂಸ್ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿರುವ (Dharwad News) ಕ್ಷೇತ್ರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಮುಸ್ಲಿಮರಲ್ಲದೇ ಇತರೆ ಧರ್ಮೀಯರು ಆಗಮಿಸಲಿದ್ದಾರೆ. ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಇಲ್ಲಿನ ಉರೂಸ್ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ ಹರಕೆ ತೀರಿಸಲಿದ್ದಾರೆ. ಉರೂಸ್ ಹಿನ್ನೆಲೆಯಲ್ಲಿ ನವೆಂಬರ್ 5 ರಿಂದ 7 ರವರೆಗೆ ನಾಗಲಾವಿ ಹಾದು ಹೋಗುವ 8 ರೈಲುಗಳು ನಿಲ್ಲಲಿವೆ. 2 ನಿಮಿಷಗಳ ಕಾಲ ನಾಗಲಾವಿ ನಿಲ್ದಾಣದಲ್ಲಿ ನಿಲ್ಲಲಿರುವ ರೈಲು ಪ್ರಯಾಣಿಕರಿಗೆ ಅನುಕೂಲ ಉಂಟುಮಾಡಲಿದೆ.


  ಈ ಮೂಲಕ ಸೌತ್ ವೆಸ್ಟರ್ನ್ ರೈಲ್ವೇ ವಿಭಾಗವು ನಾಗಲಾವಿಯ ದರ್ಗಾ ಹಜರತ್ ಷರೀಫ್ ಇಲ್ಲಿನ ಉರೂಸ್ ಕಾರ್ಯಕ್ರಮಕ್ಕೆ ಆಗಮಿಸುವರಿಗೆ ಸೌಲಭ್ಯ ಕಲ್ಪಿಸಿದೆ.


  ಯಾವೆಲ್ಲ ರೈಲುಗಳು ಇಲ್ಲಿ ನಿಲ್ಲಲಿವೆ? ಇಲ್ಲಿದೆ ವಿವರ
  ನಾಗಲಾವಿ ಹಾದು ಹೋಗುವ ಛತ್ರಪತಿ ಶಾಹು ಮಹಾರಾಜ್ ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್‌ ಬೆಳಿಗ್ಗೆ 5.55ಕ್ಕೆ ತಲುಪಿ 2 ನಿಮಿಷ ಬಿಟ್ಟು 5.57 ಕ್ಕೆ ಹೊರಡಲಿದೆ.


  ಹುಬ್ಬಳ್ಳಿ-ಮೀರಜ್ ಡೈಲಿ ಎಕ್ಸ್‌ಪ್ರೆಸ್‌ ಕೂಡಾ ಮಧ್ಯಾಹ್ನ 12.06 ಕ್ಕೆ ನಾಗಲಾವಿ ತಲುಪಲಿದ್ದು, 12.08ಕ್ಕೆ ಹೊರಡಲಿದೆ.


  ಬೆಳಗಾವಿ- ಮೈಸೂರು ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ಬೆಳಿಗ್ಗೆ 6.50 ಕ್ಕೆ ನಾಗಲಾವಿ ತಲುಪಿ, 6.52 ಕ್ಕೆ ಹೊರಡಲಿದೆ.


  ಹುಬ್ಬಳ್ಳಿ-ದಾದರ್ ಡೈಲಿ ಎಕ್ಸ್‌ಪ್ರೆಸ್‌ ರೈಲು ನಾಗಲಾವಿಗೆ ಮುಂಜಾನೆ 4.10 ಕ್ಕೆ ತಲುಪಲಿದ್ದು ಬಳಿಕ 4.12 ಕ್ಕೆ ಹೊರಡಲಿದೆ.


  ಇದನ್ನೂ ಓದಿ: Good News: ಅಯ್ಯಪ್ಪ ಭಕ್ತರಿಗೆ ಶುಭಸುದ್ದಿ; ಉತ್ತರ ಕರ್ನಾಟಕದಿಂದ ವಿಶೇಷ ರೈಲು ಘೋಷಣೆ


  ದಾದರ್- ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್‌ ರೈಲು ಕೂಡಾ ಮುಂಜಾನೆ 10.14 ಕ್ಕೆ ನಾಗಲಾವಿಗೆ ತಲುಪಿ 10.16 ಕ್ಕೆ ಹೊರಡಲಿದೆ.


  ರಾಜ್ಯದ ಮೈಸೂರು-ಬೆಳಗಾವಿ ನಡುವೆ ಸಂಚರಿಸುವ ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ನಾಗಲಾವಿ ಸಂಜೆ 6.26 ಕ್ಕೆ ತಲುಪಿ, 2 ನಿಮಿಷ ತಂಗಲಿದೆ.


  ಮೀರಜ್ - ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು ಮಧ್ಯಾಹ್ನ 12.26 ಕ್ಕೆ ನಾಗಲಾವಿ ತಲುಪಿ ಬಳಿಕ 12.28 ಕ್ಕೆ ಹೊರಡಲಿದೆ.


  ಇದನ್ನೂ ಓದಿ: Hubballi: ಯಶ್-ರಾಧಿಕಾ ಪಂಡಿತ್ ಮಕ್ಕಳಿಗೆ ತೊಟ್ಟಿಲು ತಯಾರಾಗಿದ್ದುಇಲ್ಲೇ!


  ಇನ್ನು ತಿರುಪತಿ-ಛತ್ರಪತಿ ಶಾಹು ಮಹಾರಾಜ್ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್‌ ರೈಲು ಮುಂಜಾನೆ 9.13 ಕ್ಕೆ ನಾಗಲಾವಿ ತಲುಪಿ, 9.15 ಕ್ಕೆ ಮುಂದಿನ ನಿಲ್ದಾಣ ಕಡೆ ಹೊರಡಲಿದೆ.

  Published by:ಗುರುಗಣೇಶ ಡಬ್ಗುಳಿ
  First published: