Hubballi: ನರಕಯಾತನೆಯಿಂದ ನಾರ್ಮಲ್ ಸ್ಥಿತಿಗೆ ಬಂದ ಯುವಕ, ಹೊಂದಾಣಿಕೆಯಾಗದ ರಕ್ತದ ಗುಂಪಿನ‌ ಕಿಡ್ನಿ ಕಸಿ ಸಕ್ಸಸ್

ವೈದ್ಯರ ತಂಡದ ಜೊತೆ ಯುವಕ

ವೈದ್ಯರ ತಂಡದ ಜೊತೆ ಯುವಕ

ಅಭಿಷೇಕ್ ಎಂಬ ಯುವಕ ಕಳೆದ ಹತ್ತು ತಿಂಗಳಿನಿಂದ ಡಯಾಲಿಸಿಸ್ ಮಾಡಿಸಿಕೊಳ್ತಿದ್ದ. ಒಂದು ವರ್ಷದಿಂದ ಪ್ರಯತ್ನಿಸಿದರೂ ಕಿಡ್ನಿ ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಕಿಡ್ನಿ ದಾನಕ್ಕೆ ಹೆತ್ತ ತಾಯಿ ಮುಂದಾಗಿದ್ದಳು.

  • Share this:

ಹುಬ್ಬಳ್ಳಿ: ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿಯಾಗುವ ಮೂಲಕ  ಯುವಕನೋರ್ವ ಜೀವದಾನ (Lifeline) ಪಡೆದಿದ್ದಾನೆ. ಹೊಂದಾಣಿಕೆಯಾಗದ ರಕ್ತದ ಗುಂಪಿನ‌ ಕಿಡ್ನಿ ಕಸಿ ಮಾಡುವಲ್ಲಿ‌ ಹುಬ್ಬಳ್ಳಿಯ ಕಿಮ್ಸ್ ವೈದ್ಯರು (Hubballi KIMS Hospital) ಯಶಸ್ವಿಯಾಗಿದ್ದಾರೆ. ಬಿ ಪಾಸಿಟಿವ್ ರಕ್ತದ ಗುಂಪಿನ ಕಿಡ್ನಿ ಎ ಪಾಸಿಟಿವ್ ರಕ್ತದ ಗುಂಪಿಗೆ ಕಸಿ ಮಾಡಲಾಗಿದೆ. ಡಾ‌.ವೆಂಕಟೇಶ್ ಮೊಗೆರೆ ನೇತೃತ್ವದ ವೈದ್ಯರ ತಂಡ ಯಶಸ್ವಿ ಕಿಡ್ನಿ ಕಸಿ ಮಾಡಿದೆ.

ಅಭಿಷೇಕ್ ಎಂಬ ಯುವಕ ಕಳೆದ ಹತ್ತು ತಿಂಗಳಿನಿಂದ ಡಯಾಲಿಸಿಸ್ ಮಾಡಿಸಿಕೊಳ್ತಿದ್ದ. ಒಂದು ವರ್ಷದಿಂದ ಪ್ರಯತ್ನಿಸಿದರೂ ಕಿಡ್ನಿ ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಕಿಡ್ನಿ ದಾನಕ್ಕೆ ಹೆತ್ತ ತಾಯಿ ಮುಂದಾಗಿದ್ದಳು. ಸವದತ್ತಿಯ ಪದ್ಮಾವತಿ ಎಂಬ ಮಹಿಳೆಯಿಂದ ಮಗ ಅಭಿಷೇಕ್​ಗೆ ಕಿಡ್ನಿ ದಾನ‌ ಮಾಡಿದ್ದಾರೆ. ಆದರೆ ರಕ್ತದ ಗುಂಪು ಬೇರೆಯಾಗಿದ್ದರಿಂದ ತೊಡಕಾಗಿತ್ತು. ವಿವಿಧ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಕಡ್ನಿ ಕಸಿಗೆ ವೈದ್ಯರು ಮುಂದಾಗಿದ್ದರು.ಒಟ್ಟು ಸತತ ಮೂರು ತಾಸುಗಳ ಸರ್ಜರಿ ನಂತರ ಕಿಡ್ನಿ ಕಸಿ ಯಶಸ್ವಿಯಾಗಿದೆ.


ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿ ಚಿಕಿತ್ಸೆ
ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಹೊಂದಾಣಿಕೆಯಾಗದ ರಕ್ತದ ಗುಂಪಿನ‌ ಕಿಡ್ನಿ ಕಸಿ ನಡೆದಿದ್ದು, ವೈದ್ಯರ ತಂಡದ ಕಾರ್ಯಕ್ಕೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: Hubballi: ಪ್ರಯಾಣಿಕರ ಬೇಡಿಕೆ ಈಡೇರಿಸಿದ ಭಾರತೀಯ ರೈಲ್ವೆ, ಹುಬ್ಬಳ್ಳಿಯಿಂದ ವಿಶೇಷ ರೈಲು ಘೋಷಣೆ




ನರಕಯಾತನೆಯಿಂದ ನಾರ್ಮಲ್ ಸ್ಥಿತಿಗೆ ಬಂದ ಯುವಕ
ಕಿಡ್ನಿ ಕಸಿ ನಡೆದ ಮೂರು ದಿನಗಳಲ್ಲಿ ಯುವಕ ನಾರ್ಮಲ್ ಸ್ಥಿತಿಗೆ ಬಂದಿದ್ದಾನೆ. ಮೊದಲು ಕಿಡ್ನಿ ತೊಂದರೆಯಿಂದ ನರಕಯಾತನೆ ಆಗ್ತಿತ್ತು. ವೈದ್ಯರ ಪ್ರಯತ್ನದಿಂದ ಅದರಿಂದ ಮುಕ್ತಿ ಸಿಕ್ಕಿದೆ ಎಂದು ಯುವಕ ಅಭಿಷೇಕ್ ಸಂತಸ ವ್ಯಕ್ತಪಡಿಸಿದ್ದಾನೆ. ಕಿಡ್ನಿ ಎಲ್ಲಿಯೂ ಸಿಗದೇ ಇದ್ದಾಗ, ನಾನೇ ಕಿಡ್ನಿ ದಾನಕ್ಕೆ ಮುಂದಾಗಿದ್ದೆ. ಪ್ರತ್ಯೇಕ ಗುಂಪಿನದ್ದಾಗಿದ್ದರಿಂದ ತೊಂದರೆಯಾಗಿತ್ತು. ಆದರೆ ಕಿಮ್ಸ್ ವೈದ್ಯರು ಕಿಡ್ನಿ ಕಸಿ ಮಾಡಿ ಮಗನ ಜೀವ ಉಳಿಸಿದ್ದಾರೆ ಎಂದು ಯುವಕನ ತಾಯಿ ಪದ್ಮಾವತಿ ಕೃತಜ್ಞತೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: Raichur: ಗಡಿ ಜಿಲ್ಲೆಯಲ್ಲಿ ಲೈಬ್ರರಿ ಕ್ರಾಂತಿ! ಕನ್ನಡ ಬೆಳೆಸೋದು ಅಂದ್ರೆ ಇದೆ!


ಮೂತ್ರಪಿಂಡ ವಿಭಾಗ, ಮೂತ್ರಶಾಸ್ತ್ರ, ಅರವಳಿಕೆ, ರೋಗ ಶಾಸ್ತ್ರ ವಿಭಾಗದ ವೈದ್ಯರ ತಂಡ ವಿಶೇಷ ಶ್ರಮವಹಿಸಿ ಇಂತಹದೊಂದು ಸಾಧನೆ ಮಾಡಿದೆ‌. ಒಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯು ಸಾಕಷ್ಟು ಸಾಧನೆಯ ಮೂಲಕ ಜನಮನ್ನಣೆ ಪಡೆದ ಆಸ್ಪತ್ರೆಯಾಗಿದೆ. ಕೆಲವೊಮ್ಮೆ ಅವ್ಯವಸ್ಥೆಗಳ ಕಾರಣದಿಂದಲೂ ಸುದ್ದಿಯಾಗಿದೆ. ಅದೇನೇ ಇರಲಿ ಇಲ್ಲಿನ ವೈದ್ಯಕೀಯ ಸೇವೆ ಮಾತ್ರ ಶ್ಲಾಘನೀಯವಾಗಿದೆ. ಕಿಮ್ಸ್ ವೈದ್ಯರ ಕಾರ್ಯಕ್ಕೆ ಜನತೆಯಿಂದಲೂ ಮೆಚ್ಚುಗೆ ಪಡೆದಿದೆ.

top videos


    ವರದಿ: ಶಿವರಾಮ ಅಸುಂಡಿ, ನ್ಯೂಸ್ 18, ಹುಬ್ಬಳ್ಳಿ

    First published: