Hubballi Dharwad: ಅವಳಿ ನಗರದಲ್ಲಿ ನೀರು ಪೂರೈಕೆ ಬಂದ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀರು ಸರಬರಾಜು ಹಂಗಾಮಿ ನೌಕರರ ಈ ಪ್ರತಿಭಟನೆಗೆ ಅವಳಿ ನಗರದ ಜನತೆ ಸಹಕರಿಸಬೇಕೆಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮನವಿ ಮಾಡಿದ್ದಾರೆ.

 • News18 Kannada
 • 2-MIN READ
 • Last Updated :
 • Hubli-Dharwad (Hubli), India
 • Share this:

  ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರಮುಖ ಎರಡು ನಗರಗಳಲ್ಲಿ (Hubballi Dharwad Water Supply) ಒಂದು ದಿನದ ಮಟ್ಟಿಗೆ ನೀರು ಸರಬರಾಜು ಇರುವುದಿಲ್ಲ. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಮುನ್ನವೇ ಸಂಗ್ರಹಿಸಿಟ್ಟುಕೊಳ್ಳುವುದು (Water Supply Problem) ಒಳಿತು. ಹಾಗಾದರೆ ಯಾವ ನಗರಗಳಿವು? ಇಲ್ಲಿದೆ ವಿವರ.


  ಹುಬ್ಬಳ್ಳಿ- ಧಾರವಾಡ ಈ ಅವಳಿ ನಗರಗಳಲ್ಲಿ ಫೆಬ್ರವರಿ 13ರಂದು ನೀರು ಸರಬರಾಜು ಬಂದ್ ಆಗಲಿದೆ. ಇಡೀ ದಿನ ನೀರು ಪೂರೈಕೆ ಇರುವುದಿಲ್ಲ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಿಗೆ ಸವದತ್ತಿ ಹಾಗೂ ಅಮ್ಮಿನಬಾವಿ ನೀರು ಶುದ್ಧೀಕರಣ ಘಟಕ ಹಾಗೂ ಸರಬರಾಜು ಕೇಂದ್ರಗಳಿಂದ ನೀರು ಪೂರೈಕೆಯಾಗುತ್ತದೆ.


  ಜಾಕ್​ವೆಲ್ ಬಂದ್!
  "ಆದರೆ ಫೆಬ್ರವರಿ 13ರಂದು ಈ ಘಟಕದ ಜಾಕ್​ವೆಲ್ ಬಂದ್ ಮಾಡಲಾಗುವುದು. ಹೀಗಾಗಿ ಹುಬ್ಬಳ್ಳಿ-ಧಾರವಾಡಕ್ಕೆ ನೀರಿನ ಪೂರೈಕೆ ಇರುವುದಿಲ್ಲ" ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಹೇಳಿಕೆ ನೀಡಿದ್ದಾರೆ.


  ನೀರು ಸರಬರಾಜು ಹಂಗಾಮಿ ನೌಕರರ ಪ್ರತಿಭಟನೆ
  ಹುಬ್ಬಳ್ಳಿ - ಧಾರವಾಡ ಅವಳಿ ನಗರ ನೀರು ಸರಬರಾಜು ಹಂಗಾಮಿ ನೌಕರರ ಪ್ರತಿಭಟನೆಯ ನಿಮಿತ್ತ ನೀರು ಪೂರೈಕೆ ಬಂದ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.


  ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ


  ಅಮರಣಾಂತ ಪ್ರತಿಭಟನೆಯ ನಂತರ ಈ ನಿರ್ಧಾರ
  ಕಳೆದ 11 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ್ದೆವು. ಈಗ ಸರದಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ. ದಿನಕ್ಕೆ 10 ರಿಂದ 15 ಜನರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಈವರೆಗೂ ಸಹ ಪಾಲಿಕೆ, ಜಿಲ್ಲಾಡಳಿತದ ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸಹ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ತಿಳಿಸಿದರು.


  ಇದನ್ನೂ ಓದಿ: Hubballi Airport: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರು?
  ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸಲು ಯೋಚನೆ
  ನಾವು ಕೇವಲ ಉಪವಾಸ ಸತ್ಯಾಗ್ರಹ ಮಾಡಿದ್ರೆ ಇವರು ಕಣ್ಣು ತೆರೆಯುವುದಿಲ್ಲ. ಹೀಗಾಗಿ ಫೆಬ್ರವರಿ 13 ರಂದು ಅಮ್ಮಿನಬಾವಿ ಹಾಗೂ ಸವದತ್ತಿಯ ಜಾಕ್​ವೆಲ್ ಬಂದ್ ಮಾಡುತ್ತೇವೆ. ನಮ್ಮ‌ ಪ್ರತಿಭಟನೆಯನ್ನುತೀವ್ರಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.


  ಇದನ್ನೂ ಓದಿ: Traffic Fine: "ಎಷ್ಟ್ ಹಣ ಇದ್ರೂ ಸಾಕಾಗ್ತಿಲ್ಲ!" ಬೈಕ್ ಸವಾರರಿಗೆ ಡಬಲ್ ಶಾಕ್!


  ಅವಳಿ ನಗರದ ಜನತೆಗೆ ಸಹಕರಿಸಲು ಮನವಿ
  ಪ್ರತಿಭಟನೆಯ ಕಾರಣದಿಂದ ಒಂದು ದಿನದ ಮಟ್ಟಿಗೆ ನೀರು ಶುದ್ಧೀಕರಣ ಮತ್ತು ಪೂರೈಕೆ ಕೇಂದ್ರದ ಜಾಕ್​ವೆಲ್‌ ಬಂದ್ ಮಾಡುತ್ತೇವೆ. ಇದರಿಂದ ನೀರು ಸರಬರಾಜು ಬಂದ್ ಆಗಲಿದೆ. ನೀರು ಸರಬರಾಜು ಹಂಗಾಮಿ ನೌಕರರ ಈ ಪ್ರತಿಭಟನೆಗೆ ಅವಳಿ ನಗರದ ಜನತೆ ಸಹಕರಿಸಬೇಕೆಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮನವಿ ಮಾಡಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು