Dharwad: ಮದುವೆ, ಮಕ್ಕಳು ಆಗದಿದ್ರೆ ತಪ್ಪದೇ ಕಾಮಣ್ಣನ ಆಶೀರ್ವಾದ ಪಡೆಯಿರಿ! ಈ ಊರಲ್ಲಿದೆ ದೇಗುಲ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೋಳಿ ಹುಣ್ಣಿಮೆಯಿಂದ ಐದು ದಿನಗಳ ಕಾಲ ಇಲ್ಲಿ ದೇವರ ದರ್ಶನ ಸಿಗುತ್ತೆ. ಮದುವೆಯಾಗದವರು ಬಾಸಿಂಗ ತಂದು, ಇಲ್ಲಿ ಪೂಜೆ ಮಾಡಿಸಿಕೊಂಡು ಮನೆಯಲ್ಲಿಟ್ಟರೆ ಅವರಿಗೆ ಕಂಕಣ ಭಾಗ್ಯ ಪಕ್ಕಾ ಅನ್ನೋದು ಭಕ್ತರ ನಂಬಿಕೆ.

  • News18 Kannada
  • 3-MIN READ
  • Last Updated :
  • Dharwad, India
  • Share this:

    ಧಾರವಾಡ: ಸಾಲು ಸಾಲಾಗಿ ನಿಂತಿರೋ ಭಕ್ತರು, ಸುಂದರವಾಗಿ ಅಲಂಕರಿಸಿರೋ ದೇವರಿಗೆ ಭಕ್ತಿಯ ನಮನ, ಭಕ್ತಿಯಿಂದ ತಂದಿರೋ ಬಗೆ ಬಗೆಯ ಹೂವು-ಹಣ್ಣು ಸಮರ್ಪಣೆ, ಇದನ್ನೆಲ್ಲಾ ನೋಡಿದರೆ ಸಾಮಾನ್ಯ ಅನ್ನಿಸಬಹುದು. ಆದರೆ ಇದು ಸಾಮಾನ್ಯ ದೇವಸ್ಥಾನವಲ್ಲ! ಬದಲಿಗೆ ಶಿವನ (Lord Shiva) ತಪಸ್ಸನ್ನು ಭಂಗಪಡಿಸಿ, ಆತನ ಸಿಟ್ಟಿಗೆ (Holi 2023) ಗುರಿಯಾಗಿ ಸುಟ್ಟು ಹೋದ ಕಾಮದೇವನ (Kamadeva Temple) ದೇವಸ್ಥಾನ.


    ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿರೋ ರಾಮಲಿಂಗ ಕಾಮದೇವನ ದೇವಸ್ಥಾನ ದಕ್ಷಿಣ ಕರ್ನಾಟಕದಲ್ಲಿಯೇ ಪ್ರಸಿದ್ಧ. ಹೋಳಿ ಹುಣ್ಣಿಮೆಯಿಂದ ಐದು ದಿನಗಳ ಕಾಲ ಇಲ್ಲಿ ದೇವರ ದರ್ಶನ ಸಿಗುತ್ತೆ. ಈ ಅವಧಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕಾಮದೇವನ ದರ್ಶನ ಪಡೆದು ಹೋಗುತ್ತಾರೆ.




    ಹಗಲು ರಾತ್ರಿ ಎನ್ನದೇ ದರ್ಶನಕ್ಕೆ ಕ್ಯೂ
    ಈ ಕಾಮದೇವರ ದರ್ಶನ ಮಾಡಿದರೆ ತಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಅನ್ನೋದು ಜನರ ನಂಬಿಕೆ. ಹೀಗಾಗಿ ಹಗಲು ರಾತ್ರಿ ಎನ್ನದೇ ಜನರು ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ಕಳೆದ ಮೂರು ವರ್ಷಗಳಿಂದ ಕಾಮಣ್ಣನ ದರ್ಶನಕ್ಕೆ ಬರುತ್ತಿದ್ದೆವೆ. ನಮ್ಮ ಇಷ್ಟಾರ್ಥಗಳು ಇಡೇರಿವೆ ಎನ್ನುತ್ತಾರೆ ಭಕ್ತರು.


    ಮದುವೆ, ಮಕ್ಕಳು ಆಗದಿದ್ರೆ ಇಲ್ಲೇ ಬರ್ತಾರೆ!
    ಈ ರಾಮಲಿಂಗ ಕಾಮದೇವನಿಗೆ ನಡೆದುಕೊಂಡರೆ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರುತ್ತೆ, ಮನೆ ನಿರ್ಮಾಣ ಕೆಲಸ ಹೀಗೆ ಹಲವು ಬೇಡಿಕೆಗಳು ಇಡೇರುತ್ತವೆ ಅನ್ನೊ ನಂಬಿಕೆಯಿದೆ.


    ಹೀಗಾಗಿ ಮಕ್ಕಳಾಗದವರು ಬೆಳ್ಳಿಯ ಸಣ್ಣ ತೊಟ್ಟಿಲು ತಂದು, ಇಲ್ಲಿ ಪೂಜೆ ಮಾಡಿಸಿಕೊಂಡು ಊರಿಗೆ ತೆಗೆದುಕೊಂಡು ಹೋಗುತ್ತಾರೆ. ಇದೇ ರೀತಿ ಮದುವೆಯಾಗದವರು ಬಾಸಿಂಗ ತಂದು,ಇಲ್ಲಿ ಪೂಜೆ ಮಾಡಿಸಿಕೊಂಡು ಮನೆಯಲ್ಲಿಟ್ಟರೆ ಅವರಿಗೆ ಕಂಕಣ ಭಾಗ್ಯ ಪಕ್ಕಾ ಅನ್ನೋದು ಭಕ್ತರ ನಂಬಿಕೆ.


    ಇದನ್ನೂ ಓದಿ: Holi 2023: ಇವರೇ ಚಿಗುರು ಮೀಸೆಯ ಮನ್ಮಥ, ಸುಂದರ ಕಾಂತಿಯ ರತಿಯ ಸೃಷ್ಟಿಕರ್ತರು!




    ಆರೋಗ್ಯ ಭಾಗ್ಯವೂ ವೃದ್ಧಿಸುತ್ತಂತೆ!
    ಅಷ್ಟೇ ಅಲ್ಲ, ಅನಾರೋಗ್ಯ ಪೀಡಿತರು ಬೆಳ್ಳಿಯ ಕುದುರೆ, ಬೆಳ್ಳಿಯ ಕಣ್ಣು, ಪಾದುಕೆಗಳನ್ನು ತಂದು ಪೂಜಿಸಿದರೆ, ಅವರಿಗೆ ಆರೋಗ್ಯ ಭಾಗ್ಯ ವೃದ್ಧಿಸುತ್ತೆ ಅನ್ನೋ ನಂಬಿಕೆಯೂ ಇಲ್ಲುಂಟು.


    Ramaling Kamanna Temple
    ಕಾಮಣ್ಣದ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ:ಗೂಗಲ್ ಮ್ಯಾಪ್ಸ್)


    ಇದನ್ನೂ ಓದಿ: Hubballi: ಗಲ್ಲಾಪೆಟ್ಟಿಗೆ ಮೇಲೆ ಕುಳಿತು ಹೋಟೆಲ್ ನಡೆಸುತ್ತೆ ಗಿಳಿ!


    ಜೊತೆಗೆ ತಮ್ಮ ಬೇಡಿಕೆ ಈಡೇರಿದ ಬಳಿಕ ಮತ್ತೆ ಬರೋ ಭಕ್ತರು ತೊಟ್ಟಿಲು, ಬಾಸಿಂಗ ದೇವನಿಗೆ ಅರ್ಪಿಸಿ ಹೋಗುತ್ತಾರೆ. ಇನ್ನು ತಮ್ಮ ಇಷ್ಟಾರ್ಥ ಈಡೇರಿಸಿದ ಕಾಮಣ್ಣನ ಸೇವೆಗೆ ಅಂತಾನೇ ಪ್ರತಿವರ್ಷ ಅನೇಕರು ಬರುತ್ತಾರೆ.


    ವರದಿ: ಮಂಜುನಾಥ ಯಡಳ್ಳಿ, ನ್ಯೂಸ್ 18 ಧಾರವಾಡ

    Published by:ಗುರುಗಣೇಶ ಡಬ್ಗುಳಿ
    First published: