Dharwad News: ಈ ಕೆರೆ ಸೇರುತ್ತಿದೆ ಇಡೀ ನಗರದ ಅರ್ಧ ಚರಂಡಿ ನೀರು

ಕಲುಷಿತವಾದ ಕೆರೆ

ಕಲುಷಿತವಾದ ಕೆರೆ

ಪಾಲಿಕೆ ವ್ಯಾಪ್ತಿಗೆ ಕೆರೆ ಬರುತ್ತಿದ್ದು, ಆದರೆ ಕೆರೆಯ ನೀರನ್ನು ಕೃಷಿ ವಿಶ್ವವಿದ್ಯಾಲಯ ಬಳಸುತ್ತಿದೆ. ಈ ಕಾರಣದಿಂದ ಇಬ್ಬರಿಂದಲೂ ಸರಿಯಾಗಿ ಕೆರೆಯ ನಿರ್ವಹಣೆ ಆಗುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.  

  • News18 Kannada
  • 4-MIN READ
  • Last Updated :
  • Dharwad, India
  • Share this:

ಧಾರವಾಡ: ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯಲ್ಲಿ ಮೀನುಗಳ ಮಾರಣ ಹೋಮವಾಗಿದೆ. ವಿಶ್ವೇಶ್ವರಯ್ಯನವರು ಮಾಡಿದ ವಿನ್ಯಾಸದಲ್ಲಿ ನಿರ್ಮಾಣ ಆಗಿರುವ ನೂರು ಎಕರೆ ವಿಸ್ತಾರದ ಐತಿಹಾಸಿಕ ಕೆರೆಗೆ (Historical Lake)  ನೇರವಾಗಿ ಚರಂಡಿ ನೀರು ಸೇರುತ್ತಿದೆ. ಇದರಿಂದಾಗಿ (Dharwad News) ಮೀನುಗಳು ಕೆರೆಯಲ್ಲಿ ಮೃತಪಟ್ಟು ತೇಲಾಡುತ್ತಿವೆ. ಮೀನುಗಳ ಸಾವಿನಿಂದ ಕೆರೆ ಆವರಣದಲ್ಲಿ ಗಬ್ಬು ವಾಸನೆ ರಾಚುತ್ತಿದೆ. ವಾಕಿಂಗ್ ಮಾಡುವುದಕ್ಕೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.


ಮಹಾನಗರ ಪಾಲಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ಜಗ್ಗಾಟದ ಮಧ್ಯೆ ಕೆರೆ ನಿರ್ವಹಣೆ ಮತ್ತು ಅಭಿವೃದ್ಧಿ ನಿರ್ಲಕ್ಷ್ಯವಾಗಿದೆ.
ಕೆರೆ ನಿರ್ವಹಣೆ ಯಾರ ಜವಾಬ್ದಾರಿ?
ಪಾಲಿಕೆ ವ್ಯಾಪ್ತಿಗೆ ಕೆರೆ ಬರುತ್ತಿದ್ದು, ಆದರೆ ಕೆರೆಯ ನೀರನ್ನು ಕೃಷಿ ವಿಶ್ವವಿದ್ಯಾಲಯ ಬಳಸುತ್ತಿದೆ. ಈ ಕಾರಣದಿಂದ ಇಬ್ಬರಿಂದಲೂ ಸರಿಯಾಗಿ ಕೆರೆಯ ನಿರ್ವಹಣೆ ಆಗುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.  
ಹದಗೆಟ್ಟು ಹೋದ ವಾತಾವರಣ
ಇಷ್ಟು ದಿನ ಕೆರೆಗೆ ಚರಂಡಿ ನೀರು ಸೇರುತ್ತಿರಲಿಲ್ಲ. ಆದರೆ ಈಗ ಅವೈಜ್ಞಾನಿಕವಾಗಿ ಅರ್ಧ ಧಾರವಾಡದ ಚರಂಡಿ ನೀರು ಕೆರೆಗೆ ಸೇರ್ಪಡೆಯಾಗುತ್ತಿದೆ. ಇದರಿಂದ ಕೆರೆಯ ವಾತಾವರಣ ಹದಗೆಟ್ಟು ಹೋಗಿದೆ. ಕೆರೆಯ ಸುತ್ತ ಸತ್ತು ಬಿದ್ದಿರೊ ಮೀನುಗಳು, ಕಲುಷಿತವಾಗಿರೊ ಕೆರೆಯ ನೀರು, ಕೆರೆಗೆ ಸೇರುತ್ತಿದೆ ಧಾರವಾಡದ ಹಲವು ಭಾಗದ ನಗರಗಳ ಚರಂಡಿ. ಇದರಿಂದ ಕೆರೆಯಲ್ಲಿನ‌ ಮೀನುಗಳು ದಿನ‌ನಿತ್ತ ಸಾಯತೊಡಗಿವೆ.
ಸಾಮಾನ್ಯ ಮಳೆ‌ನೀರು ಕೆರೆಗೆ ಸೇರಿ ಕೆರೆ ತುಂಬ ಬೇಕು. ಅದರಿಂದ ಪಕ್ಷಿ ಪ್ರಾಣಿಗಳಿಗೆ ಹಾಗೂ ಜಲಚರ ಜೀವಿಗಳಿಗೆ ಅನುಕೂಲವಾಗುತ್ತದೆ. ಆದರೆ ಅದೇ ಕೆರೆಯ ನೀರು ಹಾಳಾದರೆ ಎಷ್ಟೆಲ್ಲಾ ಜೀವಿಗಳು ಪ್ರಾಣ ಕಳೆದುಕೊಳ್ಳುತ್ತವೆ ಎಂಬುದನ್ನು ನೋಡಿದಾಗಲೇ ಅರ್ಥವಾಗುತ್ತದೆ. ನಗರ ಅಂದಗೊಳಿಸಲು ಹೋಗಿ ಚರಂಡಿ ನೀರನ್ನು ಕೆರೆಗಳಿಗೆ ಹೋಗುವಂತೆ ಮಾಡುತ್ತಿದೆ ಪಾಲಿಕೆ. ಇದರಿಂದ ನಗರಗಳಲ್ಲಿನ‌ಕೆರೆಗಳು ಅದೋಗತಿಗೆ ಸೇರಿವೆ. ಆದರೆ ತನ್ನದೇ ಆದ ಇತಿಹಾಸ ಹೊಂದಿರುವ ಕೆಲಗೇರಿ ಕೆರೆಗೆ ಸಹ ಈಗ ಅವಸಾನದ ಹಾದಿ ಹಿಡಿದಿದೆ.


ಇದನ್ನೂ ಓದಿ: Dharwad News: ಆಂಜನೇಯನ ದೇಗುಲದಲ್ಲಿ ಎಕ್ಕೆ ಹೂವಿನ ಸ್ವಾಗತ, ಸುವಾಸನೆ ಇಲ್ದಿದ್ರೂ ಇದೆ ಸಖತ್ ಸಂಪಾದನೆ!


ಸಾರ್ವಜನಿಕರಿಗಾಗಿ ಪಾಲಿಕೆ ಕೆರೆಯ ಸುತ್ತ ವಾಕಿಂಗ್ ಪಾರ್ಕ್ ನಿರ್ಮಾಣ ಮಾಡಿದೆ. ನಿತ್ಯವು ನೂರಾರು ಜನರು ಮುಂಜಾನೆ ಹಾಗೂ ಸಂಜೆ ವಾಕಿಂಗ್ ಮಾಡುತ್ತಾರೆ. ಈಗ ಕೆರೆಯಲ್ಲಿ ಮೀನುಗಳ ಸತ್ತು ತೇಲಾಡುತ್ತ ಕೆರೆಯ ಸುತ್ತ ಬಿದ್ದಿವೆ ಇದರಿಂದ ಗಬ್ಬುವಾಸನೆ ಬರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡೆ ವಾಕಿಂಗ್ ಮಾಡಬೇಕಾಗಿದೆ.
ಇದನ್ನೂ ಓದಿ: Cobra Bikes In Mangaluru: ಬೀ ಅಲರ್ಟ್‌! ಈ ಬೈಕ್​ಗಳೇ ಟ್ರಾಫಿಕ್ ಸಮಸ್ಯೆಗೆ ರಾಮಬಾಣ


ಧಾರವಾಡದಲ್ಲಿ ಇತಿಹಾಸ ಹೊಂದಿದ ಕೆರೆಗಳಲ್ಲಿ ಕೆಲಗೇರಿ ಕೆರೆಯು ಒಂದು, ನಗರದ ಹೊರ ಭಾಗದಲ್ಲಿ ಇರೋದ್ರಿಂದ ಸ್ವಚ್ಛಂದ ಗಾಳಿ ಇಲ್ಲಿದೆ. ಇವಾಗ ಇದರಿಂದ ನಗರದಿಂದ ಜನರು ಇಲ್ಲಿಗೆ ವಾಕಿಂಗ್‌ ಮಾಡಲು ಬರುತ್ತಾರೆ. ಆದರೆ ಈ ವರ್ಷ ಕೆರೆಗೆ ಚರಂಡಿ ನೀರು ಬಿಟ್ಟಿರುವ ಕಾರಣ ಕೆರೆಯ ನೀರು ಕಲುಷಿತವಾಗಿ ಮೀನುಗಳು‌ ಸಾಯುತ್ತಿವೆ. ಅಲ್ಲದೇ ಕೆರೆಯ ಸುತ್ತ ಗಬ್ಬುವಾಸನೆ ಬರುತ್ತಿದೆ.‌ ಕೂಡಲೇ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿ‌ ಚರಂಡಿ ನೀರು ಕೆರೆಗೆ ಸೇರದಂತೆ ಹಾಗೂ ಮೀನುಗಳ ಮಾರಣಹೋಮ‌ ತಪ್ಪಿಸಬೇಕಿದೆ ಎಂದು ಸ್ಥಳೀಯರಾದ ಮಂಜುನಾಥ ಹಿರೇಮಠ ಒತ್ತಾಯ ಮಾಡುತ್ತಿದ್ದಾರೆ.

First published: