• Home
  • »
  • News
  • »
  • hubballi-dharwad
  • »
  • Dharwad News: ಕೇರಳದ ದಾರಿ ಹಿಡಿದ ಧಾರವಾಡ ಜಿಲ್ಲಾ ಪಂಚಾಯತ್!

Dharwad News: ಕೇರಳದ ದಾರಿ ಹಿಡಿದ ಧಾರವಾಡ ಜಿಲ್ಲಾ ಪಂಚಾಯತ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಯೋಜನೆಯಡಿ ಜನರೇ ತಮ್ಮ ಗ್ರಾಮದ ಮುಂದಿನ ಐದು ವರ್ಷಗಳ ಯೋಜನೆಗಳನ್ನು ಸಿದ್ಧಪಡಿಸಬಹುದಾಗಿದೆ!

  • Share this:

    ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯತ್ ಜನಸಾಮಾನ್ಯರ ಜೊತೆ ಇನ್ನಷ್ಟು ಬೆರೆಯಲು ವಿನೂತನ ಕಾರ್ಯವೊಂದನ್ನು ಆರಂಭಿಸಿದೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಸ್ವತಃ ಜನರೇ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಧಾರವಾಡ ಜಿಲ್ಲಾ ಪಂಚಾಯತ್ (Dharwad Zilla Panchayat) ಕೇರಳ ಸರ್ಕಾರದ ನೀತಿಯಂತೆ (Kerala Government) ಸಹಭಾಗಿತ್ವ ಯೋಜನೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಜನರನ್ನು ಗ್ರಾಮ ಪಂಚಾಯತ್​ಗಳಿಗೆ (Grama Panchayat) ಹತ್ತಿರವಾಗಿಸುವ ನಿಟ್ಟಿನಲ್ಲಿ ಈ ವಿನೂತನ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ.


    ಈ  ವಿನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಸದ್ಯ ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮ ಪಂಚಾಯತ್​ನಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯಲ್ಲಿ ಗುಂಪು ಚರ್ಚೆ, ಗ್ರಾಮೀಣ ಮೌಲ್ಯಮಾಪನ ಮತ್ತು ಇತರ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಜನರೇ ತಮ್ಮ ಗ್ರಾಮದ ಮುಂದಿನ ಐದು ವರ್ಷಗಳ ಯೋಜನೆಗಳನ್ನು ಸಿದ್ಧಪಡಿಸಬಹುದಾಗಿದೆ.


    ಅಭಿವೃದ್ಧಿ ಹೇಗಾಗಬೇಕು? ಗ್ರಾಮಸ್ಥರೇ ನಿರ್ಧರಿಸುತ್ತಾರೆ!
    ಸುಸ್ಥಿರ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು. ಅಂಕಿ ಅಂಶಗಳ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮಸ್ಥರು ನಿರ್ಧರಿಸುತ್ತಾರೆ ಎಂದು ಎಂದು ಧಾರವಾಡ ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.


    ಜನವರಿಯಲ್ಲಿ ಇಡೀ ಜಿಲ್ಲೆಯಲ್ಲಿ
    ಜನವರಿ ಅಂತ್ಯದ ವೇಳೆಗೆ ಧಾರವಾಡ ಜಿಲ್ಲೆಯ ಎಲ್ಲ 141 ಗ್ರಾಮ ಪಂಚಾಯತ್​ಗಳಲ್ಲಿ ಪರ್ಸ್ಪೆಕ್ಟಿವ್ ಪ್ಲಾನಿಂಗ್ ವ್ಯವಸ್ಥೆ ಜಾರಿಯಾಗಲಿದೆ ಎಂದು ಅವರು ಖಚಿತಪಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಮೂಲಗಳ ಪ್ರಕಾರ ಈ ಯೋಜನೆ ವ್ಯವಸ್ಥೆಯು ಅಭಿವೃದ್ಧಿ ನಿಧಿಯ ಉತ್ತಮ ಬಳಕೆಗೆ ಸಹಾಯ ಮಾಡುತ್ತದೆ. ಹೊಸ ಯೋಜನಾ ವ್ಯವಸ್ಥೆಯಿಂದ ಪ್ರತಿ ಇಲಾಖೆಗೂ ಲಾಭವಿದೆ.


    ಇದನ್ನೂ ಓದಿ: Vande Bharat Express: ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್​ಪ್ರೆಸ್ ಸ್ಪೀಡ್ ಬಗ್ಗೆ ಮಹತ್ವದ ಅಪ್​ಡೇಟ್ ಬಹಿರಂಗ


    ಗ್ರಾಮಸ್ಥರಲ್ಲಿ ಹೆಚ್ಚಾಗುತ್ತಿದೆ ಉತ್ಸಾಹ
    ಯಾದವಾಡ ಗ್ರಾ.ಪಂ.ಪಿಡಿಒ ಆರ್.ಜಿ.ಚಲವಾದಿ ಮಾತನಾಡಿ, ಈ ಹೊಸ ಯೋಜನೆಗೆ ಪಂಚಾಯತ್ ಆಯ್ಕೆಯಾದ ಕಾರಣ ಯಾದವಾಡದಲ್ಲಿ ಎಲ್ಲರೂ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಹಿರೇಮಠ ಇತರ ಚುನಾಯಿತ ಸದಸ್ಯರೊಂದಿಗೆ ಸೇರಿ ಗ್ರಾಮದ ಎಲ್ಲ ಜನರೊಂದಿಗೆ ಸಮಾಲೋಚನೆ ನಡೆಸಿ ಐದು ವರ್ಷಗಳ ಯೋಜನೆ ಸಿದ್ಧಪಡಿಸಿದ್ದಾರೆ.


    ಇದನ್ನೂ ಓದಿ: Positive Story: ಬ್ಯಾಡಗಿ ಮೆಣಸಿಗೆ ಬಂಗಾರದ ಬೆಲೆ; ಖಾರದಿಂದಲೂ ಸಿಕ್ತು ಸಿಹಿ!


    ಗ್ರಾಮದಲ್ಲಿ, ಶಿಕ್ಷಣ ಮತ್ತು ಆರೋಗ್ಯದ ಸರ್ವಾಂಗೀಣ ಅಭಿವೃದ್ಧಿಗೆ ಜನರು ಸಲಹೆ ನೀಡಿದ್ದಾರೆ. ಸದ್ಯ ಊರಿನ ನಾಗರಿಕರ ಸಲಹೆ ಆಧರಿಸಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಯೋಜನೆ ಮಂಜೂರಾತಿಗಾಗಿ ವಾರ್ಡ್ ಸಭೆ ಮತ್ತು ಗ್ರಾಮಸಭೆಯ ಮುಂದೆ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು