ಧಾರವಾಡ: ನಾಯಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ನೋಡಿದ ತಕ್ಷಣ ಮುದ್ ಮಾಡ್ಬೇಕು ಅಂತನಿಸೋ ಈ ನಾಯಿ ಹೆಸ್ರು ಚಾರ್ಲಿ (Charlie) ಅಂತಾನೇ. ಜನರೇ ಜನರಿಗೆ ಸಹಾಯ ಮಾಡಲ್ಲ ಅನ್ನೋ ಈಗಿನ ಕಾಲದಲ್ಲಿ ಈ ಮುದ್ದು ಮುದ್ದಾದ ಜರ್ಮನ್ ಶೆಫರ್ಡ್ ನಾಯಿ (German Shepherd Dog) ಮಾಡಿರೋ ಅದ್ಭುತ ಕೆಲಸಕ್ಕೆ ನೀವು ಹ್ಯಾಟ್ಸಾಫ್ ಹೇಳಲೇಬೇಕು! ಅಂದ್ಹಾಗೆ ಚಾರ್ಲಿ ಅನ್ನೋ ಈ ನಾಯಿ ರಕ್ತದಾನ ಮಾಡೋ (Dog Blood Donation) ಮಹಾಕಾರ್ಯ ಮಾಡಿದೆ. ಅದೂ ಎರಡು ಸಲ ರಕ್ತ ನೀಡಿದೆ ಈ ಚಾರ್ಲಿ. ಇದ್ರಿಂದ ಧಾರವಾಡದಲ್ಲೇ (Dharwad) ವರ್ಲ್ಡ್ ಫೇಮಸ್ಸು ಚಾರ್ಲಿ!
ಇನ್ನೊಂದು ಶ್ವಾನಕ್ಕೆ ಜೀವದಾನ
ಧಾರವಾಡದಲ್ಲಿ ಒಬ್ರು ಡಾಕ್ಟರ್ ಸಾಕಿರೋ ನಾಯಿಗೆ ತುಂಬಾ ಸೀರಿಯಸ್ ಆಗಿತ್ತು. ಅರ್ಜೆಂಟ್ ರಕ್ತ ಬೇಕಿತ್ತು. ಇಡೀ ಊರು ತುಂಬಾ ರಕ್ತಕ್ಕೆ ಅಲೆದಾಡಿದ್ರು. ಎಲ್ಲೂ ಸಿಕ್ದೇ ಇದ್ದಾಗ ದೇವ್ರಂತೆ ಸಿಕ್ಕಿದ್ದೇ ನಮ್ ಚಾರ್ಲಿ. ಚಾರ್ಲಿನ ಸಾಕಿರೋ ಸೋಮಶೇಖರ್ ಚನ್ನಶೆಟ್ಟಿ ಅವ್ರು ನಾಯಿಗೆ ರಕ್ತದಾನ ಮಾಡೋಕೆ ಒಪ್ಕೊಂಡ್ರು.
ಇದನ್ನೂ ಓದಿ: Uttara Kannada: ಅಡಿಕೆ ಕೊಳೆರೋಗಕ್ಕೆ ಮನೆಮದ್ದು! ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್
ಪ್ರಾಣಿ ಪ್ರೇಮಿ ಸೋಮಶೇಖರ್
ಮೂಲತಃ ಸೋಮಶೇಖರ್ ಅವರು ಕೂಡಾ ಪ್ರಾಣಿ ಪ್ರೇಮಿಯೇ. ಎಲ್ಲೇ ಪ್ರಾಣಿಗಳು ಕಷ್ಟದಲ್ಲಿರೋದು ಗೊತ್ತಾಗ್ಲಿ ರಕ್ಷಣೆಗೆ ಇಳಿದೇ ಬಿಡ್ತಾರೆ. ಹಾಗಾಗಿಯೇ ರಕ್ತದಾನ ಮಾಡಿ 45 ದಿನಕ್ಕೆಲ್ಲ ನಾಯಿಗಳಿಗೆ ರಕ್ತ ರಿಕವರಿ ಆಗುತ್ತಂತೆ. ಮತ್ತೇನೂ ಅಪಾಯ ಇಲ್ಲ ಅಂತ ತಿಳಿದಿದ್ದರು. ಅದಕ್ಕೇ ನೋಡಿ ಊರಲ್ಲಿ ಯಾರೂ ಮಾಡದಿರೋ ಕೆಲಸಕ್ಕೆ ಇಳಿದೇ ಬಿಟ್ರು.
ಇದನ್ನೂ ಓದಿ: Success Story: ಇದು ಶಾಲೋದ್ಯಮ! ಮಹಿಳೆಯರ ಬಾಳು ಬೆಳಗಿದ ಶಾಲು!
ಪೊಲೀಸ್ ನಾಯಿಗೂ ಮರುಜನ್ಮ!
ಮತ್ತೊಂದು ಸಲ ಪೊಲೀಸ್ ನಾಯಿಗೂ ರಕ್ತದ ಅಗತ್ಯವಿತ್ತು. ಈ ಸಮಯದಲ್ಲೂ ಚಾರ್ಲಿ ಹಿಂದೆ ಮುಂದೆ ನೋಡ್ದೇ ರಕ್ತದಾನ ಮಾಡಿದೆ. ಆವಾಗಿಂದ ನಮ್ ಚಾರ್ಲಿ ಧಾರವಾಡದಲ್ಲಿ ಬೀದಿಗಿಳಿದರೆ ಎಲ್ರೂ ಸಲಾಂ ಹಾಕ್ತಾರಂತೆ.
ವರದಿ: ಎ.ಬಿ.ನಿಖಿಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ