ಹುಬ್ಬಳ್ಳಿ-ಧಾರವಾಡ ನಾಗರಿಕರಿಗೆ ಒಂದೊಳ್ಳೆ ಸುದ್ದಿಯೊಂದು ಹೊರಬಿದ್ದಿದೆ. ಅವಳಿ ನಗರದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ನಗರ (Hubballi Dharwad News) ಪಾಲಿಕೆ ಹೊಸ ಯೋಜನೆಯೊಂದು ಜಾರಿಗೆ ತಂದಿದೆ. ಹುಬ್ಬಳ್ಳಿ (Hubballi News) ಧಾರವಾಡ ಅವಳಿ ನಗರದ ಜನತೆಗೆ ಮನೆ ಬಾಗಿಲಲ್ಲೇ ಹೊಸ ಸೌಲಭ್ಯವನ್ನು ಕಲ್ಪಿಸಿಕೊಡಲು ನಗರ ಪಾಲಿಕೆ (Dharwad News) ಮುಂದಾಗಿದೆ.
ಜನನ ಅಥವಾ ಮರಣ ದಾಖಲೆಯನ್ನು ಪಡೆಯಲು ಅವಳಿ ನಗರದ ಜನತೆಗೆ ಮಧ್ಯವರ್ತಿಗಳ ಕಾಟ ಹೆಚ್ಚಾಗಿತ್ತು. ಅಲ್ಲದೇ ಇಂಟರ್ನೆಟ್ ಸಮಸ್ಯೆ, ಸರ್ವರ್ ಡೌನ್ ಮುಂತಾದ ಸಮಸ್ಯೆಗಳಿಂದ ಸಾರ್ವಜನಿಕರು ಹೈರಾಣುಗುತ್ತಿದ್ದರು.
ಎಲ್ಲ ಸಮಸ್ಯೆಗೆ ಫುಲ್ ಸ್ಟಾಪ್!
ಆದರೆ ಇದೀಗ ಈ ಎಲ್ಲ ಸಮಸ್ಯೆಗೆ ಪೂರ್ಣವಿರಾಮ ನೀಡಲು ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಮುಂದಾಗಿದೆ. ಅಂಚೆ ಇಲಾಖೆಯ ಸಹಯೋಗದಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಮನೆ ಬಾಗಿಲಿಗೇ ತಲುಪಿಸಲು ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಯೋಜನೆ ರೂಪಿಸಿದೆ.
ಕೇವಲ 20 ರೂ. ಶುಲ್ಕ
ಈ ಯೋಜನೆಯ ಲಾಭ ಪಡೆಯಲು ಸಾರ್ವಜನಿಕರು ನಿಗದಿತ ಅರ್ಜಿಯಲ್ಲಿ ಜನನದ ಮಾಹಿತಿ, ದಾಖಲೆ ಹಾಗೂ ಮನೆ ವಿಳಾಸವನ್ನು ಅಂಚೆ ಕಚೇರಿಗೆ ಒದಗಿಸಬೇಕು. 20 ರೂಪಾಯಿ ಸೇವಾ ಶುಲ್ಕ ಪಾವತಿಸಿದರೆ ಕಚೇರಿ ಸಿಬ್ಬಂದಿ ಅರ್ಜಿ ಪರಿಶೀಲಿಸಿ, ಪ್ರಮಾಣಪತ್ರವನ್ನು ಮುದ್ರಿಸುತ್ತಾರೆ.
ಇದನ್ನೂ ಓದಿ: Kalaghatagi: ದೇವಿ ಅಡ್ಡಾಡ್ತಾಳೆ ಎಂದು ಇಡೀ ಊರು ಬಂದ್! ಯುಗಾದಿವರೆಗೂ ಸೂತಕದ ಛಾಯೆ
2 ದಿನಕ್ಕೇ ಮನೆ ಬಾಗಿಲಿಗೆ ಬರುತ್ತೆ!
ಅಂಚೆ ಇಲಾಖೆಯ ಸಿಬ್ಬಂದಿ ಸ್ಪೀಡ್ ಪೋಸ್ಟ್ ಲಕೋಟೆಗೆ ಹಾಕಿ ಅರ್ಜಿದಾರರ ವಿಳಾಸಕ್ಕೆ ಎರಡು ದಿನಗಳಲ್ಲಿ ತಲುಪಿಸುತ್ತಾರೆ. ಜನನ ಪ್ರಮಾಣಪತ್ರ 2 ದಿನದಲ್ಲಿ, ಮರಣ ಪ್ರಮಾಣಪತ್ರ 3 ದಿನಗಳಲ್ಲಿ ಅರ್ಜಿದಾರರ ಮನೆ ತಲುಪಲಿದೆ.
ಇದನ್ನೂ ಓದಿ: Hubballi News: ಉತ್ತರ ಕರ್ನಾಟಕದ ನಾಗರಿಕರಿಗೆ ಖುಷಿ ಸುದ್ದಿ ನೀಡಿದ BSNL
ಈ ವೆಬ್ಸೈಟ್ನಲ್ಲಿ ದೊರೆಯುತ್ತೆ ಮಾಹಿತಿ
ಅಲ್ಲದೇ ವೆಬ್ಸೈಟ್ನಲ್ಲಿ ನಿಮ್ಮ ಅರ್ಜಿಯ ಸಕಲ ಮಾಹಿತಿ ದೊರೆಯಲಿದೆ. ಜನನ ಮತ್ತು ಮರಣ ಪ್ರಮಾಣಪತ್ರ ನಿಮ್ಮನ್ನು ತಲುಪುವವರೆಗೂ ನೀವು ಅದು ಎಲ್ಲಿದೆ ಎಂದು ಟ್ರ್ಯಾಕ್ ಮಾಡಬಹುದಾಗಿದೆ. ಈ ಮೂಲಕ ಸಾರ್ವಜನಿಕರು ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯುವ ಸಮಸ್ಯೆ ನಿವಾರಣೆಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಪಾಲಿಕೆ ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ