ಧಾರವಾಡ: ದಾರಿಯುದ್ದಕ್ಕೂ ಇರೋ ಅಂಗಡೀಲಿ ಅರ್ಕ ಪುಷ್ಪಗಳದ್ದೇ ಹೂವಿನ ಮಾಲೆ. ಇಲ್ಲಿರೋ ಆಂಜನೇಯನಿಗೂ (Lord Anjaneya) ಎಕ್ಕೆ ಮಾಲೆಯೇ ಶ್ರೇಷ್ಠ. ದೇವರ ಪ್ರೀತಿಗೆ ಕಾರಣವಾಗೋ ಹೂ ವ್ಯಾಪಾರಿಗಳ (Flower Sellers) ಕೈ ಹಿಡಿದಿದೆ. ಅವ್ರ ಬದುಕಿಗೂ ಒಂದು ದಾರಿ ತೋರಿದೆ.
ಅರ್ಕ ಪುಷ್ಪದ ಸ್ವಾಗತ
ಯೆಸ್, ಅರ್ಕ ಪುಷ್ಪ ಅಥವಾ ಎಕ್ಕೆಯ ಹೂವಿನ ಸಾಲು ಧಾರವಾಡದ ನುಗ್ಗಿಕೇರಿಯ ಆಂಜನೇಯನ ಸನ್ನಿಧಾನಕ್ಕೆ ಬಂದರೆ ನಿಮ್ಮನ್ನು ದಾರಿಯುದ್ದಕ್ಕೂ ಸ್ವಾಗತಿಸುವಂತಿದೆ. ಇಲ್ಲಿರುವ ಆಂಜನೇಯನಿಗೆ ಈ ಎಕ್ಕೆ ಮಾಲೆಯೇ ಶ್ರೇಷ್ಠ. ಹಾಗಾಗಿ ದೇಗುಲ ಸುತ್ತಲೂ ಈ ಎಕ್ಕೆ ಮಾಲೆಯ ಮೂಲಕವಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಕನಿಷ್ಠ ಹದಿನೈದಿಪ್ಪತ್ತು ಪರಿವಾರಗಳಿವೆ.
ಭರ್ಜರಿ ಮಾಲೆ ಮಾರಾಟ
ಅರ್ಕ ಪುಷ್ಪ ಅಥವಾ ಎಕ್ಕೆ ಹೂವಿಗೆ ಯಜ್ಞ ಯಾಗಾದಿ, ವಿಶೇಷ ದಿನಗಳಲ್ಲಿ ವಿಶೇಷ ಸ್ಥಾನಮಾನವೂ ಇದೆ. ಅಂತೆಯೇ ನುಗ್ಗಿಕೇರಿಯ ಆಂಜನೇಯನಿಗೂ ಈ ಎಕ್ಕ ಹೂವಿನ ಮಾಲೆಯೇ ಹೆಚ್ಚು ಬಳಕೆಯಾಗೋದ್ರಿಂದ ಪ್ರತಿ ಶನಿವಾರ ಒಂದು ಸಾವಿರದಷ್ಟು ಮಾಲೆಗಳು ಇಲ್ಲಿ ಮಾರಾಟವಾಗುತ್ತವೆ.
ಇದನ್ನೂ ಓದಿ: Banashankari Temple History: ಬನಶಂಕರಿ ದೇವಿಯ ಹೆಸರಿನ ಹಿಂದಿದೆ ಈ ವಿಶೇಷ ಅರ್ಥ!
ಉಳಿದ ದಿನಗಳಲ್ಲಿ 200 ರಿಂದ 300 ಮಾಲೆಗಳು ಮಾರಾಟವಾಗುತ್ತವೆ. ಹಾಗೂ 20 ರೂಪಾಯಿಗೆ ಸಣ್ಣ ಮಾಲೆ ಹಾಗೂ 30 ರೂಪಾಯಿಗೆ ದೊಡ್ಡ ಮಾಲೆಯನ್ನು ಇಲ್ಲಿ ಮಾರಲಾಗುತ್ತದೆ.
ಹೂ ವ್ಯಾಪಾರಿಗಳ ಲಕ್!
ಸುವಾಸನೆ ಇರದ ಈ ಹೂವು ಕೂಡ ಇಲ್ಲಿರುವ ಹಲವು ಕುಟುಂಬಗಳಿಗೆ ಸಂಪಾದನೆಯ ಮೂಲವಾಗಿದೆ. ಬೆಳಿಗ್ಗೆ 4 ಗಂಟೆಯಿಂದಲೇ ಹುಬ್ಬಳ್ಳಿ-ಧಾರವಾಡ ಹಾಗೂ ಗದಗವರೆಗೆ ಹೋಗಿ ಹೂವುಗಳನ್ನು ತಂದು ಅದನ್ನು ಎರಡು ಮೂರು ನಿಮಿಷದಲ್ಲಿ ಸೇವಂತಿಗೆ ಸೇರಿಸಿ ಹೆಣೆಯಲಾಗುತ್ತದೆ.
ಇದನ್ನೂ ಓದಿ: Hubballi Girmit: ಹುಬ್ಬಳ್ಳಿ ಗಿರ್ಮಿಟ್ ಯಾಕಷ್ಟು ಫೇಮಸ್? ಇಲ್ಲಿದೆ ಟೇಸ್ಟಿ ರೆಸಿಪಿ
ಇವರ ಒಟ್ಟೂ ಆದಾಯ ಉಳಿದ ದಿನಕ್ಕೆ ಹೋಲಿಸಿದರೆ ಶನಿವಾರ ಜಾಸ್ತಿ. ಅದೊಂದೇ ದಿನ ಇವರು ಮಾಲೆಯಿಂದಲೇ ಸಾವಿರಾರು ರೂಪಾಯಿ ಗಳಿಸುತ್ತಾರೆ. ಹೀಗೆ ಆಂಜನೇಯನ ಕೃಪೆಯೂ ಹೂ ವ್ಯಾಪಾರಿಗಳ ಮೇಲಿದ್ದು ಬದುಕಿಗೂ ದಾರಿ ತೋರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ