ಹಾವೇರಿ: "ಬಾರೋ.. ನೀನಾ ನಾನಾ ಒಂದು ಕೈ ನೋಡೆಬಿಡ್ತೇನಿ. ಅದು ಹೇಗೆ ಗೆಲ್ತೀಯಾ ಅಂತಾ ನಾನು ನೋಡ್ತೇ ಬಿಡ್ತೇನಿ ಬಾ" ಎನ್ನುತ್ತಾ ಹೀಗೆ ಕೈ ಕೈ ಮಿಲಾಯಿಸಿರುವ ಪರಿಣತ ಕುಸ್ತಿ ಕಲಿಗಳು. ಹೌದು, ಹಾವೇರಿ ಜಿಲ್ಲೆಯ (Haveri) ಶಿಗ್ಗಾವಿ ಪಟ್ಟಣದಲ್ಲಿ ನಡೆದ ಕುಸ್ತಿಯ ಕಲಿಗಳು (Wrestling Match) ಪಂದ್ಯಾಟದ ದೃಶ್ಯಗಳಿವು.
ಐದು ದಿನಗಳ ಕಾಲ ನಡೆಯುವ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯವನ್ನ ಇದೇ ಮೊದಲ ಬಾರಿಗೆ ಹಾವೇರಿಯಲ್ಲಿ ಆಯೋಜನೆ ಮಾಡಲಾಗಿತ್ತು.
ವಿವಿಧ ರಾಜ್ಯಗಳ ಕುಸ್ತಿಪಟುಗಳ ಕದನ!
ಅಖಾಡಕ್ಕೆ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪೈಲ್ವಾನರು ಆಗಮಿಸಿದ್ದರು. 1 ಕೋಟಿ 38 ಲಕ್ಷ ಮೊತ್ತದ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಹೋರಾಡಿದ ಪರಿ ಕಂಡು ಅಭಿಮಾನಿಗಳು ಸಂಭ್ರಮಿಸಿದರು.
ಇದನ್ನೂ ಓದಿ: Haveri Viral News: ಕುದುರೆ ಏರಿ ಬಂದು ಬಜೆಟ್ ಮಂಡನೆ!
800 ಕ್ಕೂ ಅಧಿಕ ಪೈಲ್ವಾನರ ಕಾದಾಟ
80 ಕೆಜಿ, 60 ಕೆಜಿ, 30-40 ಕೆಜಿ ತೂಕದ ಪೈಲ್ವಾನರು ಅಖಾಡಕ್ಕೆ ಧುಮುಕಿದರು. ಫಿಟ್ ಆ್ಯಂಡ್ ಫೈನ್ ಆಗಿದ್ದ ಕಟ್ಟುಮಸ್ತಾದ ಪಟುಗಳು ತಿಂಗಳುಗಳ ಕಾಲ ದೇಹ ದಂಡಿಸಿ ಈ ಪಂದ್ಯಾಟದಲ್ಲಿ ಸೆಣಸಾಡಿದರು.
ಇದನ್ನೂ ಓದಿ: Haveri: ಈ ಜೈಲಿನಲ್ಲಿ ಖೈದಿಗಳಿಗೆ ಬೇಜಾರೇ ಆಗಲ್ಲ, ರಾಜ್ಯ ಪ್ರಶಸ್ತಿ ವಿಜೇತ ಸೆಲ್ ಇದು
ಯುವಕರು ಹಾಗೂ ಯುವತಿಯರು ಸೇರಿದಂತೆ ಸುಮಾರು 800 ಕ್ಕೂ ಅಧಿಕ ಪೈಲ್ವಾನರು ಪಂದ್ಯಾವಳಿಯಲ್ಲಿ ಪಾಲ್ಗೊಂಡು ಹಾವೇರಿಯ ಜನರನ್ನು ರಂಜಿಸಿದರು.
ವರದಿ: ರಮೇಶ್ ಬಿ ಎಚ್, ನ್ಯೂಸ್ 18 ಕನ್ನಡ, ಹಾವೇರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ