,ಮ ಘಮ ಪರಿಮಳ ಸೂಸುತ್ತಿರೋ ಏಲಕ್ಕಿ ಮಾಲೆಗಳು. ಮತ್ತೆ ಮತ್ತೆ ಸೆಳೆಯುವ ಮೂಗಿಗೆ ಅಡರುವ ಅಪರೂಪದ ಕಂಪು! ಹಾವೇರಿಯಲ್ಲಿ ಸಿದ್ದಗೊಂಡಿವೆ ಸಾವಿರಾರು ಏಲಕ್ಕಿ ಸಾವಿರಾರು ಮಾಲೆಗಳು! ಹಾವೇರಿಯಲ್ಲಿ (Haveri News) ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಏಲಕ್ಕಿ (Cardamom) ಮಾಲೆಗಳನ್ನು ತಯಾರಿಸಲಾಗುತ್ತಿದೆ.
₹150 ರಿಂದ ₹10,000 ತನಕ ಬೆಲೆಬಾಳುವ ಏಲಕ್ಕಿ ಮಾಲೆಗೆ ಪುಲ್ ಡಿಮ್ಯಾಂಡ್ ಬಂದಿದೆ. ಭಾವೈಕ್ಯತೆ ಸಂದೇಶ ಸಾರುತ್ತಿರುವ ಏಲಕ್ಕಿ ಮಾಲೆಗಳು ಕಣ್ಮನ ಸೆಳೆಯುತ್ತಿವೆ. ಅಲ್ಲದೇ ಈ ಏಲಕ್ಕಿ ಮಾಲೆಗಳು 20ಕ್ಕೂ ಹೆಚ್ಚು ಕುಟುಂಬಗಳಿಗೆ ಕೆಲಸವನ್ನೂ ಒದಗಿಸಿವೆ.
ಇದನ್ನೂ ಓದಿ: Banashankari Temple: ಇವ್ರೇ ನೋಡಿ ಸಾಲುಮಂಟಪದ ಅನ್ನಪೂರ್ಣೇಶ್ವರಿಯರು!
ಗಮನ ಸೆಳೆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ
ಈ ಪೈಕಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಸ್ಮಾನ ಪಟೆಗಾರ ಎಂಬ ಕಲಾವಿದರು ಗಮನ ಸೆಳೆಯುತ್ತಿದ್ದಾರೆ. 1000 ರಿಂದ 1200 ಮಾಲೆ ಹಾಗೂ ಪೇಟಗಳನ್ನು ತಯಾರು ಮಾಡಿಟ್ಟಿರುವ ಉಸ್ಮಾನ್ ಹೆಚ್ಚಿನ ಲಾಭದ ನಿರೀಕ್ಷೆಯಿಲ್ಲದೇ ಸೇವೆಯ ರೂಪದಲ್ಲಿ ಕೆಲಸ ಮಾಡ್ತಿರುವುದಾಗಿ ಹೇಳ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೂ ಹಾರ!
ಉಸ್ಮಾನ್ ಅವರು ತಯಾರಿಸಿರೋ ಏಲಕ್ಕಿ ಹಾರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೂ ತೊಡಿಸಲಾಗಿದೆ. ಅಲ್ಲದೇ ಇವರು ತಯಾರಿಸೋ ಹಾರ ವಿದೇಶಗಳಿಗೂ ರಫ್ತಾಗುತ್ತೆ ಅನ್ನೋದು ವಿಶೇಷ.
ವರದಿ: ರಮೇಶ್, ಬಿ.ಎಚ್, ನ್ಯೂಸ್ 18 ಕನ್ನಡ ಹಾವೇರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ