ಹಾವೇರಿ: ಹಬ್ಬ ಹರಿದಿನ, ಜಾತ್ರೆಗಳಲ್ಲಿ ರಾಜಕಾರಣಿಗಳ, ಮಹಾತ್ಮರ, ದೇವರ ಬ್ಯಾನರ್ ಹಾಕೋದನ್ನ ನೋಡಿದ್ದೇವೆ. ಆದ್ರೆ ದೇವಿ ಜಾತ್ರೆಗೆ ಬಾಲಿವುಡ್ ನಟಿಯೊಬ್ಬರ ಅಭಿಮಾನಿಗಳು ಕೋರಿರೋ ಸ್ವಾಗತ ಫುಲ್ ವೈರಲ್ (Haveri Viral Video) ಆಗ್ತಿದೆ.
ಉತ್ತರ ಕರ್ನಾಟಕದ ಹೆಸರಾಂತ ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿಗಳಿಂದ ಆದರದ ಸ್ವಾಗತ ಕೋರಲಾಗಿದೆ.
ಸೀರೆಯುಟ್ಟು ನಿಂತ ಸನ್ನಿ ಲಿಯೋನ್
ಐತಿಹಾಸಿಕ ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಸನ್ನಿ ಪ್ಯಾನ್ಸ್ ವೆಲ್ಕಮ್ ಪೋಸ್ಟರ್ ಹಾಕಿದ್ದಾರೆ. ಜಾತ್ರೆಯ ಸಾವಿರಾರು ಫ್ಲೆಕ್ಸ್ಗಳ ಮಧ್ಯೆ ಸೀರೆಯುಟ್ಟು ನಿಂತ ಸನ್ನಿ ಲಿಯೋನ್ ಬ್ಯಾನರ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: Arecanut Farmers: ಅಡಿಕೆ ತೋಟದಲ್ಲಿ ಡ್ರೋನ್ ಸದ್ದು! ಎಲೆಚುಕ್ಕಿ ರೋಗಕ್ಕೆ ಹೊಸ ಪರಿಹಾರ!
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ನಡೆಯುತ್ತಿರುವ ಅದ್ದೂರಿ ಜಾತ್ರೆಯಲ್ಲೇ ಈ ವೈರಲ್ ಆಗಿರೋ ಸ್ವಾಗತದ ಬೋರ್ಡ್ ಹಾಕಲಾಗಿದೆ. ಬ್ಯಾನರ್ನಲ್ಲಿ ಫೋಟೋ ಜೊತೆಗೆ ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ. ಬಡ ಮಕ್ಕಳ ಆಶಾಕಿರಣ ಸನ್ನಿ ಲಿಯೋನ್ ಅಭಿಮಾನಿಗಳು ರಾಣೇಬೆನ್ನೂರು ಎಂದು ಬರೆಯಲಾಗಿದೆ.
ಇದನ್ನೂ ಓದಿ: Jobs In Kuwait: ಕುವೈತ್ನಲ್ಲಿ ಭಾರೀ ಉದ್ಯೋಗಾವಕಾಶ, ಇಲ್ಲಿದೆ ಸಂಪೂರ್ಣ ವಿವರ
ಸದ್ಯ ಸನ್ನಿ ಲಿಯೋನ್ ಅಭಿಮಾನಿಗಳು ಹಾಕಿದ ಈ ಬೋರ್ಡ್ ಭಾರೀ ವೈರಲ್ ಆಗುತ್ತಿದೆ.
ಮಾಹಿತಿ, ವಿಡಿಯೋ: ರಮೇಶ್, ನ್ಯೂಸ್ 18 ಕನ್ನಡ ಹಾವೇರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ