Gayatri Temple Tadas: ದಕ್ಷಿಣ ಭಾರತದ ಏಕೈಕ ಗಾಯತ್ರಿ ದೇಗುಲ! ತಡಸದಲ್ಲಿದೆ ತಪೋಭೂಮಿ!

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸನಾಗ ಬರೋಬ್ಬರಿ 22 ವರ್ಷದ ಹಿಂದ್ ಕಟ್ಟಿದ್ ಈ ತಪೋಭೂಮಿ ಭಾರತದ ಎರಡನೇ ಗಾಯತ್ರಿ ತಪೋಭೂಮಿ, ಮೊದನಲೆದು ಹರಿದ್ವಾರದಾಗ ಐತ್ರಿ. ಹಾಗಾಗಿ ದಕ್ಷಿಣ ಭಾರತದ ಎಲ್ಲಾ ಗಾಯತ್ರಿ ಭಕ್ತ್ರು ಇಲ್ಲೇ ಬರ್ತಾರ ನೋಡ್ರಿ!

ತಡಸದ ಗಾಯತ್ರಿ ತಪೋಭೂಮಿ

"ತಡಸದ ಗಾಯತ್ರಿ ತಪೋಭೂಮಿ"

 • Share this:
  ದಕ್ಷಿಣ ಭಾರತದ ಏಕೈಕ ಗಾಯತ್ರಿ ತಪೋಭೂಮಿ (Gayatri Tapobhumi) ಬಗ್ಗೆ ನಿಮಗೆಷ್ಟು ಗೊತ್ತು? ಹಾವೇರಿ, ಹುಬ್ಬಳಿ ಮಂದಿ ಅದಾರಲ್ಲ ಭಾಳ್ ಬಿಸಿಲಿನ್ಯಾಗ ಬೆಂದು ಬೆಂದು ಬಿರಸ್ ಆಗಿರ್ತಾರ ಅದಕ್ಕ ಅವರ ಭಾಳ ಕಡಕ್! ಅಂತಾ ಮಂದಿ ನಡುವ ಚೂರು ಮನಶ್ಶಾಂತಿ ಇರಲಿ ಅಂತಾನೋ, ಇಲ್ಲಿರೋ ಜನಕ್ ಮಂಗಳ ಆಗಲಿ ಅಂತಾನೋ ಗಾಯತ್ರಿ ತಾಯಿ ತಪೋಭೂಮಿನ (Gayatri Temple Tadas) ಇಲ್ಲಿ ಕಟ್ಟಿಸ್ಯಾರ! ಎಲ್ಲಿ? ಅಂತ ನೀವ್ ಕೇಳಿದ್ರ ಎಲ್ಲಿಂದ ನೀವ್ ಹುಬ್ಳಿ-ಹಾವೇರಿ (Hubballi-Haveri)ಕಡೆ ಮುಖ ಮಾಡ್ತೀರೋ ಅಲ್ಲೇ ತನ್ನ ಮುಖಾರವಿಂದದ ದರ್ಶನ ಕೊಡ್ತಾಳ ತಡಸನಾಗ (Tadas) ತಾಯಿ ಗಾಯತ್ರಿ!

  ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸನಾಗ ಬರೋಬ್ಬರಿ 22 ವರ್ಷದ ಹಿಂದ್ ಕಟ್ಟಿದ್ ಈ ತಪೋಭೂಮಿ ಭಾರತದ ಎರಡನೇ ಗಾಯತ್ರಿ ತಪೋಭೂಮಿ, ಮೊದನಲೆದು ಹರಿದ್ವಾರದಾಗ ಐತ್ರಿ. ಹಾಗಾಗಿ ದಕ್ಷಿಣ ಭಾರತದ ಎಲ್ಲಾ ಗಾಯತ್ರಿ ಭಕ್ತ್ರು ಇಲ್ಲೇ ಬರ್ತಾರ ನೋಡ್ರಿ!

  ಹಾರು ಸ್ಥಾಪಿಸಿದ್ದು ಗೊತ್ತೇನ್ರೀ?
  ಪರಮಪೂಜ್ಯ ವಲ್ಲಭ ಚೈತನ್ಯ ಗುರುಗಳ ಕೋಟಿ ಗಾಯತ್ರಿ ಜಪ ಮುಗದ ಮ್ಯಾಲೆ ಭಕ್ತಗಣ ಅವರಿಗೊಂದ್ ಆಶ್ರಮ ಮಾಡಿಕೊಟ್ರ್, ಅವರ ಸಂಕಲ್ಪದಿಂದ ಇಲ್ಲಿ ಫೆಬ್ರುವರಿ 17 2000 ದಾಗ ಗಾಯತ್ರಿ ಮೂರ್ತಿ ಪ್ರತಿಷ್ಠಾಪನೆ ಆತ್, ಇದ್ ಸಾಧಕರಿಗೆ ಸಿದ್ಧಿ ಕೊಡೋ ಸ್ಥಳ ಆದ್ರೂ ಹಳ್ಳಿ ಊರಿನ ಸಾಮಾನ್ಯ ಜನ ಬಂದ್ ತಮ್ ಕಷ್ಟನ ತಾಯಿ ಮುಂದ್ ಹೇಳ್ತಾರ, ಅದಕ್ಕ ಫಲನೂ ಸಿಗ್ತೇತಿ, ತಾಯಿ "ಗುರು"ಗಳಿಗೆ ತಯಾರಿ ಮಾಡೋಕ ಎಷ್ಟ್ ಕರುಣೆ ತೋರ್ತಾಳೋ ಅಷ್ಟ "ಲಘು"ನ ಒಲ್ದ ಬಡ-ಬಗ್ಗ ರೈತರಿಗೂ ಒಲಿತಾಳ.

  ವಿಶೇಷ ಹೀಗೆಲ್ಲ ಐತ್ರಿ
  ದಿನಕ್ ದಿನ ಬೆಲ್ಲ ಕಂಡ ಇರವಿ ಹಂಗ ಇಲ್ಲಿ ಜನ ಬರೋದ್ ಜಾಸ್ತಿನ ಆಕೇತಿ, ದಿನ ತ್ರಿಕಾಲ ಅನ್ನದಾನ ನಡೆಸೋ ಪುಣ್ಯಸ್ಥಳ ಇದು, ಗೋಶಾಲೆ ಅದ ಆಕಳಕ್ಕೂ ಆಲಯ ಮಾಡಿಕೊಟ್ಟ ಕೀರ್ತಿ ಇಲ್ಲಿ ಜನದ್ದು, ಇನ್ ಎಷ್ಟೋ ಮಂದಿ ವಟುಗಳು ಇಲ್ಲಿ ಬಂದು ಉಚಿತ ವೇದಶಿಕ್ಷಣ ಪಡೀತಾರ್ರೀ, ಉಚಿತ ಶಾಲೆ,ಆಸ್ಪತ್ರಿನೂ ಅದ ಮೇಲಾಗಿ ದಾನ-ಧರ್ಮದೊಳಗ ಗಾಯತ್ರಿ ಟ್ರಸ್ಟ್ ಎಂದೂ ಹಿಂದ್ ಬಿದ್ದಿಲ್ಲ!

  ಮಠಾನ ಕಟ್ಟಿ ಬೆಳಸುತ್ತಿದ್ದಾರೆ
  ಪೂಜೆ ತ್ರಿಕಾಲ ಪೂಜೆ ನಡೀತದ. ಇಲ್ಲಿ ಬೀಸೋ ಗಾಳಿಗೆ ಹವಿಸ್ಸಿನ ಕೊರತೆ ಇಲ್ಲ ನೋಡ್ರಿ, ಅಷ್ಟು ದೈವ-ದೇವತೆಗಳು ಪ್ರಸನ್ನರಾಗೋ ಹಂಗ ಹವಿಸ್ಸನ್ನ ಯಾಗ-ಯಜ್ಞದ ಮೂಲಕ ದಿನಾ ಬಡಸ್ತಾರ. ಗಿಜಗುಡೋ ಹುಬ್ಳಿ-ಹಾವೇರಿಗೆ ಹೊರತಾಗಿ ಇದೊಂದ್ ಗೀಜಗನ ಗೂಡು ನೋಡ್ರಿ ಇಲ್ಲಿ ಯಾವುದೇ ರಾಜಕೀಯದ ಜಂತು ಹೊಕ್ಕಲಾರದ ಹಾಗ ಟ್ರಸ್ಟ್ ಹಾಗೂ ಭಕ್ತಗಣ ಏಕೋಭಾವದಿಂದ ಶೃದ್ಧಾಭಕ್ತಿಯಿಂದ ಮಠಾನ ಕಟ್ಟಿ ಬೆಳಸಾತ್ತಾರ.

  ಜಾತ್ರಿ ಅಂತೂ ಅದ್ಭುತ!
  ಇನ್ನ ಜಾತ್ರಿ-ವರ್ಧಂತಿ ಅಂತೂ ಅದ್ಭುತ ನವರಾತ್ರಿ, ದೀಪಾವಳಿ, ಕಾರ್ತಿಕ ಅಂತ ಯಾವ್ದ ಹಬ್ಬ ಬಂದ್ರೂ ತಪೋಭೂಮಿ ಥಳ ಥಳ ಬಂಗಾರದಂಗ ಹೊಳಿತೈತಿ.
  ದೇವಸ್ಥಾನಇಲ್ಲಿ ಇರೋದು ಕಪ್ಪು ವರ್ಣದ ಪಂಚಮುಖದ ಗಾಯತ್ರಿ ನೋಡಿದ್ ತಕ್ಷಣ ನಿಮಗ ಭಯ-ಭಕ್ತಿ ಮೂಡತೈತಿ ಆಜು-ಬಾಜು ಗಣೇಶ-ಸುಬ್ಬಣ್ಣ(ಸುಬ್ರಹ್ಮಣ್ಯ) ಅದಾರ್ರೀ ಹೊರಗ ಅರಳಿಮರದಾಗ ಹನುಮ ಮತ್ತ ಲಕ್ಷ್ಮಿ ನಾರಾಯಣನ ಗುಡಿ ಅದ, ಇನ್ನೇನ್ ಬೇಕ್ ನಿಮಗ ದೇವಾನು ದೇವತೆಗಳ ಹೋಲ್ ಸೇಲ್ ಅಪಾರ್ಟ್ಮೆಂಟ್ ಇದ್ಬೇರೆ ಬೇರೆ ಕಡೆ ಸುತ್ಬೇಕಿಲ್ಲ ಇಲ್ ಬಂದ್ರ ಎಲ್ಲಾರೂ ಒಂದ ಕಡೆ ಸಿಗ್ತಾರ.

  ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

  ಬರೋದ್ ಹ್ಯಾಂಗ್ರಿ?
  ಬೆಂಗ್ಳೂರಿಂದ ಹುಬ್ಳಿ ಬರೋ ದಾರ್ಯಾಗ ತಡಸ ಐತ್ರಿ ಬೆಂಗ್ಳೂರಿನ ಯಾತ್ರಿಕರಿಗ ತ್ರಾಸ್ ಕೊಡೋದಿಲ್ಲ ಗಾಯತ್ರವ್ವ ಇನ್ನ ಮಂಗ್ಳೂರ್ ಕಡೆಯಿಂದ ಬರೋರ್ ಮುಂಡಗೋಡ ಹಾದ ಹುಬ್ಳಿ ಕಡೆ ಹೊಂಟ್ರಂದ್ರ ದಾರ್ಯಾಗ ತಪೋಭೂಮಿ ಸಿಗ್ತದ.

  Gayatri Temple Tadas
  ಗಾಯತ್ರಿ ತಪೋಭೂಮಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಇಲ್ಲಿನ ಟ್ರಸ್ಟ್, ತಪೋಭೂಮಿ,ಶಾಲಿ, ವೇದಾಧ್ಯಯನ ಕೇಂದ್ರ,ಯಾಗಶಾಲೆ, ಗೋಶಾಲೆ ಎಲ್ಲ ನಿಮಗ ದೈವಿಕ ಭಾವನೆ ತಂದುಕೊಡೋ ಜನರಿಂದ ತುಂಬಿ ಹೋಗ್ಯದ ಅದಕ್ಕ ನೆಮ್ಮದಿನ ಹುಡ್ಕೊಂಡ್ ಬರೋರಿದ್ರ ಆರಾಮ ಈ ಕಡೆ ಬರ್ರಿ ಬರೋರ್

  ಇದನ್ನೂ ಓದಿ: Uttara Kannada: ಮುಂಡಗೋಡಿನ ಈ ಸರ್ಕಾರಿ ಹೈಸ್ಕೂಲ್ ಕಲಿಯೋಕೂ ಚಂದ, ನೋಡೋಕೋ ಚಂದ!

  ಹೊರಗಿಂದ ಏನ್ ಬಿಡೋ ಮಾರಾಯ ಜೀವ್ನ ಬ್ಯಾಸರ ಆಗೇತಿ ಅನ್ನೋ ಹಳ್ಳಿ ಭಕ್ತಂಗೂ "ಯಥಾ ಯೋಗ್ಯಂ ತಥಾ ಕುರು" ಅನ್ನೋ ಭಟ್ರಿಗೂ ಭೇದ ಮಾಡದ ಭಾಗ್ಯ ಕರುಣಿಸೋ ತಾಯಿ ಜ್ಞಾನಯೋಗ ಭಕ್ತಿಯೋಗದ ಸಂಯೋಗದ ಜೀವಂತ ಸಾಕ್ಷಿ!

  ವರದಿ: ಎ.ಬಿ.ನಿಖಿಲ್
  Published by:guruganesh bhat
  First published: