• Home
 • »
 • News
 • »
 • haveri
 • »
 • Spatika Linga: ಹಿರೇಮಠಕ್ಕೆ ಬಂತು 1 ಕೋಟಿ ಮೌಲ್ಯದ ಹೊಸ ಸ್ಫಟಿಕ ಲಿಂಗ

Spatika Linga: ಹಿರೇಮಠಕ್ಕೆ ಬಂತು 1 ಕೋಟಿ ಮೌಲ್ಯದ ಹೊಸ ಸ್ಫಟಿಕ ಲಿಂಗ

ಹೊಸ ಸ್ಫಟಿಕ ಲಿಂಗ

ಹೊಸ ಸ್ಫಟಿಕ ಲಿಂಗ

ಭಕ್ತರು ನೀಡಿದ ಹಣದ ಜೊತೆಗೆ ಮಠದ ಪೀಠಾಧಿಪತಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಮ್ಮ ಹೆಸರಿನಲ್ಲಿದ್ದ ಜೀವ ವಿಮೆ ಪಾಲಿಸಿ, ಬ್ಯಾಂಕ್ ಹಾಗೂ ಕೆಇಬಿ ಸೊಸೈಟಿಯಲ್ಲಿ ಸಾಲ ಪಡೆದು ಸ್ಫಟಿಕ ಲಿಂಗ ಖರೀದಿ ಮಾಡಿದ್ದಾರೆ.

 • News18 Kannada
 • 5-MIN READ
 • Last Updated :
 • Haveri, India
 • Share this:

  ಹಾವೇರಿ: ರಂಭಾಪುರಿ ಪೀಠದ ಶಾಖಾ ಹಿರೇಮಠದ ಶ್ರೀ ರೇಣುಕಾಚಾರ್ಯರ ಮಠದಲ್ಲಿ ಕಳವಾಗಿದ್ದ ಸ್ಫಟಿಕ ಲಿಂಗಕ್ಕೆ ಪರ್ಯಾಯವಾಗಿ ಹೊಸ ಸ್ಫಟಿಕ ಲಿಂಗವನ್ನು (Spatika Linga) ತರಲಾಗಿದೆ. ಹಾವೇರಿ ಜಿಲ್ಲೆಯ (Haveri News)  ರಾಣೇಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿರುವ ಹಿರೇಮಠಕ್ಕೆ (Hiremutt Spatika Linga) ಮಠಕ್ಕೆ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹೊಸ ಸ್ಫಟಿಕ ಲಿಂಗವನ್ನು ತಂದು ಪೂಜಿಸಲು ಸಿದ್ಧತೆ ನಡೆಸಲಾಗಿದೆ.


  ಈ ಮುನ್ನ ಜೂನ್ 6ರಂದು ಮಠದಲ್ಲಿ ಪೂಜಿಸಲಾಗುತ್ತಿದ್ದ ಸ್ಫಟಿಕ ಲಿಂಗ ಕಳುವಾಗಿತ್ತು. ಹೀಗಾಗಿ ರಂಭಾಪುರಿ ಪೀಠದ ಶಾಖಾ ಹಿರೇಮಠದ ಶ್ರೀ ರೇಣುಕಾಚಾರ್ಯರ ಮಠದಲ್ಲಿ ಪೂಜಿಸಲು ಸ್ಫಟಿಕ ಲಿಂಗ ಇರಲಿಲ್ಲ. ಈವರೆಗೂ ಪೂಜೆಯ ಸ್ಫಟಿಕ ಲಿಂಗ ಪತ್ತೆಯಾಗದ ಹಿನ್ನೆಲೆಯಲ್ಲಿ ಮಾನಸ ಸರೋವರದಿಂದ ಹೊಸ ಸ್ಫಟಿಕ ಲಿಂಗವನ್ನು ತರಲಾಗಿದೆ.


  ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಸ್ಫಟಿಕ ಲಿಂಗ ಕಳುವಾಗಿತ್ತು!
  ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಸ್ಫಟಿಕ ಲಿಂಗ ಇದಾಗಿತ್ತು, ಅಲ್ಲದೇ ದಕ್ಷಿಣ ಭಾರತದಲ್ಲೇ ಈ ಸ್ಫಟಿಕ ಲಿಂಗ ಅತ್ಯಂತ ಅಪರೂಪದ್ದು ಎನ್ನಲಾಗಿತ್ತು. ಕರ್ನಾಟಕವೊಂದೇ ಅಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಈ ಸ್ಫಟಿಕ ಲಿಂಗದ ದರ್ಶನಕ್ಕೆ ಆಗಮಿಸುತ್ತಿದ್ದರು. ಮಠದಲ್ಲಿ ಜ್ಯೋತಿರ್ಲಿಂಗ ಮತ್ತು 19 ಶಕ್ತಿದೇವತೆಗಳನ್ನು ಸ್ಥಾಪಿಸಲಾಗಿತ್ತು. ಈ ಹಿಂದೆ ಮಠದಲ್ಲಿದ್ದ ಬೆಳ್ಳಿವಸ್ತುಗಳು ಸಹ ಕಳ್ಳರ ಪಾಲಾಗಿತ್ತು.


  ಇದನ್ನೂ ಓದಿ: Koragajja In Haveri: ಉತ್ತರ ಕರ್ನಾಟಕದಲ್ಲೂ ಕರಾವಳಿಯ ದೈವಾರಾಧನೆ ಶುರು!

  ಸ್ಫಟಿಕ ಲಿಂಗ ಕಳ್ಳತನವಾಗಿದ್ದು ಭಕ್ತರಲ್ಲಿ ದಿಗ್ಭ್ರಮೆ ಮೂಡಿಸಿತ್ತು.  ಈ ಮಠದಲ್ಲಿ ಸ್ಫಟಿಕ ಲಿಂಗವನ್ನು ಪುರಾತನ ಕಾಲದಲ್ಲೇ ಸ್ಥಾಪಿಸಲಾಗಿತ್ತು.


  ಹೊಸ ಸ್ಫಟಿಕ ಲಿಂಗದ ವಿಶೇಷತೆ
  ಹೊಸ ಸ್ಫಟಿಕ ಲಿಂಗ ಒಂದೂವರೆ ಅಡಿ ಎತ್ತರ, 10 ಇಂಚು ಅಗಲ ಹೊಂದಿದ್ದುಈಗಾಗಲೆ ಮಠದ ಶ್ರೀ ರೇಣುಕಾಚಾರ್ಯ ಮೂರ್ತಿ ಎದುರು ಇಟ್ಟು ಪೂಜೆ ಸಲ್ಲಿಸಲಾಗಿದೆ. ಮಠದ ಪೀಠಾಧಿಪತಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ 1 ಕೋಟಿ ರೂ.ಗಿಂತ ಅಧಿಕ ಹಣ ನೀಡಿ ಸ್ಪಟಿಕ ಲಿಂಗ ಮತ್ತು ನಾಲ್ಕು ಪಚ್ಚೆ ಲಿಂಗ ಖರೀದಿ ಮಾಡಿದ್ದಾರೆ.


  ಹೇಗೆ ಖರೀದಿ ಮಾಡಲಾಯ್ತು?
  ಭಕ್ತರು ನೀಡಿದ ಹಣದ ಜೊತೆಗೆ ಮಠದ ಪೀಠಾಧಿಪತಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಮ್ಮ ಹೆಸರಿನಲ್ಲಿದ್ದ ಜೀವ ವಿಮೆ ಪಾಲಿಸಿ, ಬ್ಯಾಂಕ್ ಹಾಗೂ ಕೆಇಬಿ ಸೊಸೈಟಿಯಲ್ಲಿ ಸಾಲ ಪಡೆದು ಸ್ಫಟಿಕ ಲಿಂಗ ಖರೀದಿ ಮಾಡಿದ್ದಾರೆ.


  ಇದನ್ನೂ ಓದಿ: Gayatri Temple Tadas: ದಕ್ಷಿಣ ಭಾರತದ ಏಕೈಕ ಗಾಯತ್ರಿ ದೇಗುಲ! ತಡಸದಲ್ಲಿದೆ ತಪೋಭೂಮಿ!


  ಹೊಸ ಸ್ಫಟಿಕ ಲಿಂಗಕ್ಕೆ ಬಿಗಿ ಭದ್ರತೆ
  2023 ಜನವರಿ 23ರಂದು ಹೊಸ ಸ್ಪಟಿಕಲಿಂಗ ಪ್ರತಿಷ್ಠಾಪನೆ, ಧರ್ಮಸಭೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಸಿಸಿಟಿವಿ ಅಳವಡಿಸಿ ಪೋಲಿಸ್ ಭದ್ರತೆ ಒದಗಿಸಲಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: