Mailaralinga Daiva: ಸಿದ್ದರಾಮಯ್ಯ ಮುಂದಿನ ಸಿಎಂ ಎಂದಿದ್ದ ಮೈಲಾರಲಿಂಗ ದೈವದ ಮಹಿಮೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಸುರರಿಗೆ ಶಿಕ್ಷಿಸಲು ಶಿವನು ಮಾರ್ತಾಂಡ ಭೈರವ ಎಂದರೆ ಮೈಲಾರಲಿಂಗೇಶ್ವರನಾಗಿ ಅವತಾರ ತಾಳಿದ. ಅವನ ಹಿಂದೆ ಇಡೀ ಶಿವಗಣ, ದೇವಗಣವೆಲ್ಲಾ ಏಳು ಕೋಟಿ ಸೇನೆಯಾಗಿ ಬಂತು.

  • News18 Kannada
  • 2-MIN READ
  • Last Updated :
  • Haveri, India
  • Share this:

ಹಾವೇರಿ: ಇಲ್ಲಿರೋದು ಅಂತಿಂಥಾ ದೇವರಲ್ಲ, ಸದಾ ಜಾಗೃತನಾಗಿರೋ ಮೈಲಾರಲಿಂಗೇಶ್ವರ. ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು (Karnataka CM Prediction) ಅಂತಾ ನಿಖರವಾಗಿ ಹೇಳಿದ ಆರಾಧ್ಯ ದೈವ. ಜನಸಾಮಾನ್ಯರ ನಡುವೆ ಕಾರಣಿಕ ದೈವವಾಗಿ ನೆಲೆಯಾಗಿರೋ ಈ ಮೈಲಾರಲಿಂಗನ ಪುರಾಣವೂ ಅಷ್ಟೇ ಕುತೂಹಲ. ಹಾಗಿದ್ರೆ ನಿಖರವಾಗಿ ಭವಿಷ್ಯ ಹೇಳೋ, ಜನಸಾಮಾನ್ಯರ ನೆಚ್ಚಿನ ದೇವರಾದ ಮೈಲಾರಲಿಂಗನ (Mailaralinga)  ಕಥೆಯನ್ನ ನಾವ್‌ ಹೇಳ್ತೀವಿ ನೋಡಿ.


ಸಿದ್ದರಾಮಯ್ಯ ಸಿಎಂ ಭವಿಷ್ಯ!
ಯೆಸ್‌, ಹಾವೇರಿ ಜಿಲ್ಲೆಯ ದೇವರಗುಡ್ಡದ ಮೈಲಾರಲಿಂಗ ಅಂದ್ರೇನೆ ಪವಾಡಕ್ಕೆ ಇನ್ನೊಂದು ಹೆಸರು. ಹಾಗಾಗಿ ಜನಸಾಮಾನ್ಯರಿಂದ ಹಿಡಿದು ಅದೆಂತಹ ವಿಐಪಿ ಆದ್ರೂ ಮೈಲಾರಲಿಂಗನ ಭಕ್ತನೇ ಆಗಿರ್ತಾನೆ. ಅಷ್ಟೇ ಅಲ್ದೇ ಜಾತಿ, ಮತ ಭೇದವಿಲ್ಲದೇ ಜನರು ಮೈಲಾರಲಿಂಗನನ್ನು ಆರಾಧಿಸುತ್ತಾರೆ. ಅದರಲ್ಲೂ ಈ ಬಾರಿ ಸಿದ್ದರಾಮಯ್ಯನೇ ಮುಂದಿನ ಸಿಎಂ ಎಂದು ಹೇಳಿದ್ದು, ಅದು ನಿಜವೂ ಆಗಿದ್ದು ಭಕ್ತರ ನಂಬಿಕೆಯನ್ನೂ ಹೆಚ್ಚಿಸಿದೆ.


ಪುರಾಣ ಹೀಗಿದೆ
ಅಂದಹಾಗೆ ಈ ಮೈಲಾರಲಿಂಗ ಅಂತಿಂತ ದೇವರಲ್ಲ. ಬ್ರಹ್ಮಾಂಡ ಪುರಾಣದಪ್ರಕಾರ  ಕ್ಷೇತ್ರಖಂಡದಲ್ಲಿ ಮಣಿಶೂಲ ಪರ್ವತದಲ್ಲಿ ಮಣಿ ಮತ್ತು ಮಲ್ಲ ಎಂಬ ಸಹೋದರರು ವಾಸಿಸುತ್ತಿದ್ದು ಅವರು ಆ ಘಟ್ಟದ ಮೇಲಿನ ಹಾಗೂ ಕೆಳಗಿನ ಜನರಿಗೆ ಮುಖ್ಯವಾಗಿ ಆ ಊರಿನ ಕೃಷಿ, ಪಶು ಸಂಗೋಪನೆಗೆ ಹಾನಿ ಮಾಡುತ್ತಿದ್ದರು. ದೈವೀ ಕಾರ್ಯಗಳಿಗೆ ವಿಘ್ನ ತರುತ್ತಿದ್ದರು. ಋಷಿಮುನಿಗಳನ್ನು ಹೆದರಿಸಿ ಓಡಿಸುತ್ತಿದ್ದರು ಎಂಬುದಾಗಿ ಹೇಳಲಾಗುತ್ತದೆ.


ದುಷ್ಟ ಸಂಹಾರ
ಅಂತಹ ಅಸುರರಿಗೆ ಶಿಕ್ಷಿಸಲು ಶಿವನು ಮಾರ್ತಾಂಡ ಭೈರವ ಎಂದರೆ ಮೈಲಾರಲಿಂಗೇಶ್ವರನಾಗಿ ಅವತಾರ ತಾಳಿದ. ಅವನ ಹಿಂದೆ ಇಡೀ ಶಿವಗಣ, ದೇವಗಣವೆಲ್ಲಾ ಏಳು ಕೋಟಿ ಸೇನೆಯಾಗಿ ಬಂತು. ಹೀಗಾಗಿ ಏಳು ಕೋಟಿ ಎನ್ನುವುದು ದೇವರ ಉಪಮೆಯಾಗಿ ಉಳಿಯಿತು ಎನ್ನುತ್ತಾರೆ ವಿದ್ವಾಂಸರು.


ಇದನ್ನೂ ಓದಿ: Hanuman Temple: ನುಗ್ಗಿಕೇರಿಯ ಈ ಆಂಜನೇಯ ಬಲಭೀಮ ಎಂದೇ ಫೇಮಸ್!


ಶಿವನು ಶಿವ ಹಾಗೂ ಸೂರ್ಯ ಮತ್ತು ಭೈರವ ತತ್ವಗಳ ಮಿಶ್ರಣವಾದ ಮಾರ್ತಾಂಡ ಭೈರವೇಶ್ವರನಾಗಿ ಬಂದು ಮೊದಲು ಮಣಿಯನ್ನು, ನಂತರ ಮಲ್ಲನನ್ನು ಕೊಲ್ಲುತ್ತಾನೆ. ಭಕ್ತರು ಪ್ರೀತಿಯಿಂದ ಏಳುಕೋಟಿಗೆ ಜಯವಾಗಲಿ, ಮಲ್ಹಾರಿ ಅಥವಾ ಮೈಲಾರಿಗೆ ಜಯವಾಗಲಿ ಎನ್ನುತ್ತಾರೆ.
ಜಾನಪಥ ಕಥೆಯೂ ಇವೆಯಂತೆ!
ಮಹಾಲಸಾ ಮಾರ್ತಾಂಡ ಭೈರವನಾಗಿ ಮಾಳಮ್ಮನ ಮೈಲಾರಿಯಾಗಿ ಶಿವನು ಈ ಮಣಿಶೂಲ ಪರ್ವತದಲ್ಲಿಯೇ ನೆಲೆನಿಂತಿದ್ದಾನೆ ಎನ್ನಲಾಗಿದೆ. ಜೊತೆಗೆ ಜಾನಪದ ಕಥೆಗಳೂ ಮೈಲಾರಲಿಂಗನ ಬಗ್ಗೆ ಹುಟ್ಟಿಕೊಂಡಿವೆ. ಹೀಗೆ ಮೈಲಾರಲಿಂಗೇಶ್ವರನ ಭಕ್ತರ ಸಂಖ್ಯೆ ಅಪಾರ. ಇವತ್ತಿಗೂ ಜಾಗೃತ ದೈವವಾಗಿ ಅವನು ಭಕ್ತರ ಮನೆ-ಮನದಲ್ಲಿ ನೆಲೆಸಿದ್ದಾನೆ. ದೇವರಗುಡ್ಡದಲ್ಲಿ ಶಿವನು ಜ್ಯೋತಿರ್ಲಿಂಗರೂಪದಲ್ಲಿ ಕಾಣಬಹುದಾಗಿದೆ.


ಇದನ್ನೂ ಓದಿ: Hubballi Special Tractor: ಟ್ರ್ಯಾಕ್ಟರ್‌ ಒಂದೇ ಆದ್ರೂ, ಉಪಯೋಗ ಹಲವು! ಕರುನಾಡ ಹುಡುಗನ ಸಾಧನೆ


ಎಲ್ಲಿದೆ ಈ ದೇಗುಲ?
ಕಾರ ಹುಣ್ಣಿಮೆ, ಭಾರತ ಹುಣ್ಣಿಮೆ, ದಸರಾ ಪ್ರಮುಖ ದಿನ ಇಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತೆ. ರಾಣಿಬೆನ್ನೂರಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರಕ್ಕೆ ಬಸ್ಸು, ರೈಲು ಸೇರಿದಂತೆ ಎಲ್ಲಾ ಮಾರ್ಗವೂ ಸುಗಮವಾಗಿದೆ. ಹೀಗೆ ಪವಾಡಪುರುಷನಾಗಿ ನೆಲೆಯಾಗಿರುವ ಮೈಲಾರಲಿಂಗನು ಭಕ್ತರ ಪಾಲಿನ ಆರಾಧ್ಯ ದೈವವಾಗಿ ನೆಲೆಸಿದ್ದಾನೆ.

First published: