• Home
  • »
  • News
  • »
  • haveri
  • »
  • Peacock Park: 139 ಎಕರೆಯಲ್ಲಿ ಕರ್ನಾಟಕದ ಮೊದಲ ನವಿಲುಧಾಮ! ಆಹಾ, ಇದೇ ನಂದಗೋಕುಲ!

Peacock Park: 139 ಎಕರೆಯಲ್ಲಿ ಕರ್ನಾಟಕದ ಮೊದಲ ನವಿಲುಧಾಮ! ಆಹಾ, ಇದೇ ನಂದಗೋಕುಲ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸರ್ಕಾರದ ಅಧೀನದಲ್ಲಿರುವುದರಿಂದ ಯಾರ ಅತಿಕ್ರಮಣದ ಭಯವೂ ಈ ಪಕ್ಷಿಗಳಿಲ್ಲ. ಹೀಗಾಗಿ ಈ ಪ್ರದೇಶವನ್ನು ಬಿಟ್ಟು ಹೊರಗಡೆಯ ಯೋಚನೆಯನ್ನೇ ಮಾಡ್ತಿಲ್ಲ ನವಿಲುಗಳು!

  • News18 Kannada
  • Last Updated :
  • Haveri, India
  • Share this:

    ಹಾವೇರಿ:  ಎಲ್ಲೆಲ್ಲೂ ನವಿಲುಗಳ ನರ್ತನ, ಗರಿ ಬಿಚ್ಚಿ ನಲಿದಾಡೋ (Peacock Dance) ಪಂಚರಂಗಿಗೆ ಈ ಉದ್ಯಾನವನೇ ಸ್ವರ್ಗ. ವಿಸ್ತಾರವಾದ ಭೂಮಿಯಲ್ಲಿ ಮಯೂರನ ಕಲರವ ಕಾಣೋದೆ ಚೆಂದ. ಅಂದಹಾಗೆ ಇದು ಅಧಿಕೃತವಾಗಿ ನವಿಲಗಳದ್ದೇ ಆವಾಸ ಸ್ಥಾನ. ಅದುವೇ ಬಂಕಾಪುರದ ನವಿಲುಧಾಮ. ಹಾವೇರಿ ಜಿಲ್ಲೆಯ (Haveri News) ಬಂಕಾಪುರ ಪಟ್ಟಣದ ಬಂಕಾಪುರ ಕೋಟೆಯಲ್ಲೊಂದು (Bankapur Port ನವಿಲುಧಾಮವಿದೆ ಅನ್ನೋದು ಹಲವರಿಗೆ ತಿಳಿದಿಲ್ಲ. ವಿಶೇಷ ಅಂದ್ರೆ ಇದು ಭಾರತದ ಎರಡನೇ ನವಿಲುಧಾಮ ಹಾಗೂ ಕರ್ನಾಟಕದ ಮೊದಲ ನವಿಲುಧಾಮವೂ (Peacock Park) ಹೌದು.


    139 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿರೋ ಈ ನವಿಲುಧಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ನವಿಲುಗಳಿವೆ. ಅವುಗಳನ್ನು ನೋಡುವುದೇ ಒಂಥರಾ ಆನಂದ. ಸದಾ ಚಟುವಟಿಕೆಯಿಂದ ಕೂಡಿರುವ ನವಿಲುಗಳು ಇಲ್ಲಿ ಹಾಯಾಗಿ ಹಾರಾಡುತ್ತಾ, ಕೂಗುತ್ತಾ ಬಂಧು ಬಳಗದ ಜೊತೆಗೆ ಸಂಭ್ರಮಿಸುತ್ತವೆ.


    ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


    ನವಿಲುಗಳಿಗೂ ನೆಚ್ಚಿನ ತಾಣ!
    2006ನೇ ಇಸವಿಯಿಂದಲೇ ಬಂಕಾಪುರದ ಈ ಸ್ಥಳ ಸಂರಕ್ಷಿತ ಪ್ರದೇಶ. ರಾಷ್ಟ್ರೀಯ ಪಕ್ಷಿ ನವಿಲಂತೂ ತನ್ನ ಸಂತತಿ ವೃದ್ಧಿಗೆ ಇದೇ ಸೂಕ್ತ ಎಂದು ಭಾವಿಸಿಕೊಂಡಿದೆ. ಹಾಗಾಗಿ ದಿನೇ ದಿನೇ ಇಲ್ಲಿ ನವಿಲುಗಳ ಸಂತತಿ ಅಧಿಕವಾಗ್ತಿದೆ. ಸರ್ಕಾರದ ಅಧೀನದಲ್ಲಿರುವುದರಿಂದ ಯಾರ ಅತಿಕ್ರಮಣದ ಭಯವೂ ಈ ಪಕ್ಷಿಗಳಿಲ್ಲ. ಹೀಗಾಗಿ ಈ ಪ್ರದೇಶವನ್ನು ಬಿಟ್ಟು ಹೊರಗಡೆಯ ಯೋಚನೆಯನ್ನೇ ಮಾಡ್ತಿಲ್ಲ ನವಿಲುಗಳು!


    ಇದನ್ನೂ ಓದಿ: Success Story: ಸಾವಿರಾರು ಮಹಿಳೆಯರ ತಿಂಗಳ ರಗಳೆಗೆ ಪರಿಹಾರ! ಸ್ಟಾರ್ಟಪ್ ಮಾಡಿ ಸಕ್ಸಸ್ ಕಂಡ ಗೋಕರ್ಣದ ಯುವತಿ


    peackock park
    ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಬರೀ ನವಿಲು ಸಂತತಿಗಳಲ್ಲದೇ ಗೂಬೆ, ರತ್ನಪಕ್ಷಿ, ಗುಬ್ಬಚ್ಚಿ, ಬೀ ಈಟರ್, ಮೈನಾ, ಡವ್ ಅಲ್ಲದೇ ಕಿಂಗ್ ಫಿಶರ್ ಕೂಡ ಇಲ್ಲಿವೆ. ಈ ಪಕ್ಷಿಲೋಕದ ಸೊಬಗನ್ನ ಕಣ್ತುಂಬಿಸಿಕೊಳ್ಳೋಕೆ ಪ್ರವೇಶವೂ ಉಚಿತ. ಅಂದ್ಹಾಗೆ ಬಂಕಾಪುರಕ್ಕೆ ಬಂದು ಹತ್ತು ಮೀಟರ್ ನಡೆದರೆ ಸಾಕು ನೀವು ನವಿಲಿನ ನರ್ತನವನ್ನು ಕಣ್ತುಂಬಿಕೊಳ್ಳಬಹುದಾಗಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: