• ಹೋಂ
 • »
 • ನ್ಯೂಸ್
 • »
 • ಹಾವೇರಿ
 • »
 • Haveri: ಪ್ರೀತಿಸಿ ಮನೆಯಿಂದ ಹೊರಬಿದ್ದ ಈ ಮಹಿಳೆಗೆ ಇಂದು ಇಡೀ ಸಮಾಜವೇ ಸೆಲ್ಯೂಟ್ ಮಾಡುತ್ತೆ!

Haveri: ಪ್ರೀತಿಸಿ ಮನೆಯಿಂದ ಹೊರಬಿದ್ದ ಈ ಮಹಿಳೆಗೆ ಇಂದು ಇಡೀ ಸಮಾಜವೇ ಸೆಲ್ಯೂಟ್ ಮಾಡುತ್ತೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಡವರಿಗಾಗಿ ತುಡಿಯುವ ಇವರ ಹೃದಯ ಪ್ರೇಮದ ಕಥೆ ಕೇಳಿದ್ರೆ ನಿಮ್ಮ ಮನಸು ಭಾವುಕವಾಗುತ್ತೆ. ಇವರಿಂದ ಬದುಕನ್ನು ಕಟ್ಟಿಕೊಂಡವರು ದೇವರಂತೆ ಪೂಜಿಸುತ್ತಿದ್ದಾರೆ.

 • Share this:

  ಹಾವೇರಿ: ಮುಗಿಲೆತ್ತರಕ್ಕೆ ನಿಂತ ಬೃಹತ್ ಕಟ್ಟಡ, ಇದು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆ. ವಿಶೇಷ ಅಂದ್ರೆ, ಇದೇನು ರಾಜಕಾರಣಿಗಳದ್ದೋ, ರಿಯಲ್ ಎಸ್ಟೇಟ್​ನವರದ್ದೋ ಅಲ್ಲ. ಇದು ಮಹಿಳೆಯೊಬ್ಬರು ಕಟ್ಟಿರೋ (Success Atory) ಬೃಹತ್ ಶಿಕ್ಷಣ ಸಂಸ್ಥೆ. ಅಂದಹಾಗೆ ಇವರ ಹೆಸರು ವಿಜಯಾ.ಸಿ.ಪಾಟೀಲ್ ಅಂತ. ಮೂಲತಃ ಇವರು ಸರ್ಕಾರಿ ನೌಕರರು. ಸಿಡಿಪಿಓ ಆಗಿದ್ದ ಇವರು ತಮ್ಮ ಕೆಲಸಕ್ಕೆ ಗುಡ್ ಬಾಯ್ ಹೇಳಿ, ಸಮಾಜ ಸೇವೆಗೆ ಅಂತಾ ಜೀವನವನ್ನ (International Womens Day 2023) ಮುಡುಪಾಗಿಟ್ಟಿದ್ದಾರೆ. ಸುಮಾರು 600 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ (Free Education) ಹಾಗೂ ವಸತಿ ನೀಡಿ ಆಶ್ರಯದಾತರಾಗಿದ್ದಾರೆ.


  ಬಡವರಿಗಾಗಿ ತುಡಿಯುವ ಇವರ ಹೃದಯ ಪ್ರೇಮದ ಕಥೆ ಕೇಳಿದ್ರೆ ನಿಮ್ಮ ಮನಸು ಭಾವುಕವಾಗುತ್ತೆ.


  ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನೆಯಿಂದ ಹೊರಬಿದ್ರು!
  ವಿಜಯಾ ಪಾಟೀಲ್ ಅವರ ವೈಯಕ್ತಿಕ ಬದುಕೂ ಅಷ್ಟು ಸುಲಭವಾಗಿರ್ಲಿಲ್ಲ. ಪ್ರೀತಿಸಿ ಮದುವೆಯಾದ ಕಾರಣ ಮನೆಯಿಂದ ಹೊರಬಂದಿದ್ದಾರೆ. ಒಂಟಿಯಾಗಿದ್ದರೂ ಛಲಬಿಡದೆ ಕಷ್ಟಪಟ್ಟು ಶಿಕ್ಷಣ ಕ್ರಾಂತಿ ಮಾಡಿದ್ದಾರೆ.


  ಎರಡೇ ತರಗತಿಗಳಿಂದ ಶಾಲೆ ಆರಂಭ!
  ಎರಡೇ ಎರಡು ತರಗತಿಗಳಿಂದ ಆರಂಭಿಸಿದ ದೇವಿಕಾ ಸ್ಕೂಲ್, ಇದೀಗ ಕಾಲೇಜು ಶಿಕ್ಷಣ ನೀಡುವ ಹಂತಕ್ಕೆ ಬಂದಿದೆ. ಸದ್ಯ 2000 ಮಕ್ಕಳು ಓದುತ್ತಿದ್ದು 100 ಕ್ಕೂ ಅಧಿಕ ಸಿಬ್ಬಂದಿಗೆ ಬದುಕು ಕಟ್ಟಿಕೊಟ್ಟಿದ್ದಾರೆ.


  ಇದನ್ನೂ ಓದಿ: Haveri: 1 ಕೋಟಿ 38 ಲಕ್ಷ ಬಹುಮಾನಕ್ಕೆ 800 ಪೈಲ್ವಾನರ ರಣರೋಚಕ ಕಾದಾಟ!
  ಅಷ್ಟೇ ಅಲ್ಲ, ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡುವುದರ ಜೊತೆಗೆ ಪುರುಷರಿಗೂ ಅನೇಕ ಸವಲತ್ತು ನೀಡಿದ್ದಾರೆ. ಇವರಿಂದ ಬದುಕನ್ನು ಕಟ್ಟಿಕೊಂಡವರು ದೇವರಂತೆ ಪೂಜಿಸುತ್ತಿದ್ದಾರೆ.


  ಇದನ್ನೂ ಓದಿ: Haveri: ಜೀವಂತ ರತಿ ಮನ್ಮಥರನ್ನು ನಗಿಸಿ, ಬರೋಬ್ಬರಿ 4 ಲಕ್ಷ ಬಹುಮಾನ ಗೆಲ್ಲಿ!


  ಫಲಾಪೇಕ್ಷೆಯೇ ಇಲ್ಲದೇ ಸಮಾಜಸೇವೆ ಮಾಡುತ್ತಿರುವ ಇವರಿಗೆ ನಾವೆಲ್ಲರೂ ಹ್ಯಾಟ್ಸಾಪ್ ಹೇಳಲೇಬೇಕು. ಒಟ್ಟಾರೆ ವೈಯಕ್ತಿಕ ಜೀವನದ ಕಷ್ಟಗಳನ್ನೂ ಮೀರಿ ಬೆಳೆದ ಈ ಸಾಧಕಿಗೆ ಸಲಾಂ ಹೇಳೋಣ ಅಲ್ವೇ.


  ವರದಿ: ರಮೇಶ್. ಬಿ.ಹೆಚ್, ನ್ಯೂಸ್ 18 ಹಾವೇರಿ

  Published by:ಗುರುಗಣೇಶ ಡಬ್ಗುಳಿ
  First published: