Haveri: ಜೀವಂತ ರತಿ ಮನ್ಮಥರನ್ನು ನಗಿಸಿ, ಬರೋಬ್ಬರಿ 4 ಲಕ್ಷ ಬಹುಮಾನ ಗೆಲ್ಲಿ!

ಜೀವಂತ ರತಿ ಮನ್ಮಥರು

ಜೀವಂತ ರತಿ ಮನ್ಮಥರು

Holi 2023: ಕಳೆದ 64 ವರ್ಷಗಳಿಂದ ರಾಣೆಬೆನ್ನೂರಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜೀವಂತ ರತಿ ಮನ್ಮಥರನ್ನು ಕೂರಿಸಲಾಗುತ್ತಿದೆ. ಇವರನ್ನು ನಗಿಸಿದವರಿಗೆ ಸಿಗಲಿದೆ ಭರ್ಜರಿ ಬಹುಮಾನ!

  • Share this:

    ಹಾವೇರಿ: ಇನ್ನೇನು ಹೋಳಿ ಹಬ್ಬ ಬಂದೇಬಿಡ್ತು, ಹೋಳಿ ಹಬ್ಬದ (Holi 2023) ವಿಶೇಷ ಸಂದರ್ಭದಲ್ಲೇ ರಾಜ್ಯದ ಹಲವೆಡೆ ರತಿ ಮನ್ಮಥರನ್ನು ಕೂರಿಸಲಾಗುತ್ತದೆ. ಹೋಳಿಯ ರತಿ ಮನ್ಮಥ ಗೊಂಬೆ ಆಕರ್ಷಣೆಯ ಕೇಂದ್ರಬಿಂದುವೂ ಹೌದು. ಆದರೆ ಇಲ್ಲೊಂದೆಡೆ ಜೀವಂತ ರತಿ ಮನ್ಮಥರನ್ನು (Rati Manmatha) ಕೂರಿಸಲಾಗುತ್ತದೆ. ಅಲ್ಲದೇ ಈ ಜೀವಂತ ರತಿ ಮನ್ಮಥರನ್ನು ಮುಂದಿಟ್ಟುಕೊಂಡು ಹಾವೇರಿ ಜಿಲ್ಲೆಯ (Haveri New) ನಾಗರಿಕರು ಆಕರ್ಷಕ ಸ್ಪರ್ಧೆಯೊಂದನ್ನು ಸಹ ಆಯೋಜಿಸಿದ್ದಾರೆ.


    ಇಂತಹ ವಿಶೇಷ ಸ್ಪರ್ಧೆ ಆಯೋಜನೆಯಾಗಿರುವುದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ.


    ಕಳೆದ 64 ವರ್ಷಗಳಿಂದ ನಡೆಯುತ್ತಿದೆ ಈ ವಿಶೇಷ ಸ್ಪರ್ಧೆ
    ಕಳೆದ 64 ವರ್ಷಗಳಿಂದ ರಾಣೆಬೆನ್ನೂರಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜೀವಂತ ರತಿ ಮನ್ಮಥರನ್ನು ಕೂರಿಸಲಾಗುತ್ತಿದೆ. ಮಾರ್ಚ್ 7ರಂದು ಸಂಜೆ ರಾಮಲಿಂಗೇಶ್ವರ ದೇಗುಲದಲ್ಲಿ ವಿಶೇಷ ಸ್ಪರ್ಧೆಯೊಂದು ನಡೆಯಲಿದೆ.


    ಇದನ್ನೂ ಓದಿ: Haveri: ಈ ಜೈಲಿನಲ್ಲಿ ಖೈದಿಗಳಿಗೆ ಬೇಜಾರೇ ಆಗಲ್ಲ, ರಾಜ್ಯ ಪ್ರಶಸ್ತಿ ವಿಜೇತ ಸೆಲ್ ಇದು




    ಯಾರು ಈ ಜೀವಂತ ರತಿ ಮನ್ಮಥರು?
    ಜೀವಂತ ರತಿಯಾಗಿ ಕುಮಾರ ಹಡಪದ ಮತ್ತು ಜೀವಂತ ಮನ್ಮಥರಾಗಿ ಗದಿಗೆಡ್ಡ ದೊಡ್ಡನವರ ಅವರು ಬಣ್ಣ ಹಚ್ಚಲಿದ್ದಾರೆ. ಈ ಜೀವಂತ ರತಿ ಮನ್ಮಥರು ಈ ಭಾಗದಲ್ಲಿ ಆಕರ್ಷಣೆಯ ಸೂಜಿಗಲ್ಲಿನಂತೆ ಸ್ಥಳೀಯರನ್ನು ಸೆಳೆಯಲಿದ್ದಾರೆ.


    ಇದನ್ನೂ ಓದಿ: Haveri Viral Video: ವಿಮಾನದಲ್ಲಿ ಅಮ್ಮನ ಹುಟ್ಟುಹಬ್ಬ ಆಚರಿಸಿದ ಹಾವೇರಿ ಹೈದ!


    ಬರೋಬ್ಬರಿ 4.04 ಲಕ್ಷ ಬಹುಮಾನ ನಿಮ್ಮದಾಗಿಸಿಕೊಳ್ಳಿ!
    ಅಷ್ಟೇ ಅಲ್ಲ, ಈ ಜೀವಂತ ರತಿ ಮನ್ಮಥರನ್ನು ನಗಿಸಿದವರಿಗೆ ಬರೋಬ್ಬರಿ 4.04 ಲಕ್ಷ ಬಹುಮಾನವೂ ದೊರೆಯಲಿದೆ! ನೀವೂ ಈ ಜೀವಂತ ರತಿ ಮನ್ಮಥರನ್ನು ನಗಿಸಿ ಈ ಬೊಂಬಾಟ್ ಬಹುಮಾನವನ್ನು ಹೋಳಿ ಹಬ್ಬದಲ್ಲಿ ಗೆಲ್ಲಬಹುದು ನೋಡಿ!

    Published by:ಗುರುಗಣೇಶ ಡಬ್ಗುಳಿ
    First published: