Haveri Viral News: ಕುದುರೆ ಏರಿ ಬಂದು ಬಜೆಟ್ ಮಂಡನೆ!

ಕುದುರೆ ಸವಾರಿ ದೃಶ್ಯ

ಕುದುರೆ ಸವಾರಿ ದೃಶ್ಯ

ಹೀಗೆ ಕುದುರೆ ಏರಿ ಬಂದು ಬಜೆಟ್ ಮಂಡಿಸಲು ಹಿರೇಕೆರೂರ ಪಟ್ಟಣ ಪಂಚಾಯತ್ ಅಧ್ಯಕ್ಷ ಕಂಠಾಧರ ಅಂಗಡಿ ಹೇಳೋ ಕಾರಣ ಹೀಗಿದೆ ಕೇಳಿ!

  • News18 Kannada
  • 5-MIN READ
  • Last Updated :
  • Haveri, India
  • Share this:

    ಹಾವೇರಿ: ಕುದುರೆ ಏರಿ ಬರ್ತಿರೋ ವ್ಯಕ್ತಿ, ಅವರನ್ನೇ ಕುತೂಹಲದಿಂದ ಗಮನಿಸ್ತಿರೋ ಸುತ್ತಮುತ್ತಲು ನೆರೆದ ಜನರು. ಕುದುರೆಯಿಂದ ಇಳಿದವರೇ (Horse Riding) ನೇರ ಪಟ್ಟಣ ಪಂಚಾಯತ್ ಕಟ್ಟಡ ಹೊಕ್ಕರು ನೋಡಿ, ಅರೇ! ಯಾರು ಈ ವ್ಯಕ್ತಿ? ಯಾಕೆ ಹೀಗೆ ಕುದುರೆ ಸವಾರಿ ಮಾಡ್ತಿದ್ದಾರೆ ಅಂದ್ಕೊಂಡ್ರಾ? ಇವ್ರು ಹಿರೇಕೆರೂರ ಪಟ್ಟಣ ಪಂಚಾಯತ್  (Hirekerur Town Panchayat) ಅಧ್ಯಕ್ಷ ಕಂಠಾಧರ ಅಂಗಡಿ ಅಂತ.


    ಹಾವೇರಿಯ ಹಿರೇಕೆರೂರ ಪಟ್ಟಣ ಪಂಚಾಯತ್ ಅಧ್ಯಕ್ಷ ಕಂಠಾಧರ ಅಂಗಡಿ ಅವರು ಕುದುರೆ ಏರಿ ಬಂದು 2023-24 ನೇ ಸಾಲಿನ ಪಟ್ಟಣ ಪಂಚಾಯತ್ ಬಜೆಟ್ ಮಂಡನೆ ಮಾಡಿದರು.  ಹೀಗೆ ಕುದುರೆ ಏರಿ ಬಂದು ಬಜೆಟ್ ಮಂಡಿಸಲು ಅವರು ಹೇಳೋ ಕಾರಣ ಹೀಗಿದೆ ಕೇಳಿ.




    ಬಸವೇಶ್ವರರು ಹೀಗೆ ಮಾಡ್ತಿದ್ರು!
    " ಹಿಂದೆ ಬಸವಣ್ಣನವರು ಕುದುರೆ ಏರಿ ಬಂದು ಅಂದಿನ ಆಯವ್ಯಯ ಮಂಡಿಸಿದ್ರು. ಹೀಗೆ ಕುದುರೆ ಏರಿ ಬಂದು ಬಜೆಟ್ ಮಂಡಿಸಿದ್ರೆ ಆ ಪ್ರದೇಶ ಸುಭಿಕ್ಷವಾಗಿರುತ್ತೆ ಎಂಬ ನಂಬಿಕೆಯಿದೆ. ಹೀಗಾಗಿ ನಾನು ಕುದುರೆ ಏರಿ ಬಂದು ಬಜೆಟ್ ಮಂಡಿಸಿದ್ದೇನೆ" ಎಂದು ಅವರು ನ್ಯೂಸ್ 18 ಗೆ ತಿಳಿಸಿದರು.




    ಬಜೆಟ್ ವಿವರ ಹೀಗಿದೆ
    ಗುರುವಾರ ಹಿರೇಕೆರೂರ ಪಟ್ಟಣ ಪಂಚಾಯತಿ ಸಭಾ ಭವನದಲ್ಲಿ ಜರುಗಿದ ಸಭೆಯಲ್ಲಿ ಪಟ್ಟಣ ಪಂಚಾಯತ್ ಒಟ್ಟು ಆದಾಯದ ನಿರೀಕ್ಷೆ ₹ 10,56,00,000 ಇದ್ದು, ಒಟ್ಟು ಖರ್ಚಿನ ನಿರೀಕ್ಷೆ,₹10,51,50,000 ಮತ್ತು ಒಟ್ಟು ₹4,50,000 ರೂಗಳ ಉಳಿತಾಯ ಬಜೆಟ್ ಅನ್ನು ಮಂಡಿಸಲಾಯಿತು.


    ಇದನ್ನೂ ಓದಿ: Haveri Viral Video: ಚೌಡೇಶ್ವರಿ ಜಾತ್ರೆಗೆ ಬನ್ನಿ, ಇದು ಸನ್ನಿ ಲಿಯೋನ್ ಫ್ಯಾನ್ಸ್ ಸ್ವಾಗತ!


    ಪಟ್ಟಣ ಪಂಚಾಯತ್ ಅಧ್ಯಕ್ಷ ಕಂಠಾಧರ ಅಂಗಡಿ ಆಯವ್ಯಯದ ಸಂಕ್ಷಿಪ್ತ ವಿವರಣೆಯನ್ನು ಸಭೆಯ ಸದಸ್ಯರಿಗೆ ಓದುವ ಮೂಲಕ ಅನುಮೋದನೆಯನ್ನು ಪಡೆದರು. “ವೇಗವಾಗಿ ಬೆಳೆಯುತ್ತಿರುವ ನಗರದ ಅವಶ್ಯಕತೆಗಳನ್ನು ಗಮನವಿರಿಸಿಕೊಂಡು ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ವಿಶೇಷ ಕಾಳಜಿವಹಿಸಲಾಗಿದೆ. ಹಿಂದುಳಿದ ಬಡಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಹಣಕಾಸು,ಕೇಂದ್ರ ಹಣಕಾಸು ಅಯೋಗ ಹಾಗೂ ವಿಶೇಷ ಅನುದಾನದಡಿಯಲ್ಲಿ ಪಟ್ಟಣದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಆದ್ಯತೆ ನೀಡಲಾಗಿದೆ ಎಂದರು. ನಂತರ ದಿನಾಂಕ 01-02-2022 ರಿಂದ 28-02-3023 ರವರೆಗಿನ ಖರ್ಚಿನ ಬಗ್ಗೆ ಚರ್ಚೆ ನಡೆಸಲಾಯಿತು.




    ಕೆಲವೊಂದು ಸದಸ್ಯರು ಬಜೆಟ್​ನಲ್ಲಿ ಪಟ್ಟಣಕ್ಕೆ ಅನುಕೂಲವಾದ ಯೋಜನೆಗಳನ್ನು ಇನ್ನು ಹೆಚ್ಚು ಜಾರಿಗೆ ತರಬೇಕಿತ್ತು. ಅದರಲ್ಲೂ ಪಟ್ಟಣದಲ್ಲಿನ ರಸ್ತೆ ಮತ್ತು ಚರಂಡಿ ದುರಸ್ತಿಗೆ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿತ್ತು ಎಂದು ಸಲಹೆ ನೀಡಿದರು. 2023-24 ರ ಬಜೆಟ್ ಮಂಡನೆ ಯಾವುದೇ ಗದ್ದಲ ಮತ್ತು ಗೊಂದಲಗಳಿಲ್ಲದೇ ಶಾಂತಯುತವಾಗಿ ಮಂಡನೆಯಾಯಿತು.


    ಇದನ್ನೂ ಓದಿ: Haveri Viral Video: ವಿಮಾನದಲ್ಲಿ ಅಮ್ಮನ ಹುಟ್ಟುಹಬ್ಬ ಆಚರಿಸಿದ ಹಾವೇರಿ ಹೈದ!


    ಮುಖ್ಯಾಧಿಕಾರಿ ಪಂಪಾಪತಿ ನಾಯಕ, ಅಕೌಂಟೆಂಟ್ ನಾಗರಾಜ ಶಾನಬೋಗ, ಉಪಾಧ್ಯಕ್ಷೆ ವಿಜಯಶ್ರೀ ಬಂಗೇರ ಸದಸ್ಯರಾದ ಕುಸುಮಾ ಬಣಕಾರ,ಸುಧಾ ಚಿಂದಿ, ದಿಲ್ಲಶಾದ ಬಳಿಗಾರ,ಸನಾವುಲ್ಲಾ ಮಕಾನದಾರ, ಚಂದ್ರಕಲಾ ಕೋರಿಗೌಡ್ರ, ಶಂಶದಾ ಕುಪ್ಪೇಲೂರ, ರಾಜು ಕರಡಿ, ಹನುಮಂತಪ್ಪ ಕುರುಬರ, ರಮೇಶ ಕೋಡಿಹಳ್ಳಿ. ರಮೇಶ ತೋರಣಗಟ್ಟಿ, ಬಸವರಾಜ ಕಟ್ಟಿಮನಿ,ಶಿವಕುಮಾರ ತಿಪ್ಪಶೇಟ್ಟಿ, ಪೂಜಾ ತಂಬಾಕದ, ಅಲ್ತಾಫ್ ಖಾನ್ ಪಠಾಣ, ರಜಿಯಾ ಅಸದಿ, ಕವಿತಾ ಹಾರ್ನಳ್ಳಿ,ಹೊನ್ನಪ್ಪ ಸಾಲಿ,ಹನುಮಂತಪ್ಪ ಮಡಿವಾಳರ ಹಾಗೂ ಪ.ಪಂ ಸಿಬ್ಬಂದಿ ಇದ್ದರು.


    ವರದಿ: ರಮೇಶ್ ಹೆಚ್, ನ್ಯೂಸ್ 18 ಕನ್ನಡ ಹಾವೇರಿ

    Published by:ಗುರುಗಣೇಶ ಡಬ್ಗುಳಿ
    First published: