ಹಾವೇರಿ: ಮಾನವೀಯತೆ ಅನ್ನೋದು ಮನುಷ್ಯನಿಗೊಂದೇ ಅಲ್ಲ, ಮನುಷ್ಯನಿಗಿಂತ ಹೆಚ್ಚು ಪ್ರಾಣಿಗಳಲ್ಲೂ ಇರುತ್ತೆ ಅನ್ನೋದಕ್ಕೆ ಅದ್ಭುತ ಉದಾಹರಣೆಯೊಂದು ಸಿಕ್ಕಿದೆ. ಈ ಮೂಕ ಪ್ರಾಣಿಗಳ ಮಾನವೀಯತೆ ಮನುಷ್ಯರೂ ಕಲಿಯಬೇಕಿದೆ. ಗರ್ಭಿಣಿಯಾಗಿರುವ ಹೆಣ್ಣು ನಾಯಿಗೆ ಇನ್ನೊಂದು ನಾಯಿಯೊಂದು (Dog Blood Donation) ರಕ್ತದಾನ ಮಾಡಿದ ಹೃದಯಸ್ಪರ್ಶಿ ಘಟನೆ ಹಾವೇರಿಯಲ್ಲಿ(Haveri News) ನಡೆದಿದೆ. ಎರಡು ತಿಂಗಳ ಗರ್ಭಿಣಿ 'ಜಿಪ್ಪಿ' ಎಂಬ ಹೆಸರಿನ ನಾಯಿಗೆ 'ಜಿಮ್ಮಿ' ಹೆಸರಿನ ನಾಯಿಯೊಂದು ರಕ್ತದಾನ ಮಾಡಿದೆ.
ತಕ್ಷಣ ರಕ್ತದ ಅಗತ್ಯವಿತ್ತು!
ಲಿಖಿತ್ ಹದಳಗಿ ಎಂಬುವವರಿಗೆ ಸೇರಿದ ಜಿಪ್ಪಿ ನಾಯಿ ಹಾವೇರಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಕೂಡಲೇ ರಕ್ತದ ಅಗತ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ: Haveri: ಪ್ರೀತಿಸಿ ಮನೆಯಿಂದ ಹೊರಬಿದ್ದ ಈ ಮಹಿಳೆಗೆ ಇಂದು ಇಡೀ ಸಮಾಜವೇ ಸೆಲ್ಯೂಟ್ ಮಾಡುತ್ತೆ!
350 ಎಂಎಲ್ ರಕ್ತದಾನ!
ಈ ವಿಷಯ ತಿಳಿದು ವೈಭವ ಪಾಟೀಲ್ ಎನ್ನುವವರು ತಮ್ಮ ನಾಯಿ ಜಿಮ್ಮಿಯನ್ನು ಕರೆತಂದು ರಕ್ತ ಒದಗಿಸಿದ್ದಾರೆ. ಜಿಮ್ಮಿಯ ದೇಹದಿಂದ 350 ಎಂಎಲ್ ರಕ್ತ ತೆಗೆದು ಜಿಪ್ಪಿಗೆ ನೀಡಿದ್ದಾರೆ ವೈದ್ಯರು.
ಇದನ್ನೂ ಓದಿ: Haveri: 1 ಕೋಟಿ 38 ಲಕ್ಷ ಬಹುಮಾನಕ್ಕೆ 800 ಪೈಲ್ವಾನರ ರಣರೋಚಕ ಕಾದಾಟ!
ಈ ಮೂಲಕ ರಕ್ತದಾನ ಮಹಾದಾನ ಎಂದು ಜಿಮ್ಮಿ ನಾಯಿ ಸಾರಿದೆ. ನಾಯಿಗಳ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ವರದಿ: ರಮೇಶ್. ಬಿ.ಹೆಚ್, ನ್ಯೂಸ್ 18 ಹಾವೇರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ