Haveri Viral News: ಡ್ರೈವರ್ ಜೀವ ಉಳಿಸಿದ ಚುನಾವಣಾಧಿಕಾರಿ! ವಿಡಿಯೋ ಇಲ್ಲಿದೆ

ಚುನಾವಣಾ ಅಧಿಕಾರಿ

ಚುನಾವಣಾ ಅಧಿಕಾರಿ

140 ಕಿಲೋ ಮೀಟರ್ ಸ್ಪೀಡ್​ನಲ್ಲಿ ವಾಹನವನ್ನು ಓಡಿಸಿಕೊಂಡು ಹಾವೇರಿ ಸರ್ಕಾರಿ ಆಸ್ಪತ್ರೆಗೆ ಡ್ರೈವರ್ ಬಾಬಣ್ಣ ನದಾಪ್ ಅವರನ್ನು ಚುನಾವಣಾ ಅಧಿಕಾರಿ ಇಬ್ರಾಹಿಂ ದೊಡ್ಡಮನಿ ಕರೆತಂದಿದ್ದಾರೆ.

  • News18 Kannada
  • 5-MIN READ
  • Last Updated :
  • Haveri, India
  • Share this:

ಹಾವೇರಿ: ಎಲ್ಲೆಲ್ಲೂ ಚುನಾವಣೆಯ ಹವಾ. ಚುನಾವಣಾ ಅಧಿಕಾರಿಗಳು ಈಗಾಗಲೇ ರಾಜ್ಯದ ವಿವಿಧೆಡೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಹಾವೇರಿಯ ರಾಣೇಬೆನ್ನೂರಿನಲ್ಲೊಂದು (Ranebennur Viral News) ಭಾವನಾತ್ಮಕ ಘಟನೆ ನಡೆದಿದೆ. ಪ್ರಾಣದ ಹಂಗು ತೊರೆದು ಚುನಾವಣಾ ಅಧಿಕಾರಿಯೋರ್ವರು (Haveri Viral News) ತಮ್ಮ ಚಾಲಕನ (Driver) ಪ್ರಾಣ ಉಳಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಸರ್ಕಾರಿ ಡ್ರೈವರ್​ಗೆ ಹೃದಯಾಘಾತವಾಗಿತ್ತು.


ಚಾಲಕನ ಪ್ರಾಣ ಉಳಿಸಲು ತಾಲೂಕು ಚುನಾವಣಾಧಿಕಾರಿ ಇಬ್ರಾಹಿಂ ದೊಡ್ಡಮನಿಯ ಭಾರೀ ಪ್ರಯತ್ನ ಮಾಡಿದ್ದಾರೆ.


ಇದನ್ನೂ ಓದಿ: Haveri: ಪ್ರೀತಿಸಿ ಮನೆಯಿಂದ ಹೊರಬಿದ್ದ ಈ ಮಹಿಳೆಗೆ ಇಂದು ಇಡೀ ಸಮಾಜವೇ ಸೆಲ್ಯೂಟ್ ಮಾಡುತ್ತೆ!
140 ಕಿಲೋ ಮೀಟರ್ ಸ್ಪೀಡಲ್ಲಿ ವಾಹನ ಚಾಲನೆ!
ಹೃದಯಾಘಾತವಾಗಿ ಒದ್ದಾಡುತ್ತಿದ್ದ ಚಾಲಕನನ್ನು ಹಿಂಬದಿ ಸೀಟ್​ನಲ್ಲಿ ಹಾಕಿಕೊಂಡು ಡ್ರೈವಿಂಗ್ ಮಾಡಿದ ಚುನಾವಣಾ ಅಧಿಕಾರಿ ದೊಡ್ಡಮನಿ. 140 ಕಿಲೋ ಮೀಟರ್ ಸ್ಪೀಡ್​ನಲ್ಲಿ ವಾಹನವನ್ನು ಓಡಿಸಿಕೊಂಡು ಹಾವೇರಿ ಸರ್ಕಾರಿ ಆಸ್ಪತ್ರೆಗೆ ಡ್ರೈವರ್ ಬಾಬಣ್ಣ ನದಾಪ್ ಅವರನ್ನು ಚುನಾವಣಾ ಅಧಿಕಾರಿ ಇಬ್ರಾಹಿಂ ದೊಡ್ಡಮನಿ ಕರೆತಂದಿದ್ದಾರೆ.


ಇದನ್ನೂ ಓದಿ: Dog Blood Donation: ಜಿಮ್ಮಿಗೆ ರಕ್ತ ನೀಡಿದ ಜಿಪ್ಪಿ! ಇದು ಹೃದಯಸ್ಪರ್ಶಿ ನಾಯಿ ಕಥೆ!


ಒಟ್ಟಾರೆ ಮಾನವೀಯತೆ ತೋರಿದ ಅಧಿಕಾರಿಯ ವಿಡಿಯೋ ಎಲ್ಲಡೆ ವೈರಲ್ ಆಗಿದೆ.

top videos
    First published: