• Home
 • »
 • News
 • »
 • haveri
 • »
 • Haveri Viral Video: ವಿಮಾನದಲ್ಲಿ ಅಮ್ಮನ ಹುಟ್ಟುಹಬ್ಬ ಆಚರಿಸಿದ ಹಾವೇರಿ ಹೈದ!

Haveri Viral Video: ವಿಮಾನದಲ್ಲಿ ಅಮ್ಮನ ಹುಟ್ಟುಹಬ್ಬ ಆಚರಿಸಿದ ಹಾವೇರಿ ಹೈದ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ ಹನುಮಂತಪ್ಪ ಸುಂಕದ ತಮ್ಮ ತಾಯಿ ಪಾರ್ವತವ್ವ ಅವರ 63ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

 • Share this:

  ಹಾವೇರಿ: ವಿಮಾನ ಪ್ರಯಾಣ ಅಂದ್ರೆ ಯಾವಾಗಲೂ ಕುತೂಹಲ, ರೋಮಾಂಚನ ಇದ್ದೇ ಇರುತ್ತೆ, ಅದ್ರಲ್ಲೂ ವಯಸ್ಸಾದ ಹಿರಿಜೀವಗಳಿಗಂತೂ ತಮ್ ಮಕ್ಕಳು ಒಮ್ಮೆಯಾದ್ರೂ ವಿಮಾನದಲ್ಲಿ ಕೂರ್ಸಿದ್ರೆ ಆಗೋ ಆನಂದವೇ ಬೇರೆ. ನಮ್ ಹಾವೇರಿಯ ಹಳ್ಳಿ ಹೈದರೊಬ್ರು ತಮ್ಮ ತಾಯಿಯ ಬರ್ತ್ ಡೇಯನ್ನ (Mother's Birthday) ವಿಮಾನದಲ್ಲಿ ಆಚರಿಸಿ ಅಮ್ಮನಿಗೆ (Son Mother Relationship) ಖುಷಿ ಕೊಟ್ಟಿದ್ದಾರೆ.


  ಯೆಸ್! ಸಾಮಾನ್ಯವಾಗಿ ನಾವು ನೀವೂ ಸ್ನೇಹಿತರೊಂದಿಗೆ, ನಮ್ಮ ಆತ್ಮೀಯರೊಂದಿಗೆ ಮನೆಯಲ್ಲಿ ಬರ್ತ್​ ಡೇ ಆಚರಣೆ ಮಾಡುವುದನ್ನ ನೋಡಿದ್ದೇವೆ. ಆದರೆ ಇಲ್ಲೋರ್ವ ಪೊಲೀಸ್ ಕಾನ್ಸ್‌ಟೇಬಲ್‌ ಆಕಾಶದಲ್ಲಿ ಹಾರಾಡುವಾಗ ತಾಯಿಯ ಹುಟ್ಟುಹಬ್ಬ ಆಚರಿಸಿ ತಾಯಿಯ ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮ ತಾಯಿಯ 63ನೇ ಜನ್ಮದಿನವನ್ನು ವಿಮಾನದಲ್ಲಿ ಆಚರಿಸಿ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ.
  ಇದನ್ನೂ ಓದಿ: Haveri Viral Video: ಚೌಡೇಶ್ವರಿ ಜಾತ್ರೆಗೆ ಬನ್ನಿ, ಇದು ಸನ್ನಿ ಲಿಯೋನ್ ಫ್ಯಾನ್ಸ್ ಸ್ವಾಗತ!


  ಪಾರ್ವತವ್ವ ಅವರ 63ನೇ ಹುಟ್ಟುಹಬ್ಬ
  ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ ಹನುಮಂತಪ್ಪ ಸುಂಕದ ತಮ್ಮ ತಾಯಿ ಪಾರ್ವತವ್ವ ಅವರ 63ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಾಯಿಯ ಬರ್ತ್​ ಡೇ ಪ್ರಯುಕ್ತ ಇದೇ ಮೊದಲ ಬಾರಿ ತಂದೆ, ತಾಯಿ ಮತ್ತು ಮಗಳೊಂದಿಗೆ ಕಾನ್ಸ್‌ಟೇಬಲ್‌ ಹನುಮಂತಪ್ಪ, ವಿಮಾನದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಿಸಿದ್ದಾರೆ.


  ಇದನ್ನೂ ಓದಿ: Haveri: ಅದ್ಭುತ ಪರಿಮಳದ ಏಲಕ್ಕಿ ಹಾರ, ಪ್ರಧಾನಿ ಮೋದಿ ಕೊರಳಿಗೂ ಹಾವೇರಿ ಮಾಲೆ!


  ಕುಟುಂಬ ಸಮೇತ ವಿಮಾನ ಏರಿದ ಹನುಮಂತಪ್ಪ
  ಕಾನ್ಸ್‌ಟೇಬಲ್‌ ಹನುಮಂತಪ್ಪ ಸದಾ ಕೃಷಿ ಕೆಲಸದಲ್ಲೇ ನಿರತರಾಗಿರುತ್ತಿದ್ದ ತಮ್ಮ ತಾಯಿ, ತಂದೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ 2 ಕೆಜಿ ಕೇಕ್ ಖರೀದಿಸಿ, ತನ್ನ ತಾಯಿ ಪಾರ್ವತವ್ವ, ತಂದೆ ಲಕ್ಷ್ಮಣ ಮತ್ತು ಮಗಳು ಚಂದನಾಳೊಂದಿಗೆ ವಿಮಾನ ಏರಿದ್ದಾರೆ. ಆ ಬಳಿಕ ಕಾನ್ಸ್‌ಟೇಬಲ್‌ ಹನುಮಂತಪ್ಪ ವಿಮಾನದಲ್ಲೇ ಕೇಕ್ ಕತ್ತರಿಸಿ ತನ್ನ ತಾಯಿಯ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಇದಕ್ಕೆ ವಿಮಾನದಲ್ಲಿಯ ಸಿಬ್ಬಂದಿ ಕೂಡಾ ಸಾಥ್ ನೀಡಿ, ತಾಯಿಗೆ ಹರಸಿ ಆಶಿರ್ವಾದ ಮಾಡಿದ್ದಾರೆ.


  ಮಾಹಿತಿ, ವಿಡಿಯೋ: ರಮೇಶ್, ನ್ಯೂಸ್ 18 ಕನ್ನಡ ಹಾವೇರಿ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು