ಹಾವೇರಿ: ಅಖಾಡಕ್ಕೆ ಕಾಲಿಟ್ರೆ ಎದುರು ನಿಂತವ್ರಿಗೆ ಎದೆಯಲ್ಲಿ ಢವಢವ! ತಣ್ಣನೆ ನಡುಕ ನಡುಕ! ಆದರೆ ಇಡೀ ರಾಜ್ಯದಲ್ಲೇ ಹೆಸರು ಮಾಡಿದ್ದ ಹೋರಿ ಚಾಮುಂಡಿ ಎಕ್ಸ್ಪ್ರೆಸ್ ಇನ್ಮೇಲೆ ಅಭಿಮಾನಿಗಳಿಗೆ ನೆನಪು ಮಾತ್ರ. ದನ ಬೆದರಿಸುವ ಸ್ಪರ್ಧೆಯಲ್ಲಿ ಹೆಸರುವಾಸಿಯಾಗಿದ್ದ ಹೋರಿ ಚಾಮುಂಡಿ ಎಕ್ಸ್ಪ್ರೆಸ್ 313 ನಿಧನಕ್ಕೆ ಇಡೀ ಹಾವೇರಿಯೇ ಬೇಸರದ ಮಡುವಲ್ಲಿ ಮುಳುಗಿದೆ. ಚಾಮುಂಡಿ ಎಕ್ಸ್ಪ್ರೆಸ್ 313 (Chamundi Express) ಮೃತಪಟ್ಟು 9ನೇ ದಿನದ ನಿಮಿತ್ತ ಹಾವೇರಿ ಸಮೀಪದ (Haveri News) ಚಿಕ್ಕಲಿಂಗದಳ್ಳಿ ಗ್ರಾಮದಲ್ಲಿ ಶನಿವಾರ ಚಾಮುಂಡಿ ಎಕ್ಸ್ಪ್ರೆಸ್ ಹೋರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯ್ತು.
ಮೆಹಬೂಬಸಾಬ್ ದೇವಗಿರಿ ಎಂಬುವವರ ಮನೆಯಲ್ಲಿ ಜನಿಸಿದ್ದ ಚಾಮುಂಡಿ ಎಕ್ಸ್ಪ್ರೆಸ್ ಹಾವೇರಿ, ದಾವಣಗೆರೆ, ಶಿವಮೊಗ್ಗ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ದನ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿತ್ತು.
ಚಾಮುಂಡಿ ಎಕ್ಸಪ್ರೆಸ್ ಹೋರಿಯ ತಿಥಿ ಆಚರಿಸಿದ ಗ್ರಾಮಸ್ಥರು
ಇದೇ ಡಿಸೆಂಬರ್ 2 ರಂದು ಅನಾರೋಗ್ಯದಿಂದ ಅಸುನೀಗಿದ್ದ ಚಾಮುಂಡಿ ಎಕ್ಸ್ಪ್ರೆಸ್ ಹೋರಿಯನ್ನು ಡಿಸೆಂಬರ್ 3 ರಂದು ಮಾಸೂರಿನ ಹೊರವಲಯದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಹೋರಿ ಅಸುನೀಗಿ 9 ದಿನಗಳಾದ ಹಿನ್ನೆಲೆಯಲ್ಲಿ ಹಾವೇರಿ ಸಮೀಪದ ಚಿಕ್ಕಲಿಂಗದಹಳ್ಳಿಯ ಗ್ರಾಮಸ್ಥರು ಚಾಮುಂಡಿ ಎಕ್ಸಪ್ರೆಸ್ ಹೋರಿಯ ತಿಥಿ ಆಚರಿಸಿದರು.
ಇದನ್ನೂ ಓದಿ: Peacock Park: 139 ಎಕರೆಯಲ್ಲಿ ಕರ್ನಾಟಕದ ಮೊದಲ ನವಿಲುಧಾಮ! ಆಹಾ, ಇದೇ ನಂದಗೋಕುಲ!
ಭಾವಚಿತ್ರ ಇಟ್ಟು ಪುಷ್ಪಮಾಲೆ ಹಾಕಿ ಪೂಜೆ
ಹೋರಿಯ ಭಾವಚಿತ್ರ ಮತ್ತು ಕಲಾವಿದ ಚಿತ್ರಿಸಿದ ಭಾವಚಿತ್ರ ಇಟ್ಟು ಪುಷ್ಪಮಾಲೆ ಹಾಕಿ ಪೂಜಿಸಿದ್ರು. ಚಾಮುಂಡಿ ಎಕ್ಸ್ಪ್ರೆಸ್ ಹೋರಿಗೆ ಇಷ್ಟವಾದ ಮೊಟ್ಟೆ, ರಾಗಿ, ಹತ್ತಿಕಾಳು, ಗೋವಿನ ಜೋಳದ ತೆನೆಗಳನ್ನ ಇಡಲಾಗಿತ್ತು. ದೂರದ ಊರಿಂದ ಆಗಮಿಸಿದ ಚಾಮುಂಡಿಯ ಅಭಿಮಾನಿಗಳು ತಿಥಿ ಕಾರ್ಯದಲ್ಲಿ ಭಾಗಿಯಾದ್ರು.
ಇದನ್ನೂ ಓದಿ: Spatika Linga: ಹಿರೇಮಠಕ್ಕೆ ಬಂತು 1 ಕೋಟಿ ಮೌಲ್ಯದ ಹೊಸ ಸ್ಫಟಿಕ ಲಿಂಗ
ಒಟ್ಟಾರೆ ಯಾವ ಸ್ಟಾರ್ಗೂ ಕಡಿಮೆ ಇಲ್ಲದಂತೆ ಸಾವಿರಾರು ಅಭಿಮಾನಿಗಳನ್ನ ಸಂಪಾದಿಸಿದ್ದ ಚಾಮುಂಡಿ ಎಕ್ಸ್ಪ್ರೆಸ್ 313 ಹೋರಿ ನೆನಪಲ್ಲಿ ಹಾವೇರಿಯ ಜನತೆ ಮಿಂದು ಮುಳುಗಿತು.
ಮಾಹಿತಿ: ರಮೇಶ್ ಬಿ.ಎಚ್, ನ್ಯೂಸ್ 18 ಕನ್ನಡ ಹಾವೇರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ