• Home
  • »
  • News
  • »
  • haveri
  • »
  • Haveri: 11 ಮಕ್ಕಳಿದ್ದರೂ ಅನಾಥೆ ಈ ತಾಯಿ, ದಯಾಮರಣ ಕೋರಿ ಅರ್ಜಿ ಸಲ್ಲಿಸಿದ 79ರ ವೃದ್ಧೆ

Haveri: 11 ಮಕ್ಕಳಿದ್ದರೂ ಅನಾಥೆ ಈ ತಾಯಿ, ದಯಾಮರಣ ಕೋರಿ ಅರ್ಜಿ ಸಲ್ಲಿಸಿದ 79ರ ವೃದ್ಧೆ

ಪುಟ್ಟವ್ವ

ಪುಟ್ಟವ್ವ

ವೃದ್ಧೆಯೊಬ್ಬರು ಜಿಲ್ಲಾ ಆಡಳಿತದ ಮೂಲಕ ರಾಷ್ಟ್ರಪತಿಗಳ ಮುಂದೆ ತೀವ್ರ ದೈಹಿಕ ಮತ್ತು ಮಾನಸಿಕ ನೋವಿನಿಂದ ಕಂಗಾಲಾಗಿರುವ ಇವರು ತಮ್ಮ ಇಳಿವಯಸ್ಸಿನಲ್ಲಿ ದಯಾ ಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. 11 ಮಕ್ಕಳಿದ್ದರೂ ಯಾರೂ ನೋಡಿಕೊಳ್ಳದೆ ಇರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

ಹಾವೇರಿ: 79 ವರ್ಷದ ಮಹಿಳೆಯೊಬ್ಬರು ಜಿಲ್ಲಾ ಆಡಳಿತದ ಮೂಲಕ ರಾಷ್ಟ್ರಪತಿಗಳ (President) ಮುಂದೆ ತೀವ್ರ ದೈಹಿಕ ಮತ್ತು ಮಾನಸಿಕ ನೋವಿನಿಂದ ಕಂಗಾಲಾಗಿರುವ ಇವರು ತಮ್ಮ ಇಳಿವಯಸ್ಸಿನಲ್ಲಿ ದಯಾ ಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಹಾವೇರಿಯ (Haveri) ಜಿಲ್ಲಾಧಿಕಾರಿಗಳು “ರಾಣೆಬೆನ್ನೂರು ಪಟ್ಟಣದ ಸಮೀಪದ ರಂಗನಾಥನಗರ ನಿವಾಸಿ ಪುಟ್ಟವ್ವ ಹನುಮಂತಪ್ಪ ಕೊಟ್ಟೂರ ಅವರು 30 ಎಕರೆ ಜಮೀನು (land) ಹೊಂದಿದ್ದರು. ಏಳು ಮನೆಗಳು ಮತ್ತು ಫ್ಲಾಟ್‌ಗಳನ್ನು ಹೊಂದಿದ್ದಳು. ಆದರೆ ಅತ್ಯಂತ ದುಖಃಕರ ಸಂಗತಿಯೆಂದರೆ ಈ ಪುಟ್ಟವ್ವನಿಗೆ ಯಾರು ಇಲ್ಲ ಎಂದುಕೊಳ್ಳಬೇಡಿ, ಇವರಿಗೆ ಬರೋಬ್ಬರಿ 11 ಮಕ್ಕಳು (Children) ಇದ್ದಾರೆ. ಆದರೆ ಈ ವಯಸ್ಸಾದ ಸಮಯದಲ್ಲಿ ಅವರು ಯಾರು ಈಕೆಯನ್ನು ನೋಡಿಕೊಳ್ಳುತ್ತಿಲ್ಲ. ಆ ಕಾರಣದಿಂದಲೇ ಮನನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.


ಏನಿದು ಘಟನೆ?
“ನಾನು ಏಳು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರೂ ಈ ವಯಸ್ಸಿನಲ್ಲಿ ಯಾರೂ ತನ್ನನ್ನು ನೋಡಿಕೊಳ್ಳಲು ಸಿದ್ಧರಿಲ್ಲ ಎಂದು ವೃದ್ಧೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅನಾರೋಗ್ಯದಿಂದ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ” ಎಂದು ಪುಟ್ಟವ್ವ ಹೇಳಿದರು. ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲುಗಳ ಮೇಲೆ ಒಬ್ಬಳೇ ಕುಳಿತು ಅಳುತ್ತಿದ್ದಳು. ನಂತರ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರಿಗೆ ದಯಾ ಮರಣಕ್ಕೆ ಅನುಮತಿ ನೀಡಲು ಮನವಿಯನ್ನು ಸಲ್ಲಿಸಿದರು.


ಪುಟ್ಟವ್ವಳ ಪತಿ ಹನುಮಂತಪ್ಪ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಆದರೆ ಈಗಲೂ ಮನೆಗಳು, ಜಮೀನು ಸೇರಿದಂತೆ ಎಲ್ಲವೂ ಪುಟ್ಟವ್ವಳ ಪತಿ ಹನುಮಂತಪ್ಪನ ಹೆಸರಿನಲ್ಲೇ ಇವೆ. ಇಷ್ಟೆಲ್ಲಾ ಇದ್ದರೂ ಇಳಿ ವಯಸ್ಸಿನಲ್ಲಿರೋ ಹೆತ್ತ ತಾಯಿಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ.  ಪುಟ್ಟವ್ವಳಿಗೆ ಹಲವು ವಯೋಸಹಜ ಕಾಯಿಲೆಗಳೂ ಇವೆ. ಗಂಡು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಇದ್ದರೂ ಯಾರೂ ಪುಟ್ಟವ್ವಳಿಗೆ ಒಂದು ಹೊತ್ತಿನ ಊಟ ಹಾಕುತ್ತಿಲ್ಲ. ಆರೋಗ್ಯ ಸಮಸ್ಯೆಯಾದಾಗ ಆಸ್ಪತ್ರೆಗೂ ಕರೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ನನಗೆ ಈ ಜೀವನ ಸಾಕಾಗಿದೆ. ದಯಾಮರಣ ಕೊಡಿ ಅಂತ ವೃದ್ಧೆ ಪುಟ್ಟವ್ವ ದಯಾಮರಣದ ಪತ್ರ ಹಿಡಿದುಕೊಂಡು ಜಿಲ್ಲಾಡಳಿತ ಭವನಕ್ಕೆ ಬಂದಿದ್ದಾಳೆ.


ಇದನ್ನೂ ಓದಿ: Udupi: ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ IAS ಅಧಿಕಾರಿ; ಹೂಡೆ ಬೀಚ್​​ನಲ್ಲಿ ನೀರು ಪಾಲಾದ ಮೂವರು


“ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ. 7 ಜನ ಗಂಡು ಮಕ್ಕಳ ಪೈಕಿ ಕಿರಿಯ ಮಗ ಗೋವಿಂದರಾಜ ಮಾತ್ರ ಪುಟ್ಟವ್ವಳಿಗೆ ಕೆಲವು ವರ್ಷಗಳ ಕಾಲ ನೋಡಿಕೊಂಡಿದ್ದರು. ಆದರೆ ಅವರ ಆರ್ಥಿಕ ಪರಿಸ್ಥಿತಿ ಪ್ರಸ್ತುತ ಸರಿ ಇಲ್ಲ. ಪತಿಯ ಹೆಸರಿನಲ್ಲಿರೋ ಆಸ್ತಿಗಳಲ್ಲಿ ಅಲ್ಪಸ್ವಲ್ಪ ಮಾರಾಟ ಮಾಡಿ ಜೀವನ ಸಾಗಿಸಬೇಕು ಎಂದರೆ ಗಂಡು ಮಕ್ಕಳು ಅದಕ್ಕೂ ಬಿಡುತ್ತಿಲ್ಲ. ಎರಡು ಹೊತ್ತಿನ ಊಟವನ್ನೂ ಹಾಕುತ್ತಿಲ್ಲ. ಹೀಗಾಗಿ 11 ಜನ ಮಕ್ಕಳಿದ್ರೂ ಅಕ್ಕಪಕ್ಕದ ಮನೆಯವರು, ಅವರಿವರು ಕೊಟ್ಟ ಊಟ ಮಾಡಿ ಬದುಕಬೇಕಾಗಿದೆ” ಎಂದು ಪುಟ್ಟವ್ವ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.


ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ
"ಮಕ್ಕಳು ನೋಡಿಕೊಳ್ಳದೇ ಇರೋದನ್ನು ಕಂಡು ಜೀವನವೇ ಸಾಕು ಸಾಕು ಅನ್ನಿಸಿದೆ. ನನಗೆ ದಯಾಮರಣ ಕೊಡಿಸಿ" ಅಂತ ವೃದ್ಧ ತಾಯಿ ಪುಟ್ಟವ್ವ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾಳೆ.


ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಬರೆದಿರೋ ಪತ್ರ ಹಿಡಿದು ಬಂದಿರೋ ವೃದ್ಧೆಯನ್ನು ಭೇಟಿಯಾಗಿ ಹಿರಿಯ ನಾಗಕರಿಕರ ಕಲ್ಯಾಣ ಇಲಾಖೆ ಅಧಿಕಾರಿ ಆಶು ನದಾಫ ಸಮಸ್ಯೆ ಆಲಿಸಿದರು. ಪುಟ್ಟವ್ವಳಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು. ಉಳಿದಂತೆ ಪುಟ್ಟವ್ವಳಿಗೆ ಯಾವುದೇ ಸಮಸ್ಯೆ ಆಗದಂತೆ ಉಳಿದುಕೊಳ್ಳಲು ವೃದ್ಧಾಶ್ರಮದಲ್ಲಿ ವ್ಯವಸ್ಥೆ ಕಲ್ಪಿಸೋದಾಗಿ ಹೇಳಿದ್ದಾರೆ.


ಪುಟ್ಟವ್ವ ದಯಾಮರಣ ಕೋರಿ ಪತ್ರ ಹಿಡಿದುಕೊಂಡು ಬಂದಿದ್ದು ಗಮನಿಸಿ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಅಧಿಕಾರಿ ವೃದ್ಧೆಗೆ ಧೈರ್ಯ ತುಂಬಿದ್ದಾರೆ. ನಂತರ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಪುಟ್ಟವ್ವ ಮಕ್ಕಳಿಂದ ಆಗಿರೋ ಸಮಸ್ಯೆ ವಿವರಿಸಿದ್ದಾಳೆ. ಆದರೆ 11 ಜನ ಮಕ್ಕಳಿದ್ರೂ ಇಳಿ ವಯಸ್ಸಿನಲ್ಲಿರೋ ಆಕೆಯನ್ನು ನೋಡಿಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಷ್ಟಕ್ಕೂ ಈ ದಯಾಮರಣ ಎಂದ್ರೇನು? ಇದನ್ನು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದೇ? ಇದಕ್ಕೆ ಯಾವ ರೀತಿ ಪ್ರಕ್ರಿಯೆ ಇದೆ ಎಂಬೆಲ್ಲ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ.


ದಯಾಮರಣ ಎಂದ್ರೇನು?
ಇದನ್ನು ಆಂಗ್ಲ ಭಾಷೆಯಲ್ಲಿ 'ಯೂಥನೇಷಿಯಾ' ಎನ್ನುತ್ತಾರೆ. ಕೋಮಾ ಸ್ಥಿತಿಯಲ್ಲಿರುವ ಅಥವಾ ಇನ್ನು ಮುಂದೆ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ವ್ಯಕ್ತಿಯ ಜೀವವನ್ನು ತೆಗೆಯುವುದೇ ದಯಾಮರಣ. ವಾಸಿಯಾಗದ ಖಾಯಿಲೆಯಿಂದ ಬಳಲುತ್ತಿರುವ ರೋಗಿಯ ಚೇತರಿಕೆ ಬಗ್ಗೆ ವೈದ್ಯರು ಯಾವುದೇ ಭರವಸೆ ವ್ಯಕ್ತಪಡಿಸದ ಸಂದರ್ಭದಲ್ಲಿ ರೋಗಿಗೆ ಮತ್ತಷ್ಟು ನೋವನ್ನುಂಟು ಮಾಡುವ ಜೀವಾಧಾರಕ ವ್ಯವಸ್ಥೆಯನ್ನು ನಿರಾಕರಿಸುವ ಹಕ್ಕನ್ನು ಅವರಿಗೆ ನೀಡುವ ಸ್ವಾತಂತ್ರ್ಯದ ಹಕ್ಕು ಇದಾಗಿದೆ.


ಇದನ್ನೂ ಓದಿ: Student Protest: ವಿವಿಯ ಒಂದು ಸುತ್ತೋಲೆಯಿಂದ ಸಿಡಿದೆದ್ದ ವಿದ್ಯಾರ್ಥಿಗಳು


ಈ ಮೂಲಕ ಅನಾರೋಗ್ಯದಿಂದ ಬಳಲುತ್ತಿರುವವರು ದಯಾಮರಣ ಪಡೆಯಬಹುದೆಂದು ಸುಪ್ರೀಂ ಕೋರ್ಟ್‌ ಕೂಡ ಇದಕ್ಕೆ ಅನುಮತಿ ನೀಡಿದೆ. ಹೆಚ್ಚಿನ ಪ್ರಕರಣಗಳಲ್ಲಿ ಆ ವ್ಯಕ್ತಿಯ ಕೋರಿಕೆಯ ಮೇರೆಗೆ ದಯಾಮರಣದ ಅವಕಾಶ ಕಲ್ಪಿಸಲಾಗುತ್ತದೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಆ ವ್ಯಕ್ತಿಯು ಅಂತಹ ಕೋರಿಕೆ ಸಲ್ಲಿಸುವ ಸ್ಥಿತಿಯಲ್ಲೇ ಇರುವುದಿಲ್ಲ.

Published by:Ashwini Prabhu
First published: