• ಹೋಂ
 • »
 • ನ್ಯೂಸ್
 • »
 • ಹಾಸನ
 • »
 • Hassan: ಸೊಸೈಟಿ ಅಕ್ಕಿ ರಾತ್ರೋ ರಾತ್ರಿ ಮಾಯ, ಕೊನೆಗೂ ಪತ್ತೆಯಾದ ಕಾಡಿನ ಕಳ್ಳ!

Hassan: ಸೊಸೈಟಿ ಅಕ್ಕಿ ರಾತ್ರೋ ರಾತ್ರಿ ಮಾಯ, ಕೊನೆಗೂ ಪತ್ತೆಯಾದ ಕಾಡಿನ ಕಳ್ಳ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನಿನ್ನೆಯಷ್ಟೇ ಸೊಸೈಟಿಗೆ ಅಕ್ಕಿ ಲೋಡ್ ಬಂದಿತ್ತು. ಆದರೆ ಈ ಅಕ್ಕಿ ರಾತ್ರೋ ರಾತ್ರಿ ಮಾಯವಾಗಿದೆ. ಅಕ್ಕಿ ಮಾಯವಾಗಿದ್ದು ಹೇಗೆ ಎಂದು ಹುಡುಕಿದಾಗ ವಿಚಿತ್ರ ಸತ್ಯ ಹೊರಬಿದ್ದಿದೆ!

 • News18 Kannada
 • 2-MIN READ
 • Last Updated :
 • Hassan, India
 • Share this:

  ಹಾಸನ: ಸೊಸೈಟಿಯೊಂದಕ್ಕೆ ಸಾರ್ವಜನಿಕರಿಗೆ ವಿತರಿಸೋಕೆ ತಂದಿದ್ದ ಪಡಿತರ ಅಕ್ಕಿ ರಾತ್ರೋರಾತ್ರಿ ಮಾಯವಾಗಿದೆ. ಆದ್ರೆ ಅಕ್ಕಿ (Rice) ಮಾಯವಾಗಿದ್ದು ಹೇಗೆ ಎಂದು ತಿಳಿಯೋಕೆ ಸಿಸಿಟಿವಿ ಫೂಟೇಜ್ ಚೆಕ್ ಮಾಡಿದವರು ಒಮ್ಮೆ ಹೌಹಾರಿದ್ದಾರೆ. ಸೊಸೈಟಿಗೆ (Hassan Society) ಬಂದು ರಾತ್ರೋ ರಾತ್ರಿ ಅಕ್ಕಿ ನಾಪತ್ತೆಯಾಗುವಂತೆ ಮಾಡಿದ್ದು ಒಂದು ಕಾಡಾನೆ!


  ಆನೆಯೊಂದು ಸೊಸೈಟಿಗೆ ಬಂದು ರೇಷನ್ ಅಕ್ಕಿ ತಿಂದುಹೋದ ವಿಚಿತ್ರ ಘಟನೆ ಹಾಸನದಲ್ಲಿ ನಡೆದಿದೆ. ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘದ ಕಬ್ಬಿಣದ ರೋಲಿಂಗ್ ಷೆಲ್ಟರ್ ಒಡೆದು ಕಾಡಾನೆಯೊಂದು ಅಕ್ಕಿ ತಿಂದು ಹೋಗಿದೆ.


  ಹದಿಮೂರು ಚೀಲ‌ ಅಕ್ಕಿ ಎಳೆದಾಡಿ ತಿಂದ ಕಾಡಾನೆ
  ನಿನ್ನೆಯಷ್ಟೇ ಸೊಸೈಟಿಗೆ ಅಕ್ಕಿ ಲೋಡ್ ಬಂದಿತ್ತು. ಮುಂಜಾನೆ 4.15 ರ ಸಮಯದಲ್ಲಿ ಕಾಡಾನೆ ಸೊಸೈಟಿ ಆವರಣಕ್ಕೆ ಬಂದಿದೆ. ಈ ಮುಂದಿನ ಹಾಗೂ ಹಿಂದಿ‌ನ ಬಾಗಿಲನ್ನು ಒಡೆದು ಹದಿಮೂರು ಚೀಲ‌ ಅಕ್ಕಿ ಎಳೆದಾಡಿ ತಿಂದಿದೆ.


  ಇದನ್ನೂ ಓದಿ: Hassan: ಮರಿಯನ್ನೇ ಮರೆತ ಕಾಡಾನೆ! ಅರಣ್ಯ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ


  ಸಿಸಿಟಿವಿ ಪರಿಶೀಲಿಸಿದಾಗ ವಿಷಯ ಗೊತ್ತಾಯ್ತು!
  ಇಂದು ಬೆಳಿಗ್ಗೆ ಸೊಸೈಟಿ ಸೆಕ್ರೆಟರಿ ಸತೀಶ್ ಎಂಬುವವರು ಅಕ್ಕಿ ವಿತರಣೆಗೆ ಹೋದ ವೇಳೆ ಮುರಿದಿದ್ದ ಸೊಸೈಟಿ ಬಾಗಿಲು ಕಂಡಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಾಡಾನೆ ದಾಂಧಲೆ ಬೆಳಕಿಗೆ ಬಂದಿದೆ.
  ಇದನ್ನೂ ಓದಿ: Arecanut Farmers: ಅಡಿಕೆಯಿಂದ ಕ್ಯಾನ್ಸರ್ ಬರಲ್ಲ ಎಂದ ಮಿನಿಸ್ಟರ್, ಬಯಲುಸೀಮೆಯಲ್ಲಿ ಅಡಿಕೆ ಕೃಷಿ ಹೆಚ್ಚಾಗಿದ್ದು ಇದಕ್ಕೇನಾ?


  10 ತಿಂಗಳ ಹಿಂದೆಯೂ ಹೀಗೇ ಆಗಿತ್ತು!
  ಕಳೆದ ಹತ್ತು ತಿಂಗಳ ಹಿಂದೆ 22-4-2022 ರಂದು ಇದೇ ಆನೆ ಇದೇ ಸೊಸೈಟಿ ಬಾಗಿಲು ಮುರಿದು ಕಾಡಾನೆ ನಾಲ್ಕು ಕ್ವಿಂಟಾಲ್ ಅಕ್ಕಿ ತಿಂದಿತ್ತು ಎಂದು ನೆನಪಿಸಿಕೊಳ್ತಾರೆ ಸ್ಥಳೀಯರು. ಮತ್ತೆ ಅದೇ ಅನುಘಟ್ಟ ಗ್ರಾಮದ ಸೊಸೈಟಿಗೆ ಬಂದ ಕಾಡಾನೆ ಅಕ್ಕಿ ಕಬಳಿಸಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: