ಹಾಸನ: ಮದ್ಯಪ್ರಿಯರಿಗೂ ಒಂದು ಸಂಘಟನೆ ಸ್ಥಾಪನೆಯಾಗಿದೆ. ಹೌದು, ಇದು ಅಚ್ಚರಿ ಅನಿಸಿದರೂ ಸತ್ಯ ಕಣ್ರೀ! ಮದ್ಯಪ್ರಿಯರ ಹೋರಾಟ ಸಂಘ (Liquor Lovers Association) ಎಂಬ ಹೆಸರಿನ ಸಂಘವೊಂದು ಹಾಸನದಲ್ಲಿ ಮುನ್ನೆಲೆಗೆ ಬಂದಿದೆ. ಸದ್ಯ ಈ ಮದ್ಯಪಾನ ಪ್ರಿಯರ ಸಂಘ ಹಾಸನದಲ್ಲಿ (Hassan Liquor lovers Association Press Meet) ಪತ್ರಿಕಾಗೋಷ್ಠಿ ನಡೆಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದೆ.
ಹೀಗಿವೆ ನೋಡಿ ಮದ್ಯಪಾನ ಪ್ರಿಯರ ಬೇಡಿಕೆಗಳು
ಮದ್ಯಪಾನ ಪ್ರಿಯರಿಗೆ ಇಲ್ಲಿಯವರೆಗೆ ಸರ್ಕಾರ ಸರಿಯಾದ ಸೌಲಭ್ಯ ನೀಡಿಲ್ಲ. ನಾವು ನೀಡುವ 30 ಶೇಕಡಾ ಆದಾಯದಲ್ಲಿ ಸರ್ಕಾರ ನಡೆಯುತ್ತಿದೆ. ಪ್ರತಿ ಕುಡುಕರಿಗೂ ಒಂದು ಲಕ್ಷದ ಇನ್ಶೂರೆನ್ಸ್ ಮಾಡಿ ಪ್ರತಿ ಬಾಟಲಿ ಮೇಲೆ ನಮೂದಿಸಬೇಕು. ನಾವು ಸಾವನ್ನಪ್ಪಿದ್ದರೆ ಆ ಒಂದು ಲಕ್ಷ ನಮ್ಮ ಕುಟುಂಬಕ್ಕೆ ಸೇರಬೇಕು ಎಂದು ಮದ್ಯಪ್ರಿಯರ ಹೋರಾಟ ಸಂಘ ಆಗ್ರಹಿಸಿದೆ.
ಸರ್ಕಾರವೇ ಆಪರೇಷನ್ ಹಣ ಭರಿಸಬೇಕು!
ಮದ್ಯಪಾನ ಮಾಡಿದವರಿಗೆ ಲಿವರ್, ಮತ್ತಿತರ ಆಪರೇಷನ್ ಮಾಡಬೇಕಾದ ಅವಶ್ಯಕತೆ ಇರುತ್ತೆ. ಈ ಆಪರೇಷನ್ಗೆ ನಾಲ್ಕರಿಂದ ಐದು ಲಕ್ಷ ಹಣ ಖರ್ಚಾಗುತ್ತೆ. ಈ ಹಣವನ್ನ ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು ಎಂದು ಮದ್ಯಪ್ರಿಯರ ಹೋರಾಟ ಸಂಘ ಆಗ್ರಹಿಸಿದೆ.
ಇದನ್ನೂ ಓದಿ: Jodukare Kambala: ರಣ ರೋಚಕ ಜೋಡುಕರೆ ಕಂಬಳ, ಕುದುರೆಗಳೂ ನಾಚುವಂತೆ ಓಡಿದ ಕೋಣಗಳು!
ಕುಡಿದು ಟೈಟ್ ಆದಾಗ ಬಾರ್ನಿಂದ ಆಚೆ ಹಾಕ್ಬಾರ್ದು!
ಮೂರು ತಿಂಗಳಿಗೊಮ್ಮೆ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಕುಡುಕರಿಗೆ ಆರೋಗ್ಯ ತಪಾಸಣೆ ಮಾಡಬೇಕು. ಬಾರ್ಗಳಲ್ಲಿ ಸ್ವಚ್ಚವಾದ ಫಿಲ್ಟರ್ ನೀರನ್ನ ನೀಡಬೇಕು. ಮದ್ಯದಂಗಡಿಗಳಲ್ಲಿ ಶೌಚಾಲಯ ಶುಚಿಯಾಗಿ ಇಟ್ಟಿರಬೇಕು. ಕುಡಿದು ಟೈಟ್ ಆದ ಸಂದರ್ಭಗಳಲ್ಲಿ ಬಾರ್ನಿಂದ ಆಚೆ ತಳ್ಳಬಾರದು ಎಂದೂ ಸಹ ಮದ್ಯ ಪ್ರಿಯರ ಹೋರಾಟ ಸಂಘ ಒತ್ತಾಯ ಮಾಡಿದೆ.
ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ
ಬಾರ್ಗಳಲ್ಲೇ ಬೆಡ್ ಹಾಕ್ಬೇಕಂತೆ
ಅಷ್ಟೇ ಅಲ್ಲ ಕಣ್ರೀ, ಪ್ರತೀ ಬಾರ್ನಲ್ಲೂ 4ರಿಂದ 5 ಬೆಡ್ ಹಾಕಿ ಮದ್ಯಪಾನಿಗಳು ಸುಧಾರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ವಿಚಿತ್ರ ಒತ್ತಾಯವನ್ನೂ ಈ ಸಂಘ ಮಾಡಿದೆ.
ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕರ
ಮಾಹಿತಿ, ವಿಡಿಯೋ: ಕೃಷ್ಣ, ಹಾಸನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ