ಹಾಸನ: ಎರಡು, ಮೂರು ದಿನಗಳ ಹಿಂದಷ್ಟೇ ಕಣ್ಬಿಟ್ಟ ಪುಟ್ಟ ಮರಿಯಾನೆ. ಆಕಡೆ ಹೋಗ್ಬೇಕೋ ಈಕಡೆ ಹೋಗ್ಬೇಕು ತಿಳಿಯದೇ ಕಂಗಾಲಾಗಿರೋ ಕಾಡಾನೆ ಮರಿ. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮತ್ತೆ ತಾಯಿ ಮಡಿಲು (Mother-Children) ಸೇರಿತು ನೋಡಿ ಈ ಪುಟ್ಟ ಮರಿ. ಹಾಸನ ಜಿಲ್ಲೆಯ (Hassan News) ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದಲ್ಲಿ ಘಟನೆ (Baby Elephant Viral Video) ಇಂಥದ್ದೊಂದು ಅಪರೂಪದ ವಿದ್ಯಮಾನ (Rare Incident) ನಡೆದಿದೆ.
ತಾಯಾನೆಯಿಂದ ದೂರ ಉಳಿದಿದ್ದ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಂದುಗೂಡಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: Hassan Baby Elephant: ಅಮ್ಮನ ಮಡಿಲು ಸೇರಿದ ಪುಟ್ಟ ಕಾಡಾನೆ ಮರಿ, ಖೆಡ್ಡಾದಲ್ಲೊಂದು ದಿನ ಹೀಗಿತ್ತು ನೋಡಿ
ಒಂಟಿಯಾಗಿ ಉಳಿದಿದ್ದ ಮರಿಯಾನೆ
ಕಾಡಾನೆಗಳ ಹಿಂಡು ವೇಗವಾಗಿ ಸಾಗುವಾಗ ಜೊತೆಯಲ್ಲಿ ವೇಗವಾಗಿ ಹೋಗಲಾಗದೆ ಮರಿಯಾನೆ ಒಂಟಿಯಾಗಿ ಉಳಿದಿತ್ತು. ಇದನ್ನ ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದ ಅನತಿ ದೂರಕ್ಕೆ ಮರಿಯನ್ನು ಕರೆದೊಯ್ದಿದ್ದಾರೆ. ತನ್ನ ಮರಿಯನ್ನ ಕಂಡ ತಾಯಿ ಆನೆ ಕೂಡಲೇ ಮರಿಯನ್ನ ಕರೆದೊಯ್ದಿದೆ.
ಇದನ್ನೂ ಓದಿ: Hassan: ಖಾಲಿ ಗಾಜಿನ ಬಾಟಲಿ ಬ್ಯುಸಿನೆಸ್! ತಿಂಗಳಿಗೆ 50 ಸಾವಿರ ಆದಾಯ ಗಳಿಸುತ್ತಿರುವ ಹಾಸನದ ಯುವಕ
ವೈರಲ್ ಆಗ್ತಿದೆ ಈ ವಿಡಿಯೋ
ಕಾಡಾನೆ ತನ್ನ ಪುಟ್ಟ ಮರಿಯನ್ನು ಬಿಟ್ಟು ಹೋಗುವ ಹಾಗೂ ಮತ್ತೆ ಕರೆದೊಯ್ಯುವ ವಿಡಿಯೋ ವೈರಲ್ ಆಗ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಮಾಹಿತಿ, ವಿಡಿಯೋ: ಕೃಷ್ಣ, ನ್ಯೂಸ್ 18 ಕನ್ನಡ ಹಾಸನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ