HD Kumaraswamy: ಪಿಎಸ್ಐ ಎಕ್ಸಾಂ ಹಗರಣದ ಮೂಲ ಕಿಂಗ್‌ ಪಿನ್ ಹೆಸರು ಹೇಳುತ್ತಾ ಸರ್ಕಾರ? ಮಾಜಿ ಸಿಎಂ ಎಚ್‌ಡಿಕೆ ಸವಾಲು

"ಪಿಎಸ್‌ಐ ನೇಮಕಾತಿ ಹಗರಣದ ಮೂಲ ಕಿಂಗ್ ಪಿನ್ ಹೆಸರು ಹೇಳಲು ಸರ್ಕಾರಕ್ಕೆ ಆಗುತ್ತ. ಕಿಂಗ್ ‌ಪಿನ್ ಟಚ್ ಮಾಡಿದ್ರೆ ಸರ್ಕಾರ ಉಳಿಯಲ್ಲ" ಅಂತ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. "ಸಹಪ್ರಾಧ್ಯಾಪಕ ಹುದ್ದೆಗೆ 80 ಲಕ್ಷ ಹಣ ಲಂಚ ಪಡೆದಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡಿತಿದೆ" ಅಂತ ಎಚ್‌ಡಿಕೆ ಆರೋಪಿಸಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ

ಎಚ್.ಡಿ. ಕುಮಾರಸ್ವಾಮಿ

  • Share this:
ಹಾಸನ: ಪಿಎಸ್‌ಐ ನೇಮಕಾತಿ ಹಗರಣದಲ್ಲಿ (PSI Recruitment Scam) ಮೂಲ ಕಿಂಗ್ ಪಿನ್ (King Pin) ಹೆಸರು ಹೇಳಲು ಸರ್ಕಾರಕ್ಕೆ ಸಾಧ್ಯವಿದೆಯೇ, ಅವರನ್ನು ಟಚ್ ಮಾಡಿದ್ರೆ ಸರ್ಕಾರ (Government) ಉಳಿಯುತ್ತ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಹಾಸನ (Hassan) ಜಿಲ್ಲೆ, ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು ಪಿಎಸ್‌ಐ, ಸಹಪ್ರಾಧ್ಯಾಪಕ ಹುದ್ದೆ ಹಗರಣದಲ್ಲಿ ಮಂತ್ರಿಗಳ ಮೇಲೆಯೇ ಆಪಾದನೆ ಬರುತ್ತಿದೆ. ಹಗರಣದ ತನಿಖೆ ನಡೆಯುತ್ತಿದ್ದು ಈ ತನಿಖೆ ಹಿಂದೆ  ಯಾರು ಇದ್ದಾರೆ? ಪ್ರಶ್ನೆಪತ್ರಿಕೆ ಸೋರಿಕೆಯಾಗಲು (Question Paper leak) ಯಾರ ಕೈವಾಡ ಇದೆ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಸಹ ಪ್ರಾಧ್ಯಾಪಕರ ಹುದ್ದೆಗೆ 80 ಲಕ್ಷ ರೇಟ್ ಫಿಕ್ಸ್ ಮಾಡಿದ್ದಾರೆ. ಪಿ‌ಎಸ್‌‌ಐ‌ ಹಗರಣಕ್ಕಿಂತ ಇದು ದೊಡ್ಡ ಹಗರಣ. ಅಶ್ವಥ್ ನಾರಾಯಣ್ ಸಚಿವರಾಗಿ ಅನೇಕ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಪಿಂಚಣಿ ಕೊಡಲು ಇಟ್ಟಂತಹ 1350 ಕೋಟಿ ದುಡ್ಡನ್ನು ಕಟ್ಟಡ ಕಟ್ಟಲು ಡೈವರ್ಟ್ ಮಾಡಿದ್ದಾರೆ. ಯಾರಿಗೆ ಕೆಲಸ ಕೊಟ್ಟಿದ್ದೀರಿ ಅಂತ ಪ್ರಶ್ನಿಸಿದ್ದಾರೆ.

“ಸರ್ಕಾರ ಕೇಳಿದರೆ ಮಾಹಿತಿ ಕೊಡುತ್ತೇನೆ”

ಇಂಜಿನಿಯರಿಂಗ್, ಪಿಡಬ್ಲ್ಯೂಡಿ ಇಲಾಖೆ ಇಲ್ವ. ಎಬಿವಿಪಿ‌, ಆರ್.ಎಸ್.ಎಸ್.  ನವರನ್ನು ಯೂವಿವರ್ಸಿಟಿ ಸಿಂಡೆಕೆಟ್ ಸದಸ್ಯರನ್ನಾಗಿ ಮಾಡಿಕೊಂಡು ಅಕ್ರಮ ನಡೆಸುತ್ತಿದ್ದಾರೆ. ಸರ್ಕಾರ ಕೇಳಿದರೆ ಏನೇನ್ ಮಾಹಿತಿ ಬೇಕು ಕೊಡಲು ನಾನು ತಯಾರಿದ್ದೇನೆ. ಪರೀಕ್ಷೆಗೂ ಮೊದಲು 500 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಸಿಕ್ಕಿದೆ. ಈ ತನಿಖೆ ಹಳ್ಳ ಹಿಡಿಯುತ್ತೆ. ಕಾಂಗ್ರೆಸ್‌‌ನವರು ಬ್ರಹ್ಮಾಂಡ ಭ್ರಷ್ಟಾಚಾರ ಅಂತಾರೆ ಒಂದು ದಾಖಲೆ‌ ಕೊಡಲ್ಲ, ಇವರೆಲ್ಲ ಏನೇನು ನಡೆಸಿದ್ದಾರೆ, ಇವರ ಹಣೆಬರಹ ನೋಡಿದ್ದೇನೆ ಅಂತ ಎಚ್‌ಡಿಕೆ ಹೇಳಿದ್ದಾರೆ.

“ಬೊಮ್ಮಾಯಿ ಆರ್‌ಎಸ್ಎಸ್ ಕಪಿಮುಷ್ಠಿಯಲ್ಲಿದ್ದಾರೆ”

ಆರ್.ಎಸ್.ಎಸ್. ಕಪಿಮುಷ್ಠಿಯಲ್ಲಿ ಬೊಮ್ಮಾಯಿ ಸಿಲುಕಿದ್ದಾರೆ. ಹೆಬ್ಬೆಟ್ಟು ಒತ್ತುವವರನ್ನು ಎಜುಕೇಶನ್ ಡಿಪಾರ್ಟ್ಮೆಂಟ್ ನಲ್ಲಿ ಸೇರಿಸಿಕೊಂಡಿದ್ದಾರೆ. ನಾಡಿನ ಜನತೆ ಸೂಕ್ಷ್ಮವಾಗಿ ಗಮನಿಸಬೇಕು. ಎಜುಕೇಶನ್ ಡಿಪಾರ್ಟ್ಮೆಂಟ್ ನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿಯಾಗಿದೆ. ಇವರ ಕಾಟ ತಡೆಯಲಾಗಿದೆ ಅಧಿಕಾರಿಗಳು ರಜೆ ಹಾಕಿ ಹೋಗಿದ್ದು, ಮಹಾರಾಷ್ಟ್ರ ಕೇಡರ್ ಅವರನ್ನು ಕಮಿಷನರ್ ಆಗಿ ಇಟ್ಕಂಡಿದ್ದಾರೆ ಅಂತ ಆರೋಪಿಸಿದ್ರು.

ಇದನ್ನೂ ಓದಿ: Araga Jnanendra: ಪಿಎಸ್ಐ ಪರೀಕ್ಷೆ ಹಗರಣದ ಅಪರಾಧಿಗಳು ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತೇವೆ! ಗೃಹಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

“ಗೆಸ್ಟ್‌ ಹೌಸ್‌ನಲ್ಲಿ ಕುಳಿತು ವ್ಯವಹಾರ ಮಾಡ್ತಾರೆ”

ಇವರು ಗೆಸ್ಟ್ ಹೌಸ್‌ನಲ್ಲಿ ಕುಳಿತು ವ್ಯವಹಾರ ಮಾಡ್ತಿದ್ದಾರೆ. ಎಲ್ಲೆಲ್ಲಿ ಗೆಸ್ಟ್ ಹೌಸ್‌ನಲ್ಲಿ ಇದ್ಕಡು ಏನೇನ್ ಮಾಡ್ತಿದರೆ ಅಂತ ಗೊತ್ತು. ಬೊಮ್ಮಾಯಿ ಅವರು ಮೊದಲು ಅಕ್ಕಪಕ್ಕ ಇಟ್ಟುಕೊಂಡಿರುವವರನ್ನು ಮೊದಲು ಬಲಿ ಹಾಕಿ, ಆಮೇಲೆ ಬೇರೆಯವರನ್ನು ಬಲಿ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಲಿಂಗೇಗೌಡ ವಿರುದ್ಧ ಎಚ್‌ಡಿಕೆ ಅಸಮಾಧಾನ

ಇದೇ ವೇಳೆ ಶಾಸಕ ಶಿವಲಿಂಗೇಗೌಡ ವಿರುದ್ಧ ಮತ್ತೆ ಎಚ್.ಡಿ.ಕೆ. ಅಸಮಾಧಾನ ಹೊರ ಹಾಕಿದರು. ಶಿವಲಿಂಗೇಗೌಡರು ಪಕ್ಷ ಬಿಡ್ತಾರೆ ಅಂತ ಹೇಳಿಲ್ಲ, ಪಕ್ಷದಲ್ಲಿ ಇದ್ಕಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಬೇಡ ಅಂತ ಹೇಳಿದ್ದೀನಿ. ಇಲ್ಲಿ ಯಾರು ಯಾರಿಗೂ ಅನಿವಾರ್ಯ ಅಲ್ಲ, ಜೆಡಿಎಸ್ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಜೆಡಿಎಸ್ ಮೂಲ ಏನು, ದೇವೇಗೌಡರು ಪಕ್ಷೇತರ ಸದಸ್ಯರಾಗಿ ರಾಜಕೀಯ ಪ್ರಾರಂಭ ಮಾಡಿದರು. ಜೆಡಿಎಸ್‌ನಲ್ಲಿದ್ದ ಮಹಾನಾಯಕರುಗಳೆಲ್ಲ ಪಕ್ಷವನ್ನು ಬೇರು ಸಮೇತನೆ ತೆಗೆದುಕೊಂಡು ಹೋದರು. ಆದರು ಇನ್ನೂ ಜೆಡಿಎಸ್ ಉಳಿದಿದೆ. ನಾನು ಯಾರನ್ನು ದಮ್ಮಯ್ಯ ಅನ್ನಲ್ಲ, ನಮಗೇನು ಅನಿವಾರ್ಯವು ಅಲ್ಲ ಎಂದರು.

“ಕಾಂಗ್ರೆಸ್ ಅಧ್ಯಕ್ಷರ ಜೊತೆ ಹೋಗಲು ಸಮಯವಿದೆ”

ಒಂದು ಗಂಟೆ ಮಾತನಾಡಬೇಕು ತೋಟದ ಮನೆಗೆ ಬರ್ತಿನಿ ಅಂದ್ರು, ಇವತ್ತಿನವರೆಗೂ ಬರಲಿಲ್ಲ. ಕಾಂಗ್ರೆಸ್ ಅಧ್ಯಕ್ಷರನ್ನು ಕರೆದುಕೊಂಡು ಅರಸೀಕೆರೆಯಲ್ಲಿ ಗೃಹಪ್ರವೇಶಕ್ಕೆ ಹೋಗಲು ಆಗುತ್ತದೆ. ಕುಮಾರಸ್ವಾಮಿ ಭೇಟಿ ಮಾಡಲು ಸಮಯವಿಲ್ಲ. ನಮಗೇನು ಮಾಹಿತಿ ಇರಲ್ವ ಎಂದು ಕಿಡಿಕಾರಿದರು.

ಇದನ್ನೂ ಓದಿ: PSI Exam Scam: ಎಕ್ಸಾಂ ಮುಗಿದ ಮೇಲೆ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ! ಆಯ್ಕೆಯಾದ ಅಣ್ಣ-ತಮ್ಮನಿಗೂ ಈಗ ಸಂಕಷ್ಟ

ಪ್ರೀತಂಗೌಡ ವಿರುದ್ಧವೂ ಆಕ್ರೋಶ

ಮಾಜಿಸಚಿವ ರೇವಣ್ಣ ನಮ್ಮ ವಿರುದ್ದ ಸ್ಪರ್ಧಿಸಿದರೆ ಐವತ್ತು ಸಾವಿರ ಮತಗಳ ಅಂತರದಿಂದ ಗೆಲುತ್ತೇನೆ ಎಂಬ ಶಾಸಕ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿದ ಎಚ್.ಡಿ.ಕುಮಾರಸ್ವಾಮಿ ಹಾಸನದ ರಾಜಕಾರಣದಲ್ಲಿ ನಮ್ಮ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ಮುಂದಿನ ಚುನಾವಣೆಗೆ ನಿಲ್ಲಿಸುತ್ತೇನೆ. ಅವರನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಕಾರ್ಯಕರ್ತರಿಗಿದ್ದು, ರೇವಣ್ಣ, ರೇವಣ್ಣನ ಕುಟುಂಬ ಬೇಕಿಲ್ಲ ಅಂತ ಸ್ಪಷ್ಟಪಡಿಸಿದ್ರು.
Published by:Annappa Achari
First published: