ಹಾಸನ: ರಾಶಿ ರಾಶಿ ಗಾಜಿನ ಖಾಲಿ ಬಾಟಲಿ, ಖಾಲಿ ಬಾಟಲಿಗಳ (Empty Bottle) ಬೃಹತ್ ಗುಡ್ಡವೇ ಇಲ್ಲಿದೆ! ರಸ್ತೆಬದಿ ಖಾಲಿ ಬಾಟ್ಲಿ ಕಂಡ್ರೆ ಇಲ್ಲಿರೋ ಈ ಯುವಕನ ಕಣ್ಣರಳುತ್ತೆ, ಯಾರಾದ್ರೂ ಕುಡಿದು ಎಲ್ಲೆಂದ್ರಲ್ಲಿ ಬಾಟಲ್ ಎಸೆದ್ರಂತೂ ಸಿಟ್ ಬರುತ್ತೆ. ಖಾಲಿ ಬಾಟಲಿ (Empty Bottle Business) ಬೀದಿಗೆ ಎಸೆಯೋ ಬದಲು ನಮ್ಮಂತವರಿಗೆ ನೀಡಿ ಅನ್ನೋ ಇವ್ರು ಯಾರು ಅಂತೀರಾ? ಇಲ್ಲಿದೆ ನೋಡಿ ಹಾಸನದ ಯುವಕರೊಬ್ಬರ ಸಕ್ಸಸ್ ಸ್ಟೋರಿ! (Success Story)
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಶಿಕಾರಿಪುರ ಗ್ರಾಮದ ಸುರೇಶ್ ಸ್ನಾತಕೋತ್ತರ ಪದವೀಧರ. ಕಾಲೇಜ್ ಮುಗ್ಸಿ ಕೆಲಸಕ್ಕಾಗಿ ಅಲೆದು ಅಲೆದು ಸಾಕಾಗಿತ್ತು. ಮುಂದೆ ಏನ್ ಮಾಡ್ಬೇಕು ಅಂತ ಹೊಳಿತಿರ್ಲಿಲ್ಲ. ಪರಿಸರದ ಮೇಲೆ ಪ್ರೀತಿಯಿತ್ತು. ಏನಾದ್ರೂ ಪರಿಸರ ಸ್ನೇಹಿ ಕೆಲಸ ಮಾಡ್ಬೇಕು ಅನ್ನೋ ಅದಮ್ಯ ಉತ್ಸಾಹವೂ ಇತ್ತು. ಆದ್ರೆ ಏನ್ಮಾಡೋದು? ಆಗ ಹೊಳೆದದ್ದೇ ಖಾಲಿ ಬಾಟಲ್ ಬ್ಯುಸಿನೆಸ್!
ಖಾಲಿ ಗಾಜಿನ ಬಾಟಲಿ ಖರೀದಿ ಮಾಡೋರು ಯಾರು?
ಐಡಿಯಾ ಏನೋ ಚೆನ್ನಾಗಿದೆ, ಆದ್ರೆ ಖಾಲಿ ಬಾಟಲಿಗಳನ್ನ ಖರೀದಿ ಮಾಡೋರ್ಯಾರು ಅನ್ನೋ ಪ್ರಶ್ನೆ ಎದುರಾಯ್ತು. ಎಡಬಿಡದೇ ತಮ್ಮ ಪರಿಸರ ಸ್ನೇಹಿ ಹೊಸ ಬ್ಯುಸಿನೆಸ್ಗೆ ಗ್ರಾಹಕರಿಗಾಗಿ ಹುಡುಕಾಡಿದ್ರು, ಇನ್ನೇಕೆ ತಡ? ಯೋಚಿಸಿದ ಊರಿಂದಾನೇ ಸ್ವಂತ ಬ್ಯುಸಿನೆಸ್ ಶುರುಮಾಡೇಬಿಟ್ರು ಸುರೇಶ್. ಆ ಕ್ಷಣಕ್ಕೆ ಈಗ 2 ವರ್ಷ!
ಇದನ್ನೂ ಓದಿ: Dakshina Kannada: ಟೆರೇಸ್ ಮೇಲೆ ಮಲ್ಲಿಗೆ ಬೆಳೆ, ತಿಂಗಳಿಗೆ 60 ಸಾವಿರ ಆದಾಯ!
12 ಜನರಿಗೆ ಉದ್ಯೋಗದಾತ
ಸುರೇಶ್ ಈಗ ತಮ್ಮದೇ ಕಾಲ ಮೇಲೆ ನಿಂತಿದ್ದಾರೆ. ಊರೂರು ಅಲೆದು ಒಡೆದ ಗಾಜು, ಖಾಲಿ ಗಾಜಿನ ಬಾಟಲಿಗಳನ್ನ ಸಂಗ್ರಹಿಸ್ತಾರೆ. ತಮ್ಮದೇ ಕುಟುಂಬದ 12 ಸದಸ್ಯರಿಗೆ ಉದ್ಯೋಗ ನೀಡಿದ್ದಾರೆ. 2 ಗೂಡ್ಸ್ ಆಟೋ ಖರೀದಿಸಿದ್ದಾರೆ.
ಇದನ್ನೂ ಓದಿ: Human Waste: ಹೊಲಸು ಎಂದು ಮೂಗು ಸಿಂಡರಿಸಬೇಡಿ, ಮಾನವ ತ್ಯಾಜ್ಯದಿಂದ ಆದಾಯ ಗಳಿಸ್ತಿದೆ ದಕ್ಷಿಣ ಕನ್ನಡದ ಈ ಸಂಸ್ಥೆ!
ಊರಲ್ಲಿದ್ದೇ ತಿಂಗಳಿಗೆ 50 ಸಾವಿರ ಗಳಿಕೆ!
ಸದ್ಯ ಸುರೇಶ್ ಹಾಸನದ ಪುಟ್ಟ ಊರಲ್ಲಿ ತಿಂಗಳಿಗೆ 40ರಿಂದ 50 ಸಾವಿರ ಲಾಭ ಗಳಿಸುತ್ತಿದ್ದಾರೆ. ಗುಜರಾತ್, ಮೈಸೂರು, ಬಳ್ಳಾರಿ, ಹಾಸನಕ್ಕೆ ಒಡೆದ ಗಾಜು, ಖಾಲಿ ಬಾಟಲಿ ಮಾರಾಟ ಮಾಡ್ತಾ ಉದ್ಯಮ ಜಗತ್ತನ್ನೇ ಸೃಷ್ಟಿಸಿದ್ದಾರೆ. ಸುರೇಶ್ ಅವ್ರ ಈ ಬ್ಯುಸಿನೆಸ್ನಿಂದ ಅವರಿಗೊಂದೇ ಅಲ್ಲ, ಪರಿಸರಕ್ಕೂ ಲಾಭವಾಗ್ತಿದೆ. ಹೀಗೆ ಪುಟ್ಟ ಊರಿನ ಯುವಕ ಕಟ್ಟಿದ ಪರಿಸರ ಸ್ನೇಹಿ ಬ್ಯುಸಿನೆಸ್ಗೆ ನಾವೂ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ?
ನೀವೂ ಆಲ್ ದಿ ಬೆಸ್ಟ್ ಹೇಳೋಕೆ ಸುರೇಶ್ ಅವರ ಫೋನ್ ನಂಬರ್ ಇಲ್ಲಿದೆ ನೋಡಿ: 8861899491
ವರದಿ: ಕೃಷ್ಣ ಹಾಸನ, ನ್ಯೂಸ್ 18 ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ