ಮಲೆನಾಡಲ್ಲಿ ತಾರಕಕ್ಕೇರಿದ ಕಾಡಾನೆ ಹಾಗೂ ಮಾನವ ಸಂಘರ್ಷದಿಂದ ನಾಗರಿಕರು ಬೇಸತ್ತಿದ್ದಾರೆ. ಕಾಡಾನೆ ಹಾವಳಿಯಿಂದ (Wild Elephant Problem) ಸಮಸ್ಯೆಗೊಳಗಾದ ಮಲೆನಾಡಿಗರು ಆಕ್ರೋಶ ಹೊರಹಾಕ್ತಿದ್ದಾರೆ. ತಮ್ಮ ಸ್ವಂತ ಜಮೀನಿನಲ್ಲೇ ಖೆಡ್ಡಾ ತೋಡಿ ಕಾಡಾನೆ ಬೀಳಿಸಲು ಹಾಸನ ಜಿಲ್ಲೆಯ (Hassan News) ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದ ನಾಗರಿಕರು ಮುಂದಾಗ್ತಿದ್ದಾರೆ.
ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಮಿತಿ ಮೀರಿರುವ ಕಾಡಾನೆ ಹಾವಳಿಯನ್ನು ತಡೆಯಲು ಈ ಮಾರ್ಗವನ್ನು ಸ್ಥಳೀಯರು ಅನುಸರಿಸುತ್ತಿದ್ದಾರೆ.
78 ಮಂದಿ ಕಾಡಾನೆ ದಾಳಿಯಿಂದ ಮೃತ
ಕಾಡಾನೆಗಳು ಹೊಸಕೊಪ್ಪಲು ಗ್ರಾಮದ ನೂರಾರು ಎಕರೆ ಕಾಫಿ, ಭತ್ತ, ಅಡಿಕೆ, ಮೆಣಸು ಸೇರಿ ಅನೇಕ ಬೆಳೆಗಳನ್ನು ನಾಶಪಡಿಸಿವೆ. ಬೆಳೆ ಹಾನಿ ಜೊತೆಗೆ ಈವರೆಗೂ 78 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ದಶಕಗಳಿಂದ ಶಾಶ್ವತ ಪರಿಹಾರಕ್ಕೆ ಬೇಡಿಕೆ ಇಟ್ಟು ಬೇಸತ್ತಿರೋ ಹೊಸಕೊಪ್ಪಲು ಗ್ರಾಮಸ್ಥರು ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
20 ಅಡಿ ಆಳ, 20 ಅಡಿ ಅಗಲ, 20 ಅಡಿ ಉದ್ದದ ಗುಂಡಿ ನಿರ್ಮಾಣ
ಹೀಗಾಗಿ ಹೊಸಕೊಪ್ಪಲು ಗ್ರಾಮಸ್ಥರೆಲ್ಲರೂ ಒಕ್ಕೊರಲಿನಿಂದ ಖೆಡ್ಡಾ ತೆಗೆಯಲು ತೀರ್ಮಾನ ಕೈಗೊಂಡಿದ್ದಾರೆ. ಶತಾಯ ಗತಾಯ ಕಾಡಾನೆಗಳನ್ನ ಗುಂಡಿಗೆ ಬೀಳಿಸಲು ಪ್ಲಾನ್ ಮಾಡಿ 20 ಅಡಿ ಆಳ, 20 ಅಡಿ ಅಗಲ, 20 ಅಡಿ ಉದ್ದದ ಗುಂಡಿಯನ್ನ ಜೆಸಿಬಿ ಮುಖಾಂತರ ತೆಗೆದಿದ್ದಾರೆ. ಗುಂಡಿ ಮೇಲೆ ಬಿದಿರುಗಳಗಳನ್ನು ಹಾಕಿ ಸೊಪ್ಪು ಮುಚ್ಚಿ ಆನೆ ಕೆಡವಲು ಪ್ಲಾನ್ ರೂಪಿಸಿದ್ದಾರೆ.
ಮಾಹಿತಿ, ವಿಡಿಯೋ: ಕೃಷ್ಣ ಹಾಸನ, ನ್ಯೂಸ್ 18 ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ