Hassan: ಪಾಲಕರಿಲ್ಲದ ಮಕ್ಕಳಿಗೆ ಇವರೇ ಹೆತ್ತಮ್ಮ! ಉಚಿತ ಕಂಪ್ಯೂಟರ್​ ಶಿಕ್ಷಣವನ್ನೂ ಕೊಡ್ತಾರೆ!

ಪರಿಚಯದವರು, ಸಂಬಂಧಿಕರು ಏನಾದರೂ ಕಷ್ಟದಲ್ಲಿದ್ದರೆ ಸಹಾಯ ಮಾಡಲು ಮುಂದಾಗುವವರೇ ಇಲ್ಲದ ದಿನವಿದು. ಆದರೆ ಇಲ್ಲೋರ್ವ ಯುವತಿ ತಮ್ಮ ಕುಟುಂಬಕ್ಕೆ ಕೊಂಚವೂ ಸಂಬಂಧವೇ ಇಲ್ಲದ ಹತ್ತಾರು ಮಕ್ಕಳ ಸಂಪೂರ್ಣ ಜೀವನ ನಿರ್ವಹಣೆಯನ್ನು ಖುಷಿಯಿಂದ ಕೈಗೆತ್ತಿಕೊಂಡಿದ್ದಾರೆ.

ಕೃತಿಕಾ ಮತ್ತು ತಂಡ

ಕೃತಿಕಾ ಮತ್ತು ತಂಡ

 • Share this:
  ಹಾಸನ: ಎಲ್ಲಾ ಮಕ್ಕಳಿಗೂ ಹೆತ್ತವರ ಪೋಷಣೆಯ ಭಾಗ್ಯ ಇರುವುದಿಲ್ಲ. ಸಮಾಜದಲ್ಲಿ ಅನೇಕ ಮಕ್ಕಳು ನಾನಾ ಕಾರಣದಿಂದ ಹೆತ್ತವರ ಪಾಲನೆ - ಪೋಷಣೆಯಿಂದ ವಂಚಿತರಾಗಿ ಬೀದಿಪಾಲಾಗುತ್ತಿರುವ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಇಂತಹ ಮಕ್ಕಳನ್ನು ಕಂಡು ಅಯ್ಯೋ ಪಾಪ ಎಂದು ಸಹನಾಭೂತಿ ತೋರಿ ಸುಮ್ಮನಾಗುವವರ ಸಂಖ್ಯೆಯೇ ಹೆಚ್ಚು. ಆದರೆ ಇಂತಹ ಮಕ್ಕಳ ಬಗ್ಗೆಯೂ ಕಳಕಳಿ (Children) ತೋರಿ,  ನಿಸ್ವಾರ್ಥ ಭಾವದಿಂದ ಅವರ ಪಾಲನೆ ಪೋಷಣೆ ಮಾಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವವರು ಅಪರೂಪದಲ್ಲಿ ಅಪರೂಪವೇ. ಈ ಅಪರೂಪದ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ ಹಾಸನದ (Hassan) ಬೇಲೂರಿನ ಮಹಿಳೆ ಕೃತಿಕಾ.

  ಬಡಮಕ್ಕಳನ್ನು ಕಂಡರೆ ಕೃತಿಕಾ ಅವರಿಗೆ ಎಲ್ಲಿಲ್ಲದ ಪ್ರೀತಿ 
  ಹಾಸನ ಜಿಲ್ಲೆ ಬೇಲೂರ್ ತಾಲ್ಲೂಕಿನ ದುಮ್ಮೆನಹಳ್ಳಿ ಗ್ರಾಮದ ತಂದೆ ಪುಟ್ಟಸ್ವಾಮಿ ಹಾಗೂ ತಾಯಿ ಮಂಜುಳ ದಂಪತಿಗಳ ಮಗಳಾದ ಕೃತಿಕಾ ಅವರು ಸೇವಾ ಮನೋಭಾವನೆ ಸಾಮಾಜಿಕ ಸೇವೆಯ ತುಡಿತ ಬಾಲ್ಯದಿಂದಲೂ ಸದಾ ಕಾಡುತ್ತಲೇ ಇತ್ತು.
  ಅದರ ಪರಿಣಾಮವಾಗಿಯೇ ಬಡ ಮಕ್ಕಳ ಸೇವೆಯೇ ಭಗವಂತನ ಸೇವೆ ಎಂಬ ಚಿಂತನೆಯೊಂದಿಗೆ ತಮ್ಮ ಕಾರ್ಯಕೈಗೊಂಡರು.

  30 ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಮಹಾತಾಯಿ
  ಬೇಲೂರು ತಾಲ್ಲೂಕಿನ ದುಮ್ಮೆನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 30 ಕ್ಕೂ ಹೆಚ್ಚು ಬಡತನದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಆ ಮಕ್ಕಳ ಪೋಷಕರಿಗೆ ವಿದ್ಯಾಭ್ಯಾಸ ನೀಡುವಂತ ಪರಿಸ್ಥಿತಿಯಿಲ್ಲ. ಬಡತನ ಕಿತ್ತು ತಿನ್ನುತ್ತಿದ್ದು ಕಷ್ಟ ತಂಡವವಾಡುತ್ತಿದೆ. ಅಂತಹ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತು ಸಾಗುತ್ತಿರುವ ಯುವತಿಯೇ ಕೃತಿಕಾ.

  ಕೃತಿಕಾ ಅವರ ಸಂಪರ್ಕ ಸಂಖ್ಯೆ: 8861057605

  ಕೃತಿಕಾರವರ ಸೇವಾ ಸಾಂಗತ್ಯ
  ಕೃತಿಕಾರವರು ಒಂದು ಚಿಕ್ಕ ಫೈನಾನ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಬರುವಂಥ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ನೀಡುತ್ತಿದ್ದಾರೆ. ಅಲ್ಲದೇ ಜನಸಾಮಾನ್ಯರು ಮತ್ತು ಕುಟುಂಬದ ನಾಲ್ಕರು ಮಂದಿಗೆ ಊಟ ವಸತಿ ಜೋಡಿಸುವುದೇ ಕಷ್ಟ. ಆದರೆ ಇವರು ತಮ್ಮ ಕುಟುಂಬಕ್ಕೆ ಕೊಂಚವೂ ಸಂಬಂಧವೇ ಇಲ್ಲದ ಮಕ್ಕಳ ಸಂಪೂರ್ಣ ಜೀವನ ನಿರ್ವಹಣೆಯ ಭಾರವನ್ನು ಹೊತ್ತು ಮುನ್ನಡೆಸುತ್ತಿದ್ದಾರೆ.

  ಉಚಿತವಾಗಿ ಶಿಕ್ಷಣಕೊಡುತ್ತಿರುವ ಯಶೋಗಾಥೆ
  ತಮ್ಮ ಗ್ರಾಮದ ಬಡಮಕ್ಕಳಿಗೆ ಹಾಗೂ 3-4 ಶಾಲೆಯ 70 ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕ, ಬ್ಯಾಗ್ ಮತ್ತು ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಅಲ್ಲದೇ ಸಂಜೆಯಾದರೆ ಅವರ ಮನೆಯಲ್ಲೇ ಎಲ್ಲಾ ಮಕ್ಕಳಿಗೂ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಹಾಗೂ ಪಠ್ಯಪುಸ್ತಕ ಬೋಧನೆಯನ್ನು ಮಾಡುತ್ತಿದ್ದು ಇದೊಂದು ಸಾಹಸದ ಕಾರ್ಯವೇ ಸರಿ.

  ಮಕ್ಕಳಿಗೆ ಹೆಚ್ಚಿನ ಆದ್ಯತೆ 
  ಕೃತಿಕಾ ಅವರು ಆರಂಭದಿಂದಲೂ ಇವರೆಗೂ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿ ಮಕ್ಕಳಿಗೆ ಶಿಸ್ತು, ಕ್ರಮಬದ್ಧತೆ, ಉತ್ತಮ ಸಂಸ್ಕಾರ, ಸದ್ಗುಣ, ಸಜ್ಜನಿಕೆ ಮತ್ತು ಸಹಬಾಳ್ವೆಯನ್ನು  ಜೀವನದಲ್ಲೂ ರೂಡಿಸಿಕೊಂಡಿದ್ದಾರೆ. ಮಕ್ಕಳಿಗೂ ಸರಳ ಜೀವನ, ಉದಾತ್ತ ಚಿಂತನೆಗೆ ಆದ್ಯತೆ ಕೊಟ್ಟು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ.

  ಇದನ್ನೂ ಓದಿ: Inspiration: ಶಾಲೆಗೆ ಹೊರಟ ಚಿಂದಿ ಆಯುವ ಚಂದದ ಮಕ್ಕಳು! ಹಾಸನದ ಅಲೆಮಾರಿ ಮಕ್ಕಳ ಬದುಕು ಬದಲಾದ ಕಥೆಯಿದು!

  ಕೃತಿಕಾ ಅವರ ಈ ಕಾರ್ಯಕ್ಕೆ ತಾಲ್ಲೂಕಿನ ಜನತೆ ಅಭಿನಂದನೆ ಹಾಗೂ ಗೌರವ ಸಲ್ಲಿಸುತ್ತಿದ್ದಾರೆ. ಕೃತಿಕಾ ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಸ್ಥಳೀಯರು ಹಾಗೂ ಅಧಿಕಾರಿಗಳು ಇವರಿಗೆ ಗೌರವ ಹಾಗೂ ಅಭಿಮಾನದ ಭಾವ ವ್ಯಕ್ತಪಡಿಸುತ್ತಿದ್ದಾರೆ.

  ಸಮಾಜ ಸೇವಕಿ
  ತಮ್ಮನ್ನು ತಾವು ನಿತ್ಯ ನಿರಂತರ ನೂರಾರು ಜನಪರ ಹಾಗೂ ಪ್ರಗತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೃತಿಕಾ. ಅನಾಥ ಹಾಗೂ ನಿರ್ಗತಿಕರ ಮಕ್ಕಳ ರಕ್ಷಣೆ ಪೋಷಣೆ ಮತ್ತು ಆರೋಗ್ಯ ಸೇವೆ, ಮಹಿಳಾ ಸಬಲೀಕರಣ, ವೃತ್ತಿಪರ ಶಿಕ್ಷಣ ಕೇಂದ್ರಗಳ ನಿರ್ವಹಣೆ ವಯೋವೃದ್ಧರ ರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಅವಿರತ ಸಾಗುತ್ತಿವೆ.

  ಇದನ್ನೂ ಓದಿ: Palya Health Centre: ಬೇರೆ ಜಿಲ್ಲೆಗಳಿಂದಲೂ ಈ ಸರ್ಕಾರಿ ಆಸ್ಪತ್ರೆ ಹುಡುಕಿ ಬರ್ತಾರೆ ಗರ್ಭಿಣಿಯರು!

  ಏನೇ ಆಗಲಿ, ಹೆಣ್ಣು ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲವೆಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಎಷ್ಟು ಬಡ ಮಕ್ಕಳ ಪಾಲಿನ ಆಶಾಕಿರಣವಾಗಿದ್ದಾರೆ.
  Published by:guruganesh bhat
  First published: