Shivalaya: ಅರಸೀಕೆರೆ ಹೆಸರ ಹಿಂದಿದೆ ಈ ರಹಸ್ಯ! 700 ವರ್ಷಗಳ ಹಿಂದಿನ ಶಿವಾಲಯವೇ ಅದ್ಭುತ

ಹಾಸನದ ಅರಸೀಕೆರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಇಲ್ಲಿಯ ಶಿವಾಲಯವಂತೂ ವಿವಿಧೆಡೆಗಳಿಂದ ಜನರನ್ನು ಸೆಳೆಯುತ್ತದೆ. ಹಾಗಾದರೆ ಶಿವಾಲಯ ಹೇಗಿದೆ? ಇಲ್ಲಿಯ ಇತಿಹಾಸವೇನು? ವಿಸ್ಮಯಗಳೇನು? ಅರಸೀಕೆರೆಗೆ ಅರಸೀಕೆರೆ ಎಂದೆ ಏಕೆ ಹೆಸರು ಬಂತು? ಕುತೂಹಲಕರ ವರದಿ ಇಲ್ಲಿದೆ.

ಶಿವಾಲಯ

ಶಿವಾಲಯ

  • Share this:
    ಹಾಸನ: ನಮ್ಮ ದೇಶದಲ್ಲಿ ದಕ್ಷಿಣ ಭಾರತದ ದೇವಾಲಯಗಳು ವಿಶಿಷ್ಟ ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತವೆ. ಅದರಲ್ಲೂ ಕರ್ನಾಟಕದ ದೇವಾಲಯಗಳಂತೂ ಪ್ರವಾಸಿಗರ-ಧಾರ್ಮಿಕ ಶ್ರದ್ಧಾಳುಗಳ ಕೇಂದ್ರಬಿಂದು. ಹಾಸನ ಜಿಲ್ಲೆಯ ಅರಸೀಕೆರೆಯ ಪುರಾತನ ಶಿವಾಲಯವು (Arsikere Shivalaya) ತನ್ನದೇ ರಚನೆಯಿಂದಲೇ ಗಮನಸೆಳೆಯುತ್ತಿದೆ. ಈ ಶಿವಾಲಯ ಅಥವಾ ಚಂದ್ರಮೌಳೇಶ್ವರ ದೇಗುಲ (Chandramouleshwara Temple Hassan) ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳನ ದಂಡನಾಯಕನಾಗಿದ್ದ ರಾಚಿಮಯ್ಯನಿಂದ 1220ರಲ್ಲಿ ನಿರ್ಮಿಸಲ್ಪಟ್ಟಿದೆ.  ಅಂದಿನ ಹೊಯ್ಸಳ ವಾಸ್ತು ರಚನೆಗಳಲ್ಲೇ ಇದು ಅತ್ಯಂತ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಅಲ್ಲದೇ ತನ್ನ ವಿಶೇಷ ರಚನೆ ಹಾಗು ಭಿನ್ನತೆಗಳಿಂದ ಗಮನ ಸೆಳೆಯುತ್ತದೆ.

    ಆ ಕಾಲದ ಎಲ್ಲ ಹೊಯ್ಸಳ ದೇವಾಲಯಗಳಿಗಿರುವಂತೆ ಜಗತಿಯ ಮೇಲೆ ಇದನ್ನು ನಿರ್ಮಿಸಲಾಗಿಲ್ಲ. ಬದಲಾಗಿ ಗಟ್ಟಿ ನೆಲದ ಮೇಲೆ ತೊಲೆಗಳನ್ನಿಟ್ಟು ಅದರ ಮೇಲೆ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಇರಬೇಕಾದ 5 ಅಥವಾ 6
    ಹಂತದ ಚಿತ್ರಪಟ್ಟಿಕೆಗಳಿಲ್ಲ. ಆ ಸ್ಥಳದಲ್ಲಿ ದೇವಮಾಡುಗಳಿದ್ದು ಒಟ್ಟು 120 ದೇವತಾ ಮೂರ್ತಿಗಳ ಕೆತ್ತನೆಯಿದೆ.

    ಈ ಪ್ರತಿಯೊಂದು ಮೂರ್ತಿಯನ್ನು ಕಪೋತದವರೆಗೆ ಕೆತ್ತಿರುವ ವಿವಿಧ ಮಾದರಿಯ ಅಲಂಕೃತ ಕಂಬಗಳ ಮಾಡುಗಳಲ್ಲಿ ನಿಲ್ಲಿಸಲಾಗಿದೆ. ಇನ್ನೂ ವಿಶೇಷವೆಂದರೆ ಪ್ರತಿಯೊಂದು ಶಿಲ್ಪದ ಕೆಳಗೆ ಶಿಲ್ಪದ ಹೆಸರು ಮತ್ತು ಅದನ್ನು ಕೆತ್ತಿದ ರೂವಾರಿಯ ಹೆಸರನ್ನು ಕೆತ್ತಲಾಗಿದೆ.

    ಮೂಲ ದೇವಸ್ಥಾನ ಎಲ್ಲಿದೆ ?
    ಶಿವಾಲಯವು ಹಾಸನ ಜಿಲ್ಲೆಯ ಅರಿಸೀಕೆರೆಯಲ್ಲಿದೆ. ಅರಸೀಕೆರೆಯ ಬಸ್ಸು ಅಥವಾ ರೈಲು ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಬೆಂಗಳೂರಿನಿಂದ 240 ಕಿಮೀ, ಶಿವಮೊಗ್ಗದಿಂದ 95 ಕಿ ಮೀ ದೂರದಲ್ಲಿದೆ.

    ಅರಸೀಕೆರೆ ಹೆಸರ ಹಿಂದಿದೆ ಈ ರಹಸ್ಯ!
    ಅರಸೀಕೆರೆಯು 6ನೇ ಚಾಲುಕ್ಯ ದೊರೆ ತ್ರಿಭುವನಮಲ್ಲ ವಿಕ್ರಮಾದಿತ್ಯ ಕಾಲಕ್ಕಾಗಲೇ ದೊಡ್ಡ ಪಟ್ಟಣವಾಗಿತ್ತು. ಚಾಲುಕ್ಯ ವಂಶದ ಅರಸಿಯೊಬ್ಬಳು ಕಟ್ಟಿಸಿದ ಕೆರೆಯಿಂದ ಈ ಊರಿಗೆ "ಅರಸೀಕೆರೆ" ಎಂಬ ಹೆಸರು ಬಂದಿದೆ. ಹೊಯ್ಸಳ ದೊರೆ ಎರೆಯಂಗನ ಹೆಂಡತಿ ಮಹಾದೇವಿ ಎಂಬುವವಳು ಇಲ್ಲಿ ವಿಶಾಲವಾದ ಕೆರೆಯೊಂದನ್ನು ಕಟ್ಟಿಸಿದಳು ಎಂಬ ನಂಬಿಕೆಯಿದೆ. ಎರೆಯಂಗನ ನಂತರದ ಅರಸ ಇಮ್ಮಡಿ ಬಲ್ಲಾಳನ ದಂಡನಾಯಕನಾಗಿದ್ದ ರಾಚಿಮಯ್ಯ ಎಂಬುವರು ಇಲ್ಲಿ ಶಿವಾಲಯವನ್ನು ಕಟ್ಟಿಸಿದ ಎನ್ನುತ್ತೆ ಇತಿಹಾಸ.

    ಇನ್ನೂ ಇದೆ ವಿಶೇಷ!
    ಈ ದೇವಸ್ಥಾನ ಗರ್ಭಗೃಹ, ಸುಕನಾಸಿ, ನವರಂಗ ಹಾಗೂ ಸಭಾಮಂಟಪ ಹೊಂದಿದೆ. ಮೊದಲ ಮೂರು ಅಂದರೆ ಗರ್ಭಗೃಹ, ಸುಕನಾಸಿ ಹಾಗು ನವರಂಗಗಳ ರಚನೆ ನಕ್ಷತ್ರಾಕಾರದಲ್ಲಿದ್ದರೂ ಈ ನಕ್ಷತ್ರಾಕಾರ ಸಮಭುಜಗಳನ್ನು ಹೊಂದಿರದೇ ತುಂಬ ಸಂಕೀರ್ಣವಾಗಿದೆ. ಅಲ್ಲದೇ ಎಲ್ಲಕ್ಕಿಂತ ಹೊರಗಿರುವ ಸಭಾ ಮಂಟಪವೇ ಈ ದೇವಾಲಯದ ಪ್ರಮುಖ ಆಕರ್ಷಣೆ. ಈ ದೇವಾಲಯದ ಪ್ರಮುಖ ಆಕರ್ಷಣೆಯಾದ ಇನ್ನೊಂದು ಮುಖಮಂಟಪವು 16 ಮೂಲೆಗಳನ್ನು ಹೊಂದಿದ್ದು ನಕ್ಷತ್ರಾಕಾರದಲ್ಲಿದೆ.

    ಇನ್ನೂ ಇದೆ ವಿಶೇಷ
    ಇದು ತೆರೆದ ಮಂಟಪವಾಗಿದ್ದು ಮೇಲಿನಿಂದ ನೋಡಿದರೆ ಬೋರಲು ಹಾಕಿದ ಹರಿಗೋಲಿನಂತೆ ಕಾಣುತ್ತದೆ. ಇಂಥ ಸಭಾಮಂಟಪವು ಇನ್ನಾವುದೇ ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುವುದಿಲ್ಲ. 25 ಅಡಿ ವ್ಯಾಸದ ಅಳತೆ ಹೊಂದಿರುವ ಇದರ ಮಧ್ಯದಲ್ಲಿ ಸ್ವಲ್ಪವೇ ಎತ್ತರಿಸಿದ ಭಾಗವಿದೆ. ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದನ್ನು ಕುಳಿತು ನೋಡಲು ಮಂಟಪದ ಸುತ್ತಲೂ ಎತ್ತರಿಸಿದ ಕಟ್ಟೆಗಳಿದ್ದು ಈ ಕಟ್ಟೆಗಳನ್ನು ಮುಖಾಮುಖಿಯಾದ ಆನೆಗಳು ಹೊತ್ತು ನಿಂತಂತೆ ಕೆತ್ತಲಾಗಿರುವುದು ತುಂಬ ವಿಶೇಷವಾಗಿದೆ.

    ಜಾರುಬಂಡಿಯಂತಹ ಆಸರೆ!
    ಇಂಥದೇ ಇನ್ನೊಂದು ಕಕ್ಷಾಸನ ನೋಡಲು ಸಿಗುವುದು ಬೆಳವಾಡಿಯ ವೀರನಾರಾಯಣನ ದೇವಸ್ಥಾನದಲ್ಲಿ. ಈ ಕಟ್ಟೆಯ ಮೇಲೆ ಕುಳಿತು ಒರಗಿಗೊಳ್ಳಲು ಜಾರುಬಂಡಿಯಂಥ ಆಸರೆ ಮಾಡಿರುವುದೊಂದು ವಿಶೇಷ. ಇದರಲ್ಲೂ ಒಟ್ಟು 21 ಕಂಬಗಳಿದ್ದು ಹೊರಗಿನ 13 ಕಂಬಗಳು ಚೌಕಾಕಾರದ್ದಾಗಿದ್ದು ಒಳಗಿನ 8 ಕಂಬಗಳು ಗಂಟೆಯಾಕಾರದ ರಚನೆ ಹೊಂದಿವೆ.

    ಈ ಕಂಬಗಳ ಮೇಲಿನ ಮಣಿ-ಮುತ್ತಿನ ಕೆತ್ತನೆ ತುಂಬ ನಯಗಾಗಿಕೆಯಿಂದ ಕೂಡಿದೆ. ಇಲ್ಲಿನ ಭುವನೇಶ್ವರಿಯಲ್ಲಿ ಮೂರುವರೆ ಅಡಿ ಉದ್ದದ ಇಳಿ ಬಿದ್ದಿರುವ ಕಮಲದ ಹೂವಿನ
    ಕೆತ್ತನೆ ಸುಂದರವಾಗಿದೆ.

    Shivalaya
    ದೇವಾಲಯದ ಒಳನೋಟ


    ದೇವಸ್ಥಾನದ ಗರ್ಭಗೃಹ ಹೇಗಿದೆ?
    ದೇಗುಲದ ಗರ್ಭಗುಡಿಯ ಎರಡೂ ಕಡೆಯಲ್ಲೂ ದ್ವಾರಪಾಲಕರಿಂದ ಕೂಡಿದ ಗರ್ಭಗೃಹದ ಬಾಗಿಲುವಾಡದ ಮೇಲೆ ಗಜಲಕ್ಷ್ಮಿ ಚಿತ್ರವಿದ್ದು ಒಳಗಿರುವ ಭುವನೇಶ್ವರಿಯಲ್ಲಿ ತಾಂಡವ ನೃತ್ಯ ಮಾಡುತ್ತಿರುವ ಶಿವ, ಸುತ್ತಲೂ ದಿಕ್ಪಾಲಕರು ಹಾಗು ವಾದ್ಯ ನುಡಿಸುತ್ತಿರುವ ವಿದ್ಯಾಧರರನ್ನು ಕೆತ್ತಿದ್ದಾರೆ. ಅಲ್ಲಿ ಶಿವ 2 ಅಡಿ ಎತ್ತರದ ಲಿಂಗದವಿದ್ಯಾಧರರನ್ನುಳಿತ್ತಿದ್ದಾರೆ. ಅಲ್ಲಿ ಶಿವ 2 ಅಡಿ ಎತ್ತರದ ಲಿಂಗದ ರೂಪಿನಲ್ಲಿ ಪ್ರತಿಷ್ಠಾತನಾಗಿದ್ದಾನೆ.

    ಇದನ್ನೂ ಓದಿ: Hassan: ಪಾಲಕರಿಲ್ಲದ ಮಕ್ಕಳಿಗೆ ಇವರೇ ಹೆತ್ತಮ್ಮ! ಉಚಿತ ಕಂಪ್ಯೂಟರ್​ ಶಿಕ್ಷಣವನ್ನೂ ಕೊಡ್ತಾರೆ!

    ಗರ್ಭಗೃಹದ ಮುಂಭಾಗದ ಸ್ಥಳದ ಮೇಲ್ಛಾವಣಿಯಲ್ಲಿ ವಿಶೇಷ ಕೆತ್ತನೆಗಳಿವೆ. ಪಾಂಡವರಿಗೆ ಪುರಾಣ ಶ್ರವಣ ದೃಶ್ಯ, ದ್ರೋಣಾಚಾರ್ಯರು ಧನುರ್ವಿದ್ಯೆ ಕಲಿಸುತ್ತಿರುವುದು, ದ್ಯೂತವಾಡುತ್ತಿರುವ ಕೌರವ-ಪಾಂಡವರು, ಸಮುದ್ರ ಮಥನ, ಹಾಗೂ ಶಿವತಾಂಡವ ನೃತ್ಯದ ಕೆತ್ತನೆಗಳಿವೆ.

    Hassan Shivalaya Location
    ಶಿವಾಲಯದ ದರ್ಶನ ಮಾಡಿ (ಚಿತೃಕೃಪೆ: ಗೂಗಲ್ ಮ್ಯಾಪ್ಸ್)

    ನವರಂಗ
    ಇದು ಮುಚ್ಚಿದ ನವರಂಗವಾಗಿದ್ದು, ಇದರಲ್ಲಿ ಒಟ್ಟು ಕಂಬಗಳಿದ್ದು ಹೊರಸುತ್ತಿನ 4 ಕಂಬಗಳು ಚೌಕಾಕಾರದಲ್ಲಿದೆ. ಒಳಸುತ್ತಿನ ಉಳಿದ 4 ಕಂಬಗಳು ಹೊಳೆಯುವ ಕಂಬಗಳಾಗಿವೆ. ಇವುಗಳ ಮೇಲೆ ಕೆತ್ತಿದ ಮಣಿಮಾಲೆಗಳ ಕೆತ್ತನೆ ಗಮನ
    ಸೆಳೆಯುತ್ತದೆ. ಇಲ್ಲಿರುವ ಭುವನೇಶ್ವರಿಯ ಪೂರ್ವಕ್ಕೆ 12 ಆದಿತ್ಯರ ಹಾಗು ಪಶ್ಚಿಮಕ್ಕೆ ರುದ್ರರ ಕೆತ್ತನೆಯಿದ್ದು ಉತ್ತರ ಹಾಗೂ ದಕ್ಷಿಣದಲ್ಲಿ ವಿಷ್ಣುವಿನ 24 ಅವತಾರಗಳ ಕೆತ್ತನೆಯಿದೆ.

    ಇದನ್ನೂ ಓದಿ: Hassan: ಬೇರೆ ಜಿಲ್ಲೆಗಳಿಂದಲೂ ಈ ಸರ್ಕಾರಿ ಆಸ್ಪತ್ರೆ ಹುಡುಕಿ ಬರ್ತಾರೆ ಗರ್ಭಿಣಿಯರು!

    ದೇವಸ್ಥಾನದ ಗೋಪುರ ಹೇಗಿದೆ?
    ಈ ದೇವಸ್ಥಾನದ ಗೋಪುರವು ತುಂಬ ಸುಂದರವಾಗಿದ್ದು ಐದು ಸ್ಥರದ ವೇಸರ ಶೈಲಿಯದ್ದಾಗಿದೆ. ಇಲ್ಲೊಂದು ವಿಶೇಷತೆಯಿದೆ. ಸಾಮಾನ್ಯವಾಗಿ ಎಲ್ಲ ಹೊಯ್ಸಳ ದೇವಾಲಯಗಳಲ್ಲಿ, ಸುಕನಾಸಿಯ ಮೇಲೆ ಹುಲಿಯನ್ನು ಕೊಲ್ಲುತ್ತಿರುವ ಸಳನ
    ಶಿಲ್ಪವಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.ಆದರೆ ಸಳನ ಶಿಲ್ಪವಿರಬೇಕಾದ ಸ್ಥಳದಲ್ಲಿ ಗಾರೆಯಿಂದ ಮಾಡಿದ ಬಸವನ ಮೂರ್ತಿ ಇದೆ. ಬಹುಶಃ ಇದೂ ಕೂಡ ವೀರಶೈವ ಪಂಥವು ಪ್ರಾಬಲ್ಯಕ್ಕೆ ಬಂದಾಗ ಈ ದೇವಾಲಯ ದಾಳಿಗೆ ಒಳಗಾಗಿರುವುದನ್ನು ಸೂಚಿಸುತ್ತದೆ.

    ವರದಿ: ಪ್ರದೀಪ್ ಗೇಕರವಳ್ಳಿ, ಹಾಸನ
    Published by:guruganesh bhat
    First published: