• Home
 • »
 • News
 • »
 • hassan
 • »
 • Hasanamba: ವರ್ಷವಿಡೀ ಹಚ್ಚಿದ ದೀಪ ಆರೋದಿಲ್ಲ! ಬಾಗಿಲು ತೆರೆಯುತ್ತಿದ್ದಂತೆ ಹಾಸನಾಂಬೆ ಪವಾಡ

Hasanamba: ವರ್ಷವಿಡೀ ಹಚ್ಚಿದ ದೀಪ ಆರೋದಿಲ್ಲ! ಬಾಗಿಲು ತೆರೆಯುತ್ತಿದ್ದಂತೆ ಹಾಸನಾಂಬೆ ಪವಾಡ

ಹಾಸನಾಂಬೆಯ ಪವಾಡ

"ಹಾಸನಾಂಬೆಯ ಪವಾಡ"

Hasanamba Temple Opened Today: ಬರೋಬ್ಬರಿ ಒಂದು ವರ್ಷದ ನಂತರ ಹಾಸನಾಂಬೆ ದೇಗುಲದ ಬಾಗಿಲು ತೆರೆದಿದೆ. ಭಕ್ತರು ಆ ಮಹಾತಾಯಿಗೆ ಜಯಘೋಷ ಮೊಳಗಿಸುತ್ತಿದ್ದಾರೆ.

 • Share this:

  ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ದೇವಾಲಯ! ಗರ್ಭಗುಡಿಯಲ್ಲಿ ವರ್ಷವಿಡೀ ಉರಿಯುತ್ತೆ ದೀಪ!  ಬರೋಬ್ಬರಿ ಒಂದು ವರ್ಷದ ನಂತರ ಹಾಸನಾಂಬೆ ದೇಗುಲದ ಬಾಗಿಲು (Hasanamba Temple Opened Today) ತೆರೆದಿದೆ. ಭಕ್ತರು ಆ ಮಹಾತಾಯಿಗೆ ಜಯಘೋಷ ಮೊಳಗಿಸುತ್ತಿದ್ದಾರೆ. ದರ್ಶನ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ.  ಹಾಸನಾಂಬಾ ದೇವಸ್ಥಾನವನ್ನು ಇಂದು (ಅಕ್ಟೋಬರ್ 13) ತೆರೆಯಲಾಗಿದೆ.  ಭಕ್ತರು ಹಾಸನಾಂಬೆಯ ದರ್ಶನವನ್ನು ಕೆಲವು ದಿನಗಳಂದು (Hasanamba Temple Darshan Dates Timings) ಮಾತ್ರ ಮಾಡಬಹುದಾಗಿದೆ. 


  ಇಂದು ಮಧ್ಯಾಹ್ನ 12:30ಕ್ಕೆ ಹಾಸನಾಂಬೆಯ ದೇಗುಲದ (Hasanamba Temple) ಬಾಗಿಲನ್ನು ತೆರೆಯಲಾಗಿದೆ. ಅಕ್ಟೋಬರ್ 27ರವರೆಗೆ ಮಾತ್ರ ಹಾಸನಾಂಬೆಯ ದರ್ಶನ ಮಾಡಬಹುದಾಗಿದ್ದು ಆದರೆ ಇಂದು ಹಾಸನಾಂಬಾ ದೇವಿಯ ದರ್ಶನ  ಮಾಡಲು ಭಕ್ತರಿಗೆ ಅವಕಾಶ ಒದಗಿಸಲಾಗಿಲ್ಲ.


  ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


  ಹಾಸನ ನಗರ ದಸರಾ ಮಾದರಿಯಲ್ಲಿ ಲಕಲಕ ಹೊಳೆಯುತ್ತಿದೆ. ಹಾಸನದ ಬೀದಿಗಳು ವಿದ್ಯುತ್ ದೀಪಗಳಿಂದ ಹೊಳೆಯುತ್ತಿವೆ. ಅಧಿಕಾರಿಗಳ ಸಮ್ಮುಖದಲ್ಲಿ ಪುರೋಹಿತರು ಶಾಸ್ತ್ರೋಕ್ತವಾಗಿ ಹಾಸನಾಂಬ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿದೆ.


  Hasanamba temple Hassan
  ದರ್ಶನ ಪಡೆಯಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೂರದಲ್ಲಿರೋ ಈ ಶಕ್ತಿ ಕೇಂದ್ರದ ದರ್ಶನವನ್ನೂ ಈಗಲೇ ನೀವೂ ಪಡೆಯಬಹುದು.

  Published by:ಗುರುಗಣೇಶ ಡಬ್ಗುಳಿ
  First published: