• Home
 • »
 • News
 • »
 • hassan
 • »
 • Hasanamba Temple: ಹಾಸನಾಂಬಾ ದೇಗುಲ ಓಪನ್; ಈ ಸಮಯದಲ್ಲಿ ಮಾತ್ರ ದರ್ಶನ

Hasanamba Temple: ಹಾಸನಾಂಬಾ ದೇಗುಲ ಓಪನ್; ಈ ಸಮಯದಲ್ಲಿ ಮಾತ್ರ ದರ್ಶನ

ಹಾಸನಾಂಬೆ

ಹಾಸನಾಂಬೆ

ಇಂದು ಆರಂಭವಾದ ಹಾಸನಾಂಬಾ ಜಾತ್ರೆ ಅಕ್ಟೋಬರ್ 27ರ ತನಕವೂ ಅದ್ದೂರಿಯಾಗಿ ನಡೆಯಲಿದೆ.

 • Share this:

  ಹಾಸನ: ಹಾಸನಾಂಬಾ ದೇವಸ್ಥಾನವನ್ನು (Hasanamba Temple Opened Today) ಇಂದು (ಅಕ್ಟೋಬರ್ 13) ತೆರೆಯಲಾಗಿದೆ. ಇಂದಿನಿಂದ ಭಕ್ತರು ಹಾಸನಾಂಬೆಯ ದರ್ಶನ ಮಾಡಬಹುದಾಗಿದೆ. ಮಧ್ಯಾಹ್ನ 12:30ಕ್ಕೆ ಹಾಸನಾಂಬೆಯ ದೇಗುಲದ (Hasanamba Temple) ಬಾಗಿಲನ್ನು ತೆರೆಯಲಾಗಿದೆ. ಅಕ್ಟೋಬರ್ 27ರವರೆಗೆ ಮಾತ್ರ ಹಾಸನಾಂಬೆಯ ದರ್ಶನ ಮಾಡಬಹುದಾಗಿದ್ದು ಆದರೆ ಇಂದು ಹಾಸನಾಂಬಾ ದೇವಿಯ ದರ್ಶನ (Hasanamba Temple Darshan Dates Timings) ಮಾಡಲು ಭಕ್ತರಿಗೆ ಅವಕಾಶ ಒದಗಿಸಲಾಗಿಲ್ಲ.


  ಇಂದು ಆರಂಭವಾದ ಹಾಸನಾಂಬಾ ಜಾತ್ರೆ ಅಕ್ಟೋಬರ್ 27ರ ತನಕವೂ ಅದ್ದೂರಿಯಾಗಿ ನಡೆಯಲಿದೆ.


  ಯಾವಾಗ ಭಕ್ತರು ದರ್ಶನ ಮಾಡಬಹುದು?
  ಹಾಸನಾಂಬಾ ಜಾತ್ರೆಯ ಜಾತ್ರೆ ಇಂದಿನಿಂದಲೇ ಆರಂಭವಾಗಿದ್ದರೂ ಇಂದು ಹಾಸನಾಂಬೆಯ ಗರ್ಭಗುಡಿ ಸ್ವಚ್ಛತೆ, ಪೂಜೆ, ನೈವೇದ್ಯ ಪ್ರಕ್ರಿಯೆಗಳಷ್ಟೇ ನಡೆಯಲಿದೆ. ಭಕ್ತರು ಹಾಸನಾಂಬೆಯ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಅವಕಾಶವಿದೆ. ಆದರೆ ಭಕ್ತರಿಗೆ ಸಂಜೆ 4 ರಿಂದ ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಅವಕಾಶವನ್ನು ಒದಗಿಸಲಾಗಿಲ್ಲ.


  ಇದನ್ನೂ ಓದಿ: Vijayapura: ಹುಲ್ಲುಲಗೋ..ಸಲಾಂಭ್ರಿಗೋ! ಉತ್ತರ ಕರ್ನಾಟಕದಲ್ಲಿ ಚರಗ ಹಬ್ಬದ ಸ್ಪೆಷಲ್ ಇದು


  ಅಕ್ಟೋಬರ್ 13 ರಿಂದ ಅಕ್ಟೋಬರ್ 27ರವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ವರ್ಷಕೊಮ್ಮೆ ದರ್ಶನ ನೀಡುವ ತಾಯಿ ಹಾಸನಾಂಬೆ ನೋಡಲು ಭಕ್ತ ಸಾಗರವೇ ಹರಿದು ಬರುವ ನಿರೀಕ್ಷೆ ಇದೆ. ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯಲ್ಲಿ ಇರಿಸಿ ಬೆಳ್ಳಿ ರಥದಲ್ಲಿ ದೇವಸ್ಥಾನಕ್ಕೆ ಅರ್ಚಕರು ಕೊಂಡೊಯ್ದಿದ್ದಾರೆ.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಗರ್ಭಗುಡಿಯಲ್ಲಿ ಹುತ್ತದೋಪಾದಿಯಲ್ಲಿರುವ ಆದಿಶಕ್ತಿಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೆ, ಮುಡಿಸಿದ ಹೂ ಬಾಡದೆ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಕಣ್ತುಂಬಿಕೊಳ್ತುವ ಭಕ್ತಾಗಿಗಳಿಗೆ ಪುನೀತ ಭಾವ ಮೂಡಲಿದೆ.

  Published by:ಗುರುಗಣೇಶ ಡಬ್ಗುಳಿ
  First published: