• Home
  • »
  • News
  • »
  • hassan
  • »
  • Elephant Revenge: 6 ತಿಂಗಳ ಬಳಿಕ ಸೇಡು ತೀರಿಸಿಕೊಂಡ ಕಾಡಾನೆ! ಹಾಸನದ ಕುಟುಂಬ ಕಂಗಾಲು

Elephant Revenge: 6 ತಿಂಗಳ ಬಳಿಕ ಸೇಡು ತೀರಿಸಿಕೊಂಡ ಕಾಡಾನೆ! ಹಾಸನದ ಕುಟುಂಬ ಕಂಗಾಲು

ಕಾಡಾನೆ (ಸಾಂದರ್ಭಿಕ ಚಿತ್ರ)

ಕಾಡಾನೆ (ಸಾಂದರ್ಭಿಕ ಚಿತ್ರ)

ಆನೆಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತರಿಸಿದ 6 ತಿಂಗಳ ನಂತರವೂ ಮತ್ತೆ ಮನೆಯನ್ನು ಹುಡುಕಿ ಬಂದಿದ್ದಾದರೂ ಹೇಗೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

  • News18 Kannada
  • Last Updated :
  • Hassan, India
  • Share this:

ಹಾಸನ:ಕಾಡಾನೆಯೊಂದರ ಸೇಡಿಗೆ (Elephant Revenge) ಒಂದು ಕುಟುಂಬವೇ ಕಂಗಾಲಾದ ಪ್ರಸಂಗವೊಂದು ಹಾಸನದಲ್ಲಿ ನಡೆದಿದೆ. ಆರು ತಿಂಗಳ ಹಿಂದೆ ದಾಳಿ ಮಾಡಿದ್ದ ಕಾಡಾನೆ ಮತ್ತೆ ಮನೆಯನ್ನು ಹುಡುಕಿ ಬಂದು ದಾಂಧಲೆ (Elephant Attack In Hassan) ನಡೆಸಿದೆ. ಈ ಹಿಂದೆ ಮನೆ ಮೇಲೆ ದಾಳಿ ಮಾಡುತ್ತಿದ್ದ ಆನೆಯನ್ನು ಅರಣ್ಯ ಇಲಾಖೆ (Karnataka Forest Department) ಸೆರೆ ಹಿಡಿದು ಸ್ಥಳಾಂತರ ಮಾಡಿತ್ತು. ಆದರೆ ಇದೀಗ 6 ತಿಂಗಳ ನಂತರ ಮತ್ತೆ ಕಾಡಾನೆ ದಾಳಿ ನಡೆಸಿದೆ. ಕೇವಲ ಮೂರು ತಿಂಗಳ ಅಂತರದಲ್ಲಿ, ನೂರಾರು ಕಿಲೋಮೀಟರ್ ದೂರದಿಂದ ಹಳೆ ಜಾಗ ಹುಡುಕಿ ಬಂದಿದ್ದ ಸಲಗ ಕುಟುಂಬದ ಮೇಲೆ ದಾಳಿ ನಡೆಸಿದೆ. ಹಾಸನ ಜಿಲ್ಲೆ (Hassan News) ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದ ಕುಟುಂಬವೊಂದು ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. 


ಕೆಸಗುಲಿ ಗ್ರಾಮದ ಗಿರೀಶ್ ಎಂಬುವವರ ಮನೆ ಮೇಲೆ ಅಟ್ಯಾಕ್ ಮಾಡಿ ದಾಂದಲೆ ಮಾಡಿದ್ದ ಒಂಟಿ ಸಲಗವನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತರ ಮಾಡಲಾಗಿತ್ತು. ಸೆರೆಹಿಡಿದು ಸ್ಥಳಾಂತರ ಮಾಡಿದ ಬಳಿಕವೂ 6 ತಿಂಗಳ ನಂತರ ವಾಪಸ್ ಬಂದು ಮತ್ತೆ ಅದೇ ಮನೆ ಮೇಲೆ ಕಾಡಾನೆ ಅಟ್ಯಾಕ್ ಮಾಡಿದೆ.




ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿ ಪುಡಿಪುಡಿ
ಆದರೆ 6 ತಿಂಗಳುಗಳ ಬಳಿಕ ಮಲೆಮಹದೇಶ್ವರ ಬೆಟ್ಟದಿಂದ ಮರಳಿ ಬಂದು ಮತ್ತೆ ಮನೆ ಮೇಲೆ ಕಾಡಾನೆ ದಾಳಿ ಮಾಡಿದೆ.  ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿಗಳೆಲ್ಲಾ ಪುಡಿಪುಡಿಯಾಗಿವೆ. ಮುಂಜಾನೆ ಎರಡು ಗಂಟೆ ಸುಮಾರಿಗೆ ಮನೆ ಮಂದಿಯೆಲ್ಲಾ ನಿದ್ರೆಯಲ್ಲಿರುವಾಗ ಏಕಾಏಕಿ ಮನೆ ಮೇಲೆ ದಾಳಿ ಮಾಡಿ ದಾಂಧಲೆ ಮಾಡಿದೆ ಕಾಡಾನೆ.


ಇದನ್ನೂ ಓದಿ: Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ


ಸ್ಥಳಾಂತರ ಮಾಡಿದ ಬಳಿಕ ಯಾವುದೇ ಮನೆ ಮೇಲೆ ದಾಳಿ ಮಾಡದೇ ಯಾರ ಕಣ್ಣಿಗೂ ಬೀಳದೆ ಓಡಾಡಿಕೊಂಡಿದ್ದ ಪ್ರಳಯಾಂತಕ ಆನೆ 6 ತಿಂಗಳ ಬಳಿಕ ಅದೇ ಮನೆಯನ್ನು ಹುಡುಕಿ ಬಂದು ದಾಳಿ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ.


ಇದನ್ನೂ ಓದಿ: Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ


ಪ್ರಳಯಾಂತಕ ಆನೆಗೆ ಮನೆ ದಾರಿ ನೆನಪಾಗಿದ್ದು ಹೇಗೆ?
ಆದರೆ ಈ ಆನೆಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತರಿಸಿದ 6 ತಿಂಗಳ ನಂತರವೂ ಮತ್ತೆ ಮನೆಯನ್ನು ಹುಡುಕಿ ಬಂದಿದ್ದಾದರೂ ಹೇಗೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಲಾರಿಯ ಮೇಲೆ ಆನೆಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ತಿಳಿದುಬಂದಿದ್ದು, ವಾಹನದ ಮೇಲೆ ಬೇರೆಡೆ ಸ್ಥಳಾಂತರಿಸಲಾಗಿದ್ದರೂ ಮತ್ತೆ ಕಾಲ್ನಡಿಗೆಯಲ್ಲೇ ಆನೆ ಮರಳಿ ಬಂದು ದಾಳಿ ಬಂದಿದ್ದು ಅಚ್ಚರಿಗೂ ಕಾರಣವಾಗಿದೆ.

Published by:ಗುರುಗಣೇಶ ಡಬ್ಗುಳಿ
First published: