• Home
  • »
  • News
  • »
  • hassan
  • »
  • Hassan Baby Elephant: ಅಮ್ಮನ ಮಡಿಲು ಸೇರಿದ ಪುಟ್ಟ ಕಾಡಾನೆ ಮರಿ, ಖೆಡ್ಡಾದಲ್ಲೊಂದು ದಿನ ಹೀಗಿತ್ತು ನೋಡಿ

Hassan Baby Elephant: ಅಮ್ಮನ ಮಡಿಲು ಸೇರಿದ ಪುಟ್ಟ ಕಾಡಾನೆ ಮರಿ, ಖೆಡ್ಡಾದಲ್ಲೊಂದು ದಿನ ಹೀಗಿತ್ತು ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜೆಸಿಬಿ ಮೂಲಕ ಖೆಡ್ಡಾ ಬಗೆದು ಆನೆ ಹೊರಬಿಡಲಾಗಿದೆ. ಖೆಡ್ಡಾದಲ್ಲಿ ಸಿಲುಕಿ ಬೆದರಿದ್ದ ಆನೆ ಮರಿ ಅಮ್ಮನ ಮಡಿಲು ನೆನಪಾಗಿ ಕಾಡಿನತ್ತ ಓಡುತ್ತಾ ಓಡುತ್ತಾ ಸಾಗಿದೆ.

  • Share this:

    ಹಾಸನ: ಆನೆ ಬಂತೊಂದಾನೆ. ಖೆಡ್ಡಾಗೆ ಬಿದ್ದ ಮರಿಯಾನೆ. ಗ್ರಾಮಸ್ಥರೇ ತೋಡಿದ ಗುಂಡಿಗೆ ಬಿದ್ದ ಕಾಡಾನೆ ಮರಿ ಕೊನೆಗೂ ಬಚಾವ್ ಆಗಿದೆ. ಆಹಾರ ಅರಸಿ ಬಂದಿದ್ದ ಮರಿಯಾನೆ ಕೊನೆಗೂ ಅಮ್ಮನ  (Children-Mother) ಮಡಿಲು ಸೇರಿದೆ. ಹಾಸನ ಜಿಲ್ಲೆಯ (Hassan News) ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಖೆಡ್ಡಾಗೆ ಬಿದ್ದ ಕಾಡಾನೆ ಮರಿ (Baby Elephant) ಕೊನೆಗೂ ಅರಣ್ಯ ಸೇರಿದೆ. ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಅರಣ್ಯ ಇಲಾಖೆ (Karnataka Forest Department) ಸಿಬ್ಬಂದಿ ಮರಿಯಾನೆಯನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.


    ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಘೋಷಣೆ ಮಾಡದ ಹೊರತು ಆನೆಯನ್ನ ಖೆಡ್ಡಾಗೆ ಹೊರ ಕಳಿಸಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ರು. ಆನೆ ನರಳಾಟ ನೋಡಿ ಮರುಗಿದ ಸ್ಥಳೀಯರು ಅಧಿಕಾರಿಗಳ ಭರವಸೆಗೆ ಒಪ್ಪಿದ್ದಾರೆ. ಖೆಡ್ಡಾದಿಂದ ಆನೆಯನ್ನು ಮೇಲೆತ್ತಲು ಸಮ್ಮತಿ ನೀಡಿದ್ದಾರೆ.




    ಇದನ್ನೂ ಓದಿ: Baby Elephant In Hassan: ಗ್ರಾಮಸ್ಥರೇ ತೋಡಿದ ಖೆಡ್ಡಾಕ್ಕೆ ಬಿದ್ದ ಮುದ್ದಿನ ಮರಿ ಕಾಡಾನೆ!


    20 ಅಡಿ ಆಳ, 20 ಅಡಿ ಅಗಲ, 20 ಅಡಿ ಉದ್ದದ ಗುಂಡಿ
    ಕಾಡಾನೆಗಳ ಉಪಟಳದಿಂದ ರೋಸಿ ಹೋಗಿದ್ದ ಹೊಸಕೊಪ್ಪಲಿನ ಗ್ರಾಮಸ್ಥರು ಕಾಡಾನೆ ಕೆಡವಲು ಕಂದಕ ತೋಡಿದ್ದರು. ಶತಾಯ ಗತಾಯ ಕಾಡಾನೆಗಳನ್ನ ಗುಂಡಿಗೆ ಬೀಳಿಸಲು ಪ್ಲಾನ್ ಮಾಡಿ 20 ಅಡಿ ಆಳ, 20 ಅಡಿ ಅಗಲ, 20 ಅಡಿ ಉದ್ದದ ಗುಂಡಿಯನ್ನ ಜೆಸಿಬಿ ಮುಖಾಂತರ ತೆಗೆದಿದ್ದರು.


    ಆನೆ ಕೆಡವಲು ಮಾಸ್ಟರ್ ಪ್ಲಾನ್!
    ಗುಂಡಿ ಮೇಲೆ ಬಿದಿರುಗಳಗಳನ್ನು ಹಾಕಿ ಸೊಪ್ಪು ಮುಚ್ಚಿ ಆನೆ ಕೆಡವಲು ಪ್ಲಾನ್ ರೂಪಿಸಿದ್ದರು. ಈ ಖೆಡ್ಡಾದಲ್ಲಿ ಬೆಳ್ಳಂಬೆಳಗ್ಗೆ ಮರಿಯಾನೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದರು.


    ಇದನ್ನೂ ಓದಿ: Hassan: ಕಾಡಾನೆ ಕಾಟಕ್ಕೆ ಬೇಸತ್ತು ಗ್ರಾಮಸ್ಥರಿಂದಲೇ ಖೆಡ್ಡಾ!


    ಜೆಸಿಬಿಯಿಂದ ಖೆಡ್ಡಾ ಬಗೆದರು!
    ಜೆಸಿಬಿ ಮೂಲಕ ಖೆಡ್ಡಾ ಬಗೆದು ಆನೆ ಹೊರಬಿಡಲಾಗಿದೆ. ಖೆಡ್ಡಾದಲ್ಲಿ ಸಿಲುಕಿ ಬೆದರಿದ್ದ ಆನೆ ಮರಿ ಅಮ್ಮನ ಮಡಿಲು ನೆನಪಾಗಿ ಕಾಡಿನತ್ತ ಓಡುತ್ತಾ ಓಡುತ್ತಾ ಸಾಗಿದೆ. ಏನೇ ಆಗ್ಲಿ ಮಗು ಅಮ್ಮನ ಮಡಿಲಲ್ಲಿದ್ರೇ ಚೆಂದ ಅಲ್ವಾ!


    ಮಾಹಿತಿ, ವಿಡಿಯೋ: ಕ್ರಷ್ಣ  ಹಾಸನ, ನ್ಯೂಸ್ 18 ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: