ಹಾಸನ: ದೊಡ್ಡ ಹೊಂಡದಲ್ಲಿ ಅತ್ತಿತ್ತ ಓಡಾಡುತ್ತಿರೋ ಪುಟ್ಟ ಮರಿಯಾನೆ, ಖೆಡ್ಡಾದಿಂದ ಮೇಲೆ ಹತ್ತೋಕಾಗ್ತಿಲ್ಲ, ಇಲ್ಲಿಂದ ಪಾರಾಗೋದು ಹೇಗೆ ಅಂತ ಗೊತ್ತಾಗ್ತಿಲ್ಲ. ಏನು ಮಾಡ್ಬೇಕು ಅಂತ ತಿಳಿಯದೇ ಅತ್ತಂದಿತ್ತ ಓಡಾಡ್ತಿರೋ ಈ ಮುದ್ಮುದ್ದು ಪುಟ್ಟ ಮರಿಯಾನೆ (Baby Elephant) ಗ್ರಾಮಸ್ಥರು ತೋಡಿದ್ದ ಖೆಡ್ಡಾಗೆ ಬಿದ್ದಿದೆ. ಹಾಸನ ಜಿಲ್ಲೆಯ (Hassan News)ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಗ್ರಾಮಸ್ಥರೇ ತೋಡಿದ ಖೆಡ್ಡಾದಲ್ಲಿ ಸಿಲುಕಿದೆ ಈ ಮರಿಯಾನೆ.
20 ಅಡಿ ಆಳ, 20 ಅಡಿ ಅಗಲ, 20 ಅಡಿ ಉದ್ದದ ಗುಂಡಿ
ಕಾಡಾನೆಗಳ ಉಪಟಳದಿಂದ ರೋಸಿ ಹೋಗಿದ್ದ ಹೊಸಕೊಪ್ಪಲಿನ ಗ್ರಾಮಸ್ಥರು ಕಾಡಾನೆ ಕೆಡವಲು ಕಂದಕ ತೋಡಿದ್ದರು. ಶತಾಯ ಗತಾಯ ಕಾಡಾನೆಗಳನ್ನ ಗುಂಡಿಗೆ ಬೀಳಿಸಲು ಪ್ಲಾನ್ ಮಾಡಿ 20 ಅಡಿ ಆಳ, 20 ಅಡಿ ಅಗಲ, 20 ಅಡಿ ಉದ್ದದ ಗುಂಡಿಯನ್ನ ಜೆಸಿಬಿ ಮುಖಾಂತರ ತೆಗೆದಿದ್ದರು.
ಇದನ್ನೂ ಓದಿ: Hassan: ಕಾಡಾನೆ ಕಾಟಕ್ಕೆ ಬೇಸತ್ತು ಗ್ರಾಮಸ್ಥರಿಂದಲೇ ಖೆಡ್ಡಾ!
ಆನೆ ಕೆಡವಲು ಮಾಸ್ಟರ್ ಪ್ಲಾನ್!
ಗುಂಡಿ ಮೇಲೆ ಬಿದಿರುಗಳಗಳನ್ನು ಹಾಕಿ ಸೊಪ್ಪು ಮುಚ್ಚಿ ಆನೆ ಕೆಡವಲು ಪ್ಲಾನ್ ರೂಪಿಸಿದ್ದರು. ಈ ಖೆಡ್ಡಾದಲ್ಲಿ ಬೆಳ್ಳಂಬೆಳಗ್ಗೆ ಮರಿಯಾನೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ.
ಇದನ್ನೂ ಓದಿ: Rudra Veena: ಭಾರತದ 8 ರುದ್ರವೀಣೆಯ ವಾದಕರಲ್ಲಿ ಉತ್ತರ ಕನ್ನಡದ ಇವರೂ ಒಬ್ಬರು!
78 ಮಂದಿ ಕಾಡಾನೆ ದಾಳಿಯಿಂದ ಮೃತ
ಕಾಡಾನೆಗಳು ಹೊಸಕೊಪ್ಪಲು ಗ್ರಾಮದ ನೂರಾರು ಎಕರೆ ಕಾಫಿ, ಭತ್ತ, ಅಡಿಕೆ, ಮೆಣಸು ಸೇರಿ ಅನೇಕ ಬೆಳೆಗಳನ್ನು ನಾಶಪಡಿಸಿವೆ. ಬೆಳೆ ಹಾನಿ ಜೊತೆಗೆ ಈವರೆಗೂ 78 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ದಶಕಗಳಿಂದ ಶಾಶ್ವತ ಪರಿಹಾರಕ್ಕೆ ಬೇಡಿಕೆ ಇಟ್ಟು ಬೇಸತ್ತಿರೋ ಹೊಸಕೊಪ್ಪಲು ಗ್ರಾಮಸ್ಥರು ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ