Agriculture Subsidy: ಕೃಷಿಕರೇ, ಮಿಸ್ ಮಾಡ್ದೇ ಈ ಸಹಾಯಧನ ಪಡೆಯಿರಿ! ವಿವರ ಇಲ್ಲಿದೆ

ಹಾಸನ ಜಿಲ್ಲೆಯ ರೈತರಿಗೆ ಎಂದೇ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯ ಅಡಿ ರೈತರು ಸಹಾಯಧನ ಪಡೆಯಬಹುದಾಗಿದ್ದು ಹೇಗೆ ಅರ್ಜಿ ಸಲ್ಲಿಸುವುದು? ಯಾರಿಗೆ ಅರ್ಜಿ ನೀಡಬೇಕು? ಕೊನೆಯ ದಿನ ಎಂದು? ಎಲ್ಲ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಾಸನ: ಕೃಷಿ ಇಲಾಖೆ ರೈತರಿಗೆ ಎಂದೇ ಒಂದಿಲ್ಲೊಂದು ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಕಾಲಕಾಲಕ್ಕೆ ಕೃಷಿಕರು ಕೈಗೊಳ್ಳಬೇಕಾದ ಎಲ್ಲ ಕಾರ್ಯ ಕಲಾಪಗಳ ಮಾಹಿತಿ ನೀಡುವ ಹಲವು ಯೋಜನೆಗಳನ್ನು ಸಹ ಕೃಷಿ ಇಲಾಖೆ ಹಮ್ಮಿಕೊಂಡಿದೆ. ಇದೇ ರೀತಿ ಹಾಸನ ಜಿಲ್ಲೆಯಲ್ಲಿ (Hassan District) ತೋಟಗಾರಿಕೆ ಇಲಾಖೆ ವತಿಯಿಂದ 2022-23 ನೇ ಸಾಲಿನ ವಿವಿಧ ಯೋಜನೆಗಳಡಿ ಸೌಲಭ್ಯ (Agriculture Department Schemes) ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಏನಿದು ಕೃಷಿ ಇಲಾಖೆಯ ಯೋಜನೆ? ಈ ಯೋಜನೆ ಅಡಿ ಕೃಷಿಕರು ಏನೆಲ್ಲ ಸೌಲಭ್ಯ (Agriculture Subsidy) ಪಡೆಯಬಹುದು? ರೈತರಿಗೆ ಯಾವ ಪ್ರಯೋಜನಗಳಿವೆ? ಎಲ್ಲ ಮಾಹಿತಿ ಇಲ್ಲಿದೆ ನೋಡಿ.

    1. ರಾಷ್ಟ್ರೀಯ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆ:
    ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ (ಕಂದು ಬಾಳೆ, ಅಂಗಾಂಶ ಕೃಷಿ ಬಾಳೆ, ಬೆಣ್ಣಿಹಣ್ಣು ಮತ್ತು ಕಾಳುಮೆಣಸು) ಹಾಗೂ ಕಾಳು ಮೆಣಸು ಪುನಶ್ವೇತನ, ಪ್ಯಾಕ್ ಹೌಸ್ ನಿರ್ಮಾಣ, ಸೋಲಾರ್ ಟನಲ್ ಡೈಯರ್, ಮಿನಿಟ್ರ್ಯಾಕ್ಟರ್‌ಗೆ ಸಹಾಯಧನವನ್ನು  ರಾಷ್ಟ್ರೀಯ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆ ಅಡಿ ಕೃಷಿಕರು ಪಡೆದುಕೊಳ್ಳಬಹುದಾಗಿದೆ.  

    2. ರಾಷ್ಟ್ರೀಯ ಕೃಷಿ ವಿಳಾಸ ಯೋಜನೆ:
    ಈ ಯೋಜನೆಯ ಅಡಿ ತೋಟಗಾರಿಕೆ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ನೀಡಲು, ನೀರಿನಲ್ಲಿ ಕರಗುವ ರಸಗೊಬ್ಬರ ಹಾಗೂ ಲಘುಪೋಷಕಾಂಶಗಳ ಮಿಶ್ರಣವನ್ನು ಶೇ.25% ರಂತೆ ವಿತರಿಸಲಾಗುವುದು. ಸುರಂಗ ಮಾದರಿಯ ಪಾಲಿಮನೆ ನಿರ್ಮಾಣಕ್ಕೆ ಸಹಾಯಧನವನ್ನು ಸಹ ವಿತರಣೆ ಮಾಡಲಾಗುವುದು. 

    3. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ:
    ಕೃಷಿಕರು ತಮ್ಮ ಕೃಷಿ ಜಮೀನಿನಲ್ಲ ಗುಚ್ಚ ಮಾದರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪ್ರದೇಶ ವಿಸ್ತರಣೆಗೆ ಸಹಾಯಧನವನ್ನು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿ ಒದಗಿಸಲಾಗುವುದು.

    ಜೊತೆಗೆ  ಕಾಳುಮೆಣಸು ಬೆಳೆಯ ಪ್ರದೇಶ ವಿಸ್ತರಣೆ ಆಡಿಕೆಯಲ್ಲಿ ಅಂತರ ಬೆಳೆಗಾಗಿ ಸಹಾಯಧನ ನೀಡಲಾಗುವುದು. ಕಾಳುಮಣಸು ಬೆಳೆಯ ಪ್ರದೇಶ ವಿಸ್ತರಣೆ ತೆಂಗಿನಲ್ಲಿ ಅಂತರ ಬೆಳೆಗಾಗಿ ಸಹಾಯಧನ ಒದಗಿಸಲಾಗುವುದು.  ಬೆಳೆಯ ಪ್ರದೇಶ ವಿಸ್ತರಣೆ ಅಷ್ಟೇ ಅಲ್ಲದೇ ತೆಂಗು ಕೃಷಿಕರಿಗೆ ಅಂತರ ಬೆಳೆಗಾಗಿ ಸಹಾಯಧನ ವಿತರಣೆ ಮಾಡಲಾಗುವುದು.

    4. ರಾಜ್ಯವಲಯ ಮಧುವನ ಮತ್ತು ಜೇನುಸಾಕಾಣಿಕೆ ಅಭಿವೃದ್ಧಿ ಯೋಜನೆ:
    ಈ ಯೋಜನೆ ಅಡಿಯಲ್ಲಿ ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್ ಖರೀದಿಗೆ ಸಹಾಯಧನ ಪಡೆಯಬಹುದು. 

    ಇದನ್ನೂ ಓದಿ: Hassan: ಬೇರೆ ಜಿಲ್ಲೆಗಳಿಂದಲೂ ಈ ಸರ್ಕಾರಿ ಆಸ್ಪತ್ರೆ ಹುಡುಕಿ ಬರ್ತಾರೆ ಗರ್ಭಿಣಿಯರು!

    05.ವಿನೂತನ ತಂತ್ರಜ್ಞಾನ ಮತ್ತು ಯಾಂತ್ರೀಕರಣ ಯೋಜನೆ:
    ಕೃಷಿ ಅಗತ್ಯತೆಗಳಿಗೆ ಬಳಸಲು ಯಂತ್ರ/ಉಪಕರಣಗಳ ಖರೀದಿಗೆ ಶೇ.50% ರಷ್ಟು ಸಹಾಯಧನವನ್ನು ಈ ಯೋಜನೆಯ ಅಡಿ ರೈತರು ಪಡೆಯಬಹುದಾಗಿದೆ.
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತದೆ.

    ಈ ಎಲ್ಲಾ ಯೋಜನೆಗಳಲ್ಲಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದ್ದು, ಜೂನ್ 30 ರೊಳಗೆ ಅರ್ಜಿಯನ್ನು ರೈತರು  ಪಡೆದುಕೊಳ್ಳಲು ಆಲೂರು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದೆ.

    ಕೃಷಿಕರೇ, ನೆನಪಿಡಿ. ಜೂನ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ. 
    ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08170-295034 

    ಇದನ್ನೂ ಓದಿ: Hassan: ಪಾಲಕರಿಲ್ಲದ ಮಕ್ಕಳಿಗೆ ಇವರೇ ಹೆತ್ತಮ್ಮ! ಉಚಿತ ಕಂಪ್ಯೂಟರ್​ ಶಿಕ್ಷಣವನ್ನೂ ಕೊಡ್ತಾರೆ!

    ಕೃಷಿಕರು ಸರ್ಕಾರಿ ಕಚೇರಿ ಕೆಲಸದ ಸಮಯದಲ್ಲಿ ಈ ಮೇಲಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.  ಅಥವಾ ನಿಮ್ಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

    ವರದಿ: ಪ್ರದೀಪ್ ಗೇಕರವಳ್ಳಿ, ಹಾಸನ
    Published by:guruganesh bhat
    First published: