• Home
 • »
 • News
 • »
 • gadag
 • »
 • Gadag: ಹೊಲಕ್ಕಿಳಿದು ರೈತರಾಗುವ ಸ್ವಾಮೀಜಿ! ಸಮಗ್ರ ಕೃಷಿಯಲ್ಲೂ ಯಶಸ್ಸು

Gadag: ಹೊಲಕ್ಕಿಳಿದು ರೈತರಾಗುವ ಸ್ವಾಮೀಜಿ! ಸಮಗ್ರ ಕೃಷಿಯಲ್ಲೂ ಯಶಸ್ಸು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪ್ರತಿಯೊಂದು ಹಸುಗಳಿಗೂ ಗಂಗೆ, ತುಂಗೆ, ಕಾವೇರಿ,  ಮಲಪ್ರಭೆ, ಯಮುನಾ, ಸರಸ್ವತಿ, ಲಕ್ಷ್ಮೀ , ಭೀಮ, ಅರ್ಜುನ, ರಾಮ, ಲಕ್ಷ್ಮಣ ಹೀಗೆ ನಾಮಕರಣ ಮಾಡಿದ್ದಾರೆ. ಈ ವಿಶಿಷ್ಟ ಗೋಶಾಲೆ ವೀಕ್ಷಣೆಗೆ ದೂರದ ಊರಿನಿಂದ ಜನರು ಆಗಮಿಸುತ್ತಿದ್ದಾರೆ.

 • Share this:

  ಗದಗ: ಆಕಳುಗಳ ಮೈ ಸವರುತ್ತಿರೋ ಕಾವಿಧಾರಿ, ಗಿಡಗಳಿಗೆ ನೀರುಣಿಸುತ್ತಿರೋ ಸ್ವಾಮೀಜಿ, ಮಠ ಅಂದ್ರೆ ಧರ್ಮ, ಧಾರ್ಮಿಕ ಆಚರಣೆ ಅಂತಷ್ಟೇ ಇರದೇ ಇಲ್ಲೊಬ್ರು ಸ್ವಾಮೀಜಿ ಕೃಷಿಯಲ್ಲಿ (Swamiji Doing Agriculture)  ಸಾಧನೆ ಮಾಡ್ತಿದ್ದಾರೆ. ರಾಸಾಯನಿಕಗಳನ್ನ ಬಿಟ್ಟು ಸಾವಯವ ಕೃಷಿಯತ್ತ ಮುಖ ಮಾಡುವಂತೆ ರೈತರಿಗೆ ಪ್ರೇರಣೆ (Inspiration To Farmers) ನೀಡ್ತಿದ್ದಾರೆ.

  ಗದಗ ಜಿಲ್ಲೆ ನರಗುಂದದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ಕೇವಲ ಧಾರ್ಮಿಕ ಬೋಧನೆ ಮತ್ತು ಮಠಕ್ಕಷ್ಟೇ ಸೀಮಿತವಾಗದೇ ವಿಷಮುಕ್ತ ಕೃಷಿಗಾಗಿ ಗೋ ಆಧಾರಿತ ಮತ್ತು ಸಾವಯವ ಕೃಷಿ ಪದ್ಧತಿಯತ್ತ ಹೆಜ್ಜೆ ಇಟ್ಟಿದ್ದಾರೆ.


  120 ಎಕರೆಯಲ್ಲಿ ಸಿದ್ದೇಶ್ವರ ಗೋಶಾಲೆ
  ಮಹಾರಾಷ್ಟ್ರದ ಕನ್ನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ಪ್ರೇರಣೆಯಿಂದ ವರದ ಫೌಂಡೇಶನ್ ಸಹಯೋಗದಲ್ಲಿ ನರಗುಂದ ಗುಡ್ಡದ ಹಿಂದಿರೋ ಶ್ರೀಮಠದ 120 ಎಕರೆ ವಿಶಾಲವಾದ ಭೂಮಿಯಲ್ಲಿ 5 ವರ್ಷದ ಹಿಂದೆ ಸಿದ್ದೇಶ್ವರ ಗೋಶಾಲೆ ಪ್ರಾರಂಭಿಸಿದ್ದಾರೆ. ಇಲ್ಲಿ 69 ಗೀರ್, 37 ಕಿಲಾರಿ ಆಕಳುಗಳು, 25 ಕರುಗಳು ಸೇರಿದಂತೆ 130 ಕ್ಕೂ ಹೆಚ್ಚು ಗೋವುಗಳನ್ನು ಸಾಕಿದ್ದಾರೆ.


  ಗೋಶಾಲೆಯಲ್ಲಿರುವ ಆಕಳುಗಳ ಹೆಸರೇ ಸಖತ್!
  ಇಲ್ಲಿ ಐದರಿಂದ ಆರು ಜನರು ನಿತ್ಯ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಹಸುಗಳಿಗೂ ಗಂಗೆ, ತುಂಗೆ, ಕಾವೇರಿ,  ಮಲಪ್ರಭೆ, ಯಮುನಾ, ಸರಸ್ವತಿ, ಲಕ್ಷ್ಮೀ , ಭೀಮ, ಅರ್ಜುನ, ರಾಮ, ಲಕ್ಷ್ಮಣ ಹೀಗೆ ನಾಮಕರಣ ಮಾಡಿದ್ದಾರೆ. ಈ ವಿಶಿಷ್ಟ ಗೋಶಾಲೆ ವೀಕ್ಷಣೆಗೆ ದೂರದ ಊರಿನಿಂದ ಜನರು ಆಗಮಿಸುತ್ತಿದ್ದಾರೆ.


  ಸಮಗ್ರ ಕೃಷಿಯಲ್ಲೂ ಯಶಸ್ಸು
  ಶ್ರೀಗಳು ಗೋವು ಸಾಕಾಣಿಕೆ ಅಷ್ಟೇ ಅಲ್ಲದೆ ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡಿದ್ಧಾರೆ. ಹೌದು, ಅರಣ್ಯೀಕರಣ ತೋಟಗಾರಿಕೆ, ಆಹಾರ ಧಾನ್ಯ ಮತ್ತು ಹುಲ್ಲು ಬೆಳೆದು ಸಮಗ್ರ ಕೃಷಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ . ಗೋವು ಆಧಾರಿತ ಸಮಗ್ರ ಕೃಷಿಯನ್ನು ಕಳೆದ 5 ವರ್ಷಗಳಿಂದ ಮಾಡುತ್ತಾ ಸಮಗ್ರ ಕೃಷಿಯಿಂದ ಪ್ರತಿ ವರ್ಷ 4-5 ಲಕ್ಷಗಳ ಆದಾಯವನ್ನು ಪಡೆಯುತ್ತಿದ್ದಾರೆ.


  ಇದಕ್ಕೆಲ್ಲ ಸಿಹಿ ನೀರಿನ 5 ಕೊಳವೆ ಬಾವಿ , 1 ಎಕರೆಯಷ್ಟು ವಿಸ್ತಾರವುಳ್ಳ ಬೃಹತ್ ಕೆರೆಯಿದೆ. ಮಲಪ್ರಭಾ ಕಾಲುವೆ ಸಹ ಇದೆ. ಇದೇ ಕೆರೆಯಲ್ಲಿ ಸ್ವಾಮೀಜಿಗಳು - ನಿತ್ಯವು ಈಜಾಡುತ್ತಾ ಸ್ನಾನ ಮಾಡಿ ಗೋಪೂಜೆ ನೆರವೇರಿಸಿದ ನಂತರ ಮಠಕ್ಕೆ ತೆರಳಿ ತಮ್ಮ ನಿತ್ಯದ ಪೂಜೆ ಕೈಗೊಳ್ಳುತ್ತಾರೆ.
  ಕರುಗಳಿಗೇ ಹಾಲಿನ ಮೊದಲ ಪಾಲು!
  ಸಿದ್ದೇಶ್ವರ ಗೋಶಾಲೆ ಮೊದಲು ಒಂದೇ ಹಸುವಿನೊಂದಿಗೆ ಆರಂಭವಾಗಿತ್ತು. ಈಗ ನೂರಾರು ಗೋವುಗಳು ಇಲ್ಲಿವೆ. ಕೇವಲ ಹಾಲಿಗಾಗಿ ಗೋಶಾಲೆಯಲ್ಲಿ ಹಸುಗಳು ನೀಡುವ ಹಾಲಿನಲ್ಲಿ ಮೊದಲ ಪಾಲು ಕರುಗಳಿಗೆ ಇರುತ್ತೆ. ಕರುಗಳು ಕುಡಿದು ಬಿಟ್ಟನಂತರ ಹಾಲನ್ನು ಕರೆಯಲಾಗುತ್ತೆ. ಪ್ರತಿ ತಿಂಗಳು 3 ರಿಂದ 4 ಕೆಜಿ ಶುದ್ಧ ತುಪ್ಪ ಸಿಗುತ್ತೆ. ಗೋವುಗಳ ಮೂತ್ರ ಮತ್ತು ಗೋಮಯದಿಂದ ಸಾಕಷ್ಟು ಉತ್ಪನ್ನಗಳನ್ನು ತಯಾರಿಸಲಾಗುತ್ತೆ. ವಿಭೂತಿ, ಧೂಪ , ಹಣತೆ , ಸಾಬೂನು , ಅಗ್ನಿಹೋತ್ರಕ್ಕೆ ಬೇಕಾದ ಭರಣಗಳನ್ನು ತಯಾರಿಸಲಾಗುತ್ತಿದೆ.


  ಇದನ್ನೂ ಓದಿ: Gadag: ಲಾರಿ ಚಾಲಕರಿಂದ ಕನ್ನಡ ಶಾಲೆ ಅಭಿವೃದ್ಧಿ! ಗದಗ 'ರಾಜರತ್ನ ವೇದಿಕೆ'ಯಿಂದ ಮಾದರಿ ಕಾರ್ಯ


  ಸಾವಯವ ಕೃಷಿಗಾಗಿ ಜೀವಾಮೃತ , ದಶಗವ್ಯ, ದಶಪರ್ಗಿ, ಗೋಕೃಪಾಮೃತ ಮುಂತಾದವುಗಳನ್ನು ಸಿದ್ಧಪಡಿಸಿದ ನಂತರ ಹುಬ್ಬಳ್ಳಿಯ ಆರ್ಗ್ಯಾನಿಕ್ ಅರಮನೆಯಲ್ಲಿ ಮಾರಾಟಕ್ಕೆ ಇಡಲಾಗುತ್ತಿದೆ. ಇನ್ನು ಶ್ರೀಗಳು 10 ಎಕರೆಯಲ್ಲಿ ಸಾವಿರಾರು ಗಿಡಗಳನ್ನು ಬೆಳೆದು ಅರಣ್ಯಕರಣದ ಜೊತೆ ಸಮಗ್ರ ಕೃಷಿಯನ್ನು ಮಾಡಿದ್ದಾರೆ. ಅರಣ್ಯೀಕರಣ ಪ್ರದೇಶದಲ್ಲಿ 25ರಿಂದ 30 ಜೇನು ಸಾಕಾಣಿಕೆ ಪೆಟ್ಟಿಗೆಗಳಿದ್ದು 1 ಕೆಜಿ ತುಪ್ಪಕ್ಕೆ 1 ಸಾವಿರ ರೂಪಾಯಿವರೆಗೆ ಬೆಲೆಯಿದೆ.


  ಇದನ್ನೂ ಓದಿ: Gadag: ಗದಗ ದಂಪತಿಯನ್ನು ಹುಡುಕಿ ಬಂದ ಅದೃಷ್ಟ ದೇವತೆ; ಈವರೆಗಿನ ಎಲ್ಲಾ ದಾಖಲೆ ಉಡೀಸ್!


  ಒಟ್ಟಾರೆ ಶ್ರೀಗಳು ಯಾವುದೇ ರೈತರಿಗೂ ಕಮ್ಮಿ ಇಲ್ಲದಂತೆ ಸಾವಯವ ಕೃಷಿಯಲ್ಲಿ ಯಶಸ್ಸು ಕಂಡು ಇತರೆ ರೈತರಿಗೆ ಮಾದರಿಯಾಗುವಂತ ಕಾಯಕ ಯೋಗಿಯಾಗಿದ್ದಾರೆ.


  ವರದಿ: ಸಂತೋಷ ಕೊಣ್ಣೂರ, ನ್ಯೂಸ್ 18 ಕನ್ನಡ ಗದಗ

  Published by:ಗುರುಗಣೇಶ ಡಬ್ಗುಳಿ
  First published: