• Home
 • »
 • News
 • »
 • gadag
 • »
 • Gadag: ಲಾರಿ ಚಾಲಕರಿಂದ ಕನ್ನಡ ಶಾಲೆ ಅಭಿವೃದ್ಧಿ! ಗದಗ 'ರಾಜರತ್ನ ವೇದಿಕೆ'ಯಿಂದ ಮಾದರಿ ಕಾರ್ಯ

Gadag: ಲಾರಿ ಚಾಲಕರಿಂದ ಕನ್ನಡ ಶಾಲೆ ಅಭಿವೃದ್ಧಿ! ಗದಗ 'ರಾಜರತ್ನ ವೇದಿಕೆ'ಯಿಂದ ಮಾದರಿ ಕಾರ್ಯ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

6 ಲಾರಿ-ಟ್ಯಾಕ್ಸಿ ಚಾಲಕರು, 4 ಗ್ರಾಮಸ್ಥರು ಸೇರಿ ಈ ಕನಸು ನನಸಾಗಿಸೋಕೆ ಅಂತಾನೆ ಈ ರಾಜರತ್ನ ವೇದಿಕೆ ನಿರ್ಮಿಸಿದ್ದಾರೆ. ನಾರಾಯಣಪುರ ಶಾಲೆಯ ಶಿಕ್ಷಕರ ಜೊತೆ ಚರ್ಚಿಸಿ ಶಾಲೆಗೆ ಅಗತ್ಯವಿರೋ ಎಲ್ಲ ಸಾಮಾಗ್ರಿಗಳನ್ನು ಪೂರೈಸ್ತಿದ್ದಾರೆ.

 • Share this:

  ಗದಗ: ಹಗಲು ರಾತ್ರಿಗಳ ಬೇಧವಿಲ್ಲ,  ಲಾರಿಯನ್ನೋ ಟ್ಯಾಕ್ಸಿಯನ್ನೋ ಓಡಿಸೋದೇ ಕೆಲಸ, ಊರು, ರಾಜ್ಯಗಳ ಗಡಿ ದಾಟಿ ದೇಶದ ಎಲ್ಲೆಡೆ ತಿರುಗಾಟ. ಸರ್ಕಾರಿ ಶಾಲೆ ಆವರಣದಲ್ಲಿ ನೆರೆದಿದ್ದ ಸಂಚಾರಿ ಜೀವನ ನಡೆಸೋ ಈ ಚಾಲಕರು! ಅವರ ಕಣ್ಣಲ್ಲಿ ಸುಭದ್ರ ಸಮಾಜ ಕಟ್ಟೋ ಕನಸು! ಕವಿ ಚಾಮರಸ ಜನ್ಮ ತಾಳಿದ್ದ ಗದಗಿನ ಗ್ರಾಮ (Gadag News) ನಾರಾಯಣಪೂರ ಸರ್ಕಾರಿ ಪ್ರಾಥಮಿಕ ಶಾಲೆಯ (Government Primary School) ಸುಧಾರಣೆ ಮಾಡಬೇಕೆಂದು ಈ ಚಾಲಕರು ಪಣತೊಟ್ಟು ನಿಂತಿದ್ದಾರೆ. ತಮ್ಮ ಸಂಬಳದಲ್ಲಿ ತಿಂಗಳಿಗೆ 500 ರೂಪಾಯಿಯನ್ನ ಸರ್ಕಾರಿ ಶಾಲೆಗೆ (Government School Development) ಮೀಸಲಿಟ್ಟಿದ್ದಾರೆ. ಶಾಲೆಯ ಅಭಿವೃದ್ಧಿ ಪಣತೊಟ್ಟು ರಾಜರತ್ನ ವೇದಿಕೆಯನ್ನೂ (Rajaratna Vedike) ಕಟ್ಟಿಕೊಂಡಿದ್ದಾರೆ.


  ಈ ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿ ಬಡಮಕ್ಕಳೇ ಜಾಸ್ತಿ ಇರೋದು. ಈ ಮಕ್ಕಳ ಭವಿಷ್ಯ ಚೆನ್ನಾಗಿರ್ಬೇಕು, ಅವರು ಚೆನ್ನಾಗಿ ಓದಿ ಉತ್ತಮ ಶಿಕ್ಷಣ ಪಡೆದು ಮುಂದೆ ಅತ್ಯುನ್ನತ ಅಧಿಕಾರಿಗಳಾಗ್ಬೇಕು ಅನ್ನೋದು ರಾಜರತ್ನ ವೇದಿಕೆ ಯುವಕರ ಕನಸು. 6 ಲಾರಿ-ಟ್ಯಾಕ್ಸಿ ಚಾಲಕರು, 4 ಗ್ರಾಮಸ್ಥರು ಸೇರಿ ಈ ಕನಸು ನನಸಾಗಿಸೋಕೆ ಅಂತಾನೆ ಈ ರಾಜರತ್ನ ವೇದಿಕೆ ನಿರ್ಮಿಸಿದ್ದಾರೆ. ನಾರಾಯಣಪುರ ಶಾಲೆಯ ಶಿಕ್ಷಕರ ಜೊತೆ ಚರ್ಚಿಸಿ ಶಾಲೆಗೆ ಅಗತ್ಯವಿರೋ ಎಲ್ಲ ಸಾಮಾಗ್ರಿಗಳನ್ನು ಪೂರೈಸ್ತಿದ್ದಾರೆ.


  ರಾಜರತ್ನ ವೇದಿಕೆ ಬಳಗದ ಗೆಳೆಯರಿವರು
  ಕಲ್ಲಯ್ಯ ಹಿರೇಮಠ, ಸಿದ್ದಲಿಂಗಯ್ಯ ಗದಗಿನಮಠ, ಕಿರಣ ಹಂಚಿನಾಳ, ವೀರಭದ್ರಯ್ಯ ಲಕ್ಕುಂಡಿ, ಇಮಾಮಸಾಬ ಹುಯಿಲಗೊಳ,  ಶಿವಯೋಗಯ್ಯ ಹಿರೇಮಠ, ಪಂಚಾಕ್ಷರಯ್ಯ ಹಿರೇಮಠ, ಸಿದ್ದಲಿಂಗಯ್ಯ ಗುಮ್ಮಗೋಳಮಠ, ಸಂತೋಷ ಆಸಂಗಿಮಠ, ಸಿದ್ದಲಿಂಗಪ್ಪ ಮಡಿವಾಳರ, ಮೈಲಾರಪ್ಪ ಕಡೆಮನಿ, ಬಸವರಾಜ ದೊಡ್ಡಮನಿ


  ಈಗಾಗಲೇ 21 ಸಾವಿರ ಖರ್ಚು!
  ಈಗಾಗಲೇ 21 ಸಾವಿರ ಖರ್ಚು ಮಾಡಿ ಶಾಲೆಗೆ ಎರಡು ಆಂಡ್ರಾಯ್ಡ್ ಟಿವಿ ಸೆಟ್ಗಳನ್ನು ಕೊಡಿಸಿದೆ ಈ ರಾಜರತ್ನ ವೇದಿಕೆ. ಅಷ್ಟೇ ಅಲ್ದೇ, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕೈ ತೊಳೆಯಲು ಹ್ಯಾಂಡ್ ವಾಶ್ ಸಿಂಕ್ ಸಹ ಕಟ್ಟಿಸಿದ್ದಾರೆ. ಶಾಲೆಯ ನಲಿ-ಕಲಿ ಕ್ಲಾಸ್ ರೂಮ್ಗೆ 4 ಬ್ಲಾಕ್ ಬೋರ್ಡ್​ಗಳ ದುರಸ್ತಿ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಸೌಕರ್ಯದಿಂದ ಶಾಲೆಗೆ ದಾಖಲಾಗೋ ಮಕ್ಕಳ ಸಂಖ್ಯೆಯೂ ಹೆಚ್ಚಾಗ್ತಿದೆ.
  122 ವಿದ್ಯಾರ್ಥಿಗಳಿಗೆ ಸಹಕಾರಿ
  ಸದ್ಯ ನಾರಾಯಣಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಯಿಂದ 8 ನೇ ತರಗತಿಯವರಿಗೆ 122 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರ ಪೈಕಿ ಪ್ರತಿದಿನ ಶೇ 95 ರಷ್ಟು ಮಕ್ಕಳ ಹಾಜರಾತಿ ಇದ್ದೇ ಇರುತ್ತೆ. ಎಲ್ಲಾ ರಾಜರತ್ನ ವೇದಿಕೆ ಸದಸ್ಯರ ಪ್ರಯತ್ನದ ಫಲ ಅಂತಾರೆ ಶಿಕ್ಷಕರು.


  ಇದನ್ನೂ ಓದಿ: Gadag Farmer: ಅದೃಷ್ಟ ದೇವತೆಯೇ ಗದಗ ರೈತರನ್ನು ಹುಡುಕಿ ಬಂದಳು!


  ವಿವಿಧ ಸ್ಪರ್ಧೆಗಳ ಆಯೋಜನೆ
  ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರೋ ರಾಜರತ್ನ ವೇದಿಕೆಯ ಸದಸ್ಯರು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಮಗ್ಗಿ-ಸುಗ್ಗಿ ಮುಂತಾದ ಸ್ಪರ್ಧೆಗಳನ್ನೂ ಹಮ್ಮಿಕೊಳ್ತಿದ್ದಾರೆ. ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ದಂತೆ ತಮ್ಮೂರು ಸರ್ಕಾರಿ ಶಾಲೆಯನ್ನ ಬೆಳೆಸ್ತಿರೋ ಧನ್ಯತಾ ಭಾವ ಇವ್ರ ಕಣ್ಣುಗಳಲ್ಲಿ ಎದ್ದು ಕಾಣುತ್ತೆ.


  ಇದನ್ನೂ ಓದಿ: Emotional Story: 8 ರೂಪಾಯಿ 36 ಪೈಸೆಗೆ 205 ಕೆಜಿ ಈರುಳ್ಳಿ ಮಾರಾಟ ಮಾಡಿದ ಗದಗದ ರೈತ!


  ಬೆವರಿನ ಒಂದೊಂದು ಹನಿಗೂ ಇದೆ ಬೆಲೆ
  ಬೆವರು ಸುರಿಸಿ ದುಡಿದ ಒಂದು ರೂಪಾಯಿಯನ್ನೂ ಬೇರೆಯವರಿಗೆ ಕೊಡೋಕೆ ಹಿಂದೆ ಮುಂದೆ ನೊಡೋ ಈ ಕಾಲ್ದಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟು ನಿಂತ ಈ ಲಾರಿ-ಟ್ಯಾಕ್ಸಿ ಚಾಲಕರ ಔದಾರ್ಯಕ್ಕೆ ಹ್ಯಾಟ್ಸಾಪ್ ಹೇಳಲೇಬೇಕು ಅಲ್ವಾ!


  ಮಾಹಿತಿ, ವಿಡಿಯೋ: ಸಂತೋಷ ಕೊಣ್ಣೂರ, ನ್ಯೂಸ್ 18 ಕನ್ನಡ, ಗದಗ

  Published by:ಗುರುಗಣೇಶ ಡಬ್ಗುಳಿ
  First published: