ಗದಗ: ಮೈಮೇಲೆ ಚೀಲ ಹೊತ್ತಿರೋ ಆಸಾಮಿ, ಭಾರದ ಚೀಲ ಹೊತ್ತೇ ಮುಂದೆ ಮುಂದೆ ನಡೆಯುತ್ತಿರುವ ಈ ವ್ಯಕ್ತಿ ಸಿದ್ದರಾಮಯ್ಯನವ್ರ ಅಭಿಮಾನಿ! ಎಲೆಕ್ಷನ್ ಹತ್ತರಿ ಬರ್ತಿದೆ, ನಮ್ ಸಿದ್ಧರಾಮಯ್ಯ (Siddaramaiah) ಸಾಹೇಬ್ರೇ ಸಿಎಂ ಆಗ್ಬೇಕು ಎಂದು ಈ ಅಭಿಮಾನಿ (Siddaramaiah Fan) ಮಾಡಿದ ಸಾಹಸವಿದು!
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಹನುಮಂತಪ್ಪ ಜಟ್ಟಿ ಎಂಬುವವರೇ ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಎಂ ಆಗ್ಬೇಕು ಎಂದು ಸಾಹಸ ಮಾಡಿದ ವ್ಯಕ್ತಿ.
1 ಕ್ವಿಂಟಲ್ ಭಾರದ ಅಕ್ಕಿ ಮೂಟೆ ಹೊತ್ತ ಅಭಿಮಾನಿ
1 ಕ್ವಿಂಟಲ್ ಭಾರದ ಅಕ್ಕಿ ಮೂಟ್ಟೆ ಹೊತ್ತು ಸುಮಾರು ಅರ್ಧ ಕಿಲೋಮೀಟರ್ಗೂ ದೂರ ಹೆಚ್ಚು ದೀಡ್ ನಮಸ್ಕಾರ ಹಾಕಿದ್ದಾರೆ ಹನುಮಂತಪ್ಪ ಜಟ್ಟಿ. ಲಕ್ಕುಂಡಿಯ ವಿರುಪಾಕ್ಷೇಶ್ವರ ದೇವಸ್ಥಾನದಿಂದ ಮಾರುತೇಶ್ವರ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕುವ ಮೂಲಕ ಇಡೀ ಊರವರ ಗಮನ ಸೆಳೆದಿದ್ದಾರೆ ಇವರು.
ಹರಕೆ ಫಲಿಸುತ್ತಾ?
ಹೀಗೆ ದೀಡ್ ನಮಸ್ಕಾರ ಹಾಕುವ ಮೂಲಕ ಸಿದ್ದರಾಮಯ್ಯ ಸಿಎಂ ಆಗಬೇಕು, ನರಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಯಾವಗಲ್ ಶಾಸಕರಾಗಬೇಕೆಂದು ಹರಕೆ ಹೊತ್ತಿದ್ದಾರೆ.
ಜಟ್ಟಿ ಹನುಮಂತಪ್ಪ ಅವರ ದೀಡ್ ನಮಸ್ಕಾರ ಹರಕೆ ಎಷ್ಟರಮಟ್ಟಿಗೆ ಫಲಿಸುತ್ತೆ ಅನ್ನೋದಕ್ಕೆ ಕಾದು ನೋಡಬೇಕಷ್ಟೇ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ