ಗದಗ: ಇದು ಕಪ್ಪತ್ತಗುಡ್ಡ! ಆ ದೇವರೇ ರುಜು ಮಾಡಿದ ಪ್ರಕೃತಿಯ ಸೊಬಗು. ಹಚ್ಚಹಸಿರ ಸೆಳೆತದ ನಡುವೆ ಇನ್ನೇನು ಆಗಸಕ್ಕೆ ತಾಗಿಬಿಡುತ್ತೆ ಅಂತಿದೆ ಭೂಲೋಕದ ವೈಯ್ಯಾರ. ದೂರದಲ್ಲಿ ಪವನಶಕ್ತಿಗೆ ಬೀಸೋ ಫ್ಯಾನಿನ ರೆಕ್ಕೆಗಳು! ಕಣ್ಣಿಗೆ ನೋಡೋಕೇ ಸೋಜಿಗ. ಬಯಲು ಸೀಮೆಯ ಸಹ್ಯಾದ್ರಿ ಗದಗ ಜಿಲ್ಲೆಯ (Gadaga) ಈ ಕಪ್ಪತಗುಡ್ಡ!ಕಪ್ಪತ್ತಗುಡ್ಡ (Kappatagudda) ಸದಾ ಸುದ್ದಿಯಲ್ಲಿರೋ ಪರ್ವತ ಸಾಲು. ಆದ್ರೆ ಅದರಾಚೆಗೆ ಕಪ್ಪತ್ತಗುಡ್ಡ (Kappatagudda Trecking) ಸೂಜಿಗಲ್ಲಿನಂತಹ ಸೆಳೆತ ಹೊಂದಿದೆ. ಬೀಸುವ ತಂಗಾಳಿ ಚದುರುತ್ತಿರುವ ಮೋಡಗಳನ್ನ ಇನ್ನೇನು ಓಡಿಸಿಕೊಂಡು ಹೋಗುವಂತಿದೆ. ಶ್ವೇತಮೋಡಗಳ ನಡುವೆ ಹಚ್ಚಹಸಿರ ಪರ್ವತ ಕಣ್ಮನ ಸೆಳೆಯದೇ ಇರಲ್ಲ. ಗದಗ ಜಿಲ್ಲೆಯ ಈ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಶುದ್ಧಗಾಳಿಗೆ (Pure Air In Asia) ಹೆಸರುವಾಸಿ. ಹೀಗಾಗಿಯೇ ನೋಡಿ ವಾಯು ವಿಹಾರಕ್ಕೂ ಈ ಸ್ಪಾಟ್ ಪ್ರವಾಸಿಗರಿಗೆ ಹೇಳಿಟ್ಟಂತಿದೆ.
ಕಪ್ಪತ್ತಗುಡ್ಡ ಇಂದಿಗೂ ತನ್ನ ಮಣ್ಣು, ಗಿಡ, ಮರಗಳೆಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ. ಅತೀ ಹೆಚ್ಚು ಆಯುರ್ವೇದಿಕ್ ಗಿಡಗಳನ್ನ ಹೊಂದಿರೋ ಕಾರಣಕ್ಕಾಗಿ ಇಲ್ಲಿಗೆ ಬಂದ್ ಹೋದ್ರೆ ಸಾಕು ಯಾವ ದವಾಖಾನೆನೂ ಬೇಡ.
ಇದನ್ನೂ ಓದಿ: Udupi Special: ಹಬ್ಬದ ಸ್ಪೆಷಲ್! 100 ಕಲಾವಿದರಿಂದ ಒಂದೇ ಸಲ ವೀಣಾ ವಾದನ ಕೇಳಿ
ಪುರಾಣದಲ್ಲೂ ಸಸ್ಯಗಿರಿ ಈ ಕಪ್ಪತ್ತಗುಡ್ಡವನ್ನ ಸಾಧು ಸಂತರು ತಮ್ಮ ತಪೋಭೂಮಿಯನ್ನಾಗಿಸಿಕೊಂಡಿದ್ದರು ಎಂಬ ಉಲ್ಲೇಖವಿದೆ. ಇಂದಿಗೂ ಅದೇ ಕಳೆಯನ್ನ ಉಳಿಸಿಕೊಂಡಿರೋ ಇದನ್ನ ಉತ್ತರ ಕರ್ನಾಟಕದ ಸಹ್ಯಾದ್ರಿ ಸಾಲು ಅಂತಲೇ ಕರೆಯಲಾಗುತ್ತದೆ.
ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು
ಕಪ್ಪತಗುಡ್ಡಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಈಗಂತೂ ಕಪ್ಪತ್ತಗುಡ್ಡ ಹಚ್ಚಹಸಿರಿನಿಂದ ಕಂಗೊಳಿಸ್ತಿದೆ. ಪ್ರವಾಸಿಗರಿಗಂತೂ ಭೂಲೋಕದ ಸ್ವರ್ಗವನ್ನೇ ಕಣ್ತುಂಬಿಕೊಂಡಷ್ಟು ಸಂಭ್ರಮ. ಸಾಲು ಸಾಲಾಗಿ ಬಂದು ಕಪ್ಪತ್ತಗುಡ್ಡದ ಮುಂದೆ ನಿಂತು ಮನಸೋ ಇಚ್ಛೆ ಫೋಟೋ ತೆಗೆದು, ಕಪ್ಪತ್ತಗಿರಿಗೆ ಸಲಾಂ ಎಂದು ಮರಳಿ ಸಾಗುವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ