ಗದಗ: ಇಲ್ಲಿ ಯಾರೂ ಹಲಗೆ ಬಾರಿಸೋ ಹಾಗಿಲ್ಲ, ಬಾಯಿ ಬಡೆದುಕೊಂಡು ಕಾಮದಹನ ಮಾಡೋದೂ ಇಲ್ಲ. ಇಡೀ ದೇಶವೇ ಹೋಳಿ ಸಂಭ್ರಮದಲ್ಲಿದ್ರೆ ಗದಗ ಜಿಲ್ಲೆಯ (Gadag News) ಈ 7 ಊರುಗಳಲ್ಲಿ ಮಾತ್ರ ಹೋಳಿ ಹಬ್ಬದ (Holi 2023) ದಿನ ಅಕ್ಷರಶಃ ಮೌನ ತಾಂಡವವಾಡ್ತಿದೆ.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ 7 ಗ್ರಾಮಗಳಲ್ಲಿ ಹೋಳಿ ಆಚರಣೆ ನಿಷಿದ್ಧವಾಗಿದೆ. ದಕ್ಷಿಣ ಕಾಶಿ ಖ್ಯಾತಿಯ ಕಾಲಕಾಲೇಶ್ವರ ಗ್ರಾಮ ಸೇರಿ 7 ಗ್ರಾಮಗಳಲ್ಲಿ ಹೋಳಿ ಹಬ್ಬ ಆಚರಿಸೋದೇ ಇಲ್ಲ! ಕಾಲಕಾಲೇಶ್ವರ, ರಾಜೂರು, ದಿಂಡೂರು, ಲಕ್ಕಲಕಟ್ಟಿ, ನಾಗೇಂದ್ರಗಡ, ಬೈರಾಪೂರು, ಜಿಗೇರಿಯಲ್ಲಿ ಹೋಳಿ ಹಬ್ಬ ಬಹಳ ಹಿಂದಿನಿಂದಲೂ ಬ್ಯಾನ್ ಆಗಿದೆ.
ಇದನ್ನೂ ಓದಿ: Gadag: ಬೆಳೆಯುತ್ತಿದೆಯಂತೆ ವಿಠ್ಠಲ ರುಕ್ಮಿಣಿ ವಿಗ್ರಹ! ಇದು ದೇವರ ಪವಾಡ ಅಂತಿದ್ದಾರೆ ಗದಗದ ಭಕ್ತರು!
ಹೋಳಿ ನಿಷೇಧಕ್ಕಿದೆ ಹೀಗೊಂದು ಕಾರಣ!
ಇಲ್ಲಿ ಗಜಾಸುರನೆಂಬ ರಾಕ್ಷಸ ನೆಲೆನಿಂತಿದ್ದನಂತೆ. ಅವನ ಅಟ್ಟಹಾಸವನ್ನು ತಡೆದುಕೊಳ್ಳದ ತಡೆದುಕೊಳ್ಳದ ಋಷಿಗಳು ಕಾಲಕಾಲೇಶ್ವರನ ಮೊರೆ ಹೋದಾಗ ಗಜಾಸುರನನ್ನು ಕಾಲಕಾಲೇಶ್ವರ ಸಂಹರಿಸಿದ್ದನಂತೆ. ಜೊತೆಗೆ ಇದೇ ಗ್ರಾಮದಲ್ಲಿ ರುದ್ರದೇವ ನೆಲೆಸಿದ್ದನಂತೆ. ರುದ್ರದೇವ ನೆಲೆಸಿದ ಊರು ಎಂಬ ಕಾರಣಕ್ಕೆ ಈ ಊರಲ್ಲಿ ಯಾವತ್ತೂ ಹೋಳಿ ಹಬ್ಬ ಆಚರಿಸಿಯೇ ಇಲ್ವಂತೆ.
ಹೋಳಿ ಆಚರಿಸಿದರೆ ಏನಾಗುತ್ತೆ?
ಒಂದ್ವೇಳೆ ಯಾರಾದರೂ ಈ ಊರುಗಳಲ್ಲಿ ಸಂಪ್ರದಾಯ ಮೀರಿ ಹೋಳಿ ಆಚರಣೆ ಮಾಡಿದರೆ ಇಡೀ ಊರಿಗೆ ಕೆಡಕಾಗುತ್ತದೆ ಎಂಬ ನಂಬಿಕೆಯಿದೆ. ರಾಜೂರು ಗ್ರಾಮದಲ್ಲಿ ನಿಯಮ ಮೀರಿ ಹೋಳಿ ಅಚರಣೆ ಮಾಡಿ ಮನೆಗಳಿಗೆ ಬೆಂಕಿ ಅನಾಹುತ ಸಂಭವಿಸಿತ್ತಂತೆ!
ಇದನ್ನೂ ಓದಿ: Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್
ಹೀಗಾಗಿ ಇಲ್ಲಿ ಹೋಳಿ ಆಚರಿಸಿದ್ರೆ ರುದ್ರದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತೆ ಅಂತಾರೆ ಗ್ರಾಮಸ್ಥರು. ಒಟ್ಟಾರೆ ಇಡೀ ದೇಶ ಹೋಳಿ ಸಂಭ್ರಮದಲ್ಲಿ ಇದ್ರೆ ಈ 7 ಊರುಗಳು ಮಾತ್ರ ವಿಭಿನ್ನ ನಂಬಿಕೆಯಿಂದ ಗಮನ ಸೆಳೆಯುತ್ತಿವೆ.
ವರದಿ:ಸಂತೋಷ ಕೊಣ್ಣೂರ, ನ್ಯೂಸ್ 18 ಗದಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ