ಗದಗ: ಮೂಟೆ ಮೂಟೆ ಈರುಳ್ಳಿ (Onion) ಬೆವರು ಸುರಿಸಿ ಬೆಳೆದಿರೋ ರೈತ ಕುಟುಂಬ (Farmers Family) ಕಣ್ತುಂಬಾ ಬೊಂಬಾಟ್ ಆದಾಯ ಗಳಿಸೋ ಕನಸು, ಆದ್ರೆ ನಡೆದದ್ದು ಕನಸಲ್ಲೂ ಊಹಿಸಲಾಗದ ತಿರುವು! ಈರುಳ್ಳಿ ಕಟ್ ಮಾಡುವಾಗ ಕಣ್ಣೀರು ಬರುತ್ತೆ ಸರಿ, ಆದ್ರೆ ಈ ಈರುಳ್ಳಿ ಬೆಳೆಗಾರ (Onion Farmer) ಈರುಳ್ಳಿ ಬೆಳೆದಿದ್ದಕ್ಕೇ ಕಣ್ಣೀರು ಸುರಿಸುತ್ತಿದ್ದಾರೆ. ಈ ಕೃಷಿಕರ ಕಥೆ ಕೇಳಿದವರ ಕಣ್ಣಂಚಲ್ಲೂ ನೀರು ಜಿನುಗುತ್ತೆ. ಅಂತಹ ಭಾವನಾತ್ಮಕ (Emotional Story) ಕಥೆಯಿದು.
ಗದಗ ತಾಲೂಕಿನ ತಿಮ್ಮಾಪುರದ ಈ ಕೃಷಿಕರ ಹೆಸರು ಪವಾಡೆಪ್ಪ ಹಳ್ಳಿಕೇರಿ ಅಂತ. ಸುಮಾರು 40 ಸಾವಿರ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ರು. ಮೂರು ತಿಂಗಳ ಕಾಲ ಈರುಳ್ಳಿ ಗಿಡಗಳನ್ನ ಸ್ವಂತ ಮಗುವಿನಷ್ಟೇ ಪಾಲನೆ ಪೋಷಣೆ ಮಾಡಿದ್ರು. ಚೆನ್ನಾಗಿ ಬೆಳೆಯೂ ಬಂದಿತ್ತು. ಊರಲ್ಲಿ ಈರುಳ್ಳಿಗೆ ಒಳ್ಳೆ ಆದಾಯ ಸಿಕ್ತಿಲ್ಲ. ಬೆಂಗಳೂರಲ್ಲಿ ಮಾರಾಟ ಮಾಡಿದ್ರೆ ಚೆನ್ನಾಗಿ ಲಾಭ ಆಗಬಹುದು ಅಂತ ಯೋಚಿಸಿ 400 ಕ್ಕೂ ಹೆಚ್ಚು ಕಿಲೋಮೀಟರ್ ದೂರದ ಗದಗದಿಂದ ಬೆಂಗಳೂರಿಗೆ ಈರುಳ್ಳಿ ಮಾರಾಟಕ್ಕೆ ತಂದಿದ್ರು. ಆದ್ರೆ ಮುಂದಾಗಿದ್ದೇ ಬೇರೆ.
ಇದನ್ನೂ ಓದಿ: Anti Rape Footwear: ಅತ್ಯಾಚಾರ ತಡೆಯುತ್ತೆ ಈ ಚಪ್ಪಲಿ! ಕಲಬುರಗಿ ವಿದ್ಯಾರ್ಥಿನಿಯಿಂದ ಸಂಶೋಧನೆ
205 ಕೆಜಿ ಈರುಳ್ಳಿಗೆ ಸಿಕ್ಕ ಹಣ ಇಷ್ಟೇ!
ಗದಗದಿಂದ ಬೆಂಗಳೂರಿನ ಯಶವಂತಪುರ ಮಾರ್ಕೆಟ್ಗೆ ತಂದು ಮಾರಾಟ ಮಾಡಿದ 205 ಕೆಜ ಈರುಳ್ಳಿ ಈ ರೈತರಿಗೆ ಸಿಕ್ಕಿದ ಹಣ ಎಷ್ಟಂತ ತಿಳಿದ್ರೆ ನಿಮಗೂ ದಿಗಿಲಾಗುತ್ತೆ! ಹೌದು, ಈರುಳ್ಳಿಯನ್ನು ಅಲ್ಲಿಂದಿಲ್ಲಿಗೆ ತಂದು ಮಾರಿದ್ದಕ್ಕೆ ಇವರಿಗೆ ಸಿಕ್ಕಿದ್ದರು ಕೇವಲ 8 ರೂಪಾಯಿ 36 ಪೈಸೆ ಮಾತ್ರ!
ದಲಾಲಿ ವ್ಯಾಪಾರಸ್ಥರು 410 ರೂಪಾಯಿ ನಿಗದಿ
ಒಟ್ಟು 205 ಕೆಜಿ ಈರುಳ್ಳಿಗೆ ದಲಾಲಿ ವ್ಯಾಪಾರಸ್ಥರು 410 ರೂಪಾಯಿ ನಿಗದಿ ಮಾಡಲಾಗಿತ್ತು. ಈ ಪೈಕಿ 377 ರೂಪಾಯಿ ಸಾಗಾಟ ವೆಚ್ಚ, 24 ರೂಪಾಯಿ ಹಮಾಲಿ ಕೂಲಿ ಸೇರಿದಂತೆ 401.64 ರೂಪಾಯಿ ಕಟ್ ಮಾಡಲಾಗಿತ್ತು. ಕೊನೆಗೆ ಪವಾಡೆಪ್ಪ ಹಳ್ಳಿಕೇರಿ ಅವ್ರ ಕೈಸೇರಿದ್ದು ಕೇವಲ 8 ರೂಪಾಯಿ 36 ಪೈಸೆಯಷ್ಟೇ.
ಇದನ್ನೂ ಓದಿ: Kalaburagi: ತೆಲಂಗಾಣದಿಂದ ಕರ್ನಾಟಕಕ್ಕೆ ಉರುಳು ಸೇವೆ ಮಾಡಿದ ಮಹಿಳೆ!
ಕೊನೆಗೂ 2 ಕ್ವಿಂಟಲ್ ಈರುಳ್ಳಿಗೆ ಕೇವಲ ಎಂಟು ರೂಪಾಯಿ ಪಡೆದು ಬೆಂಗಳೂರಿನಿಂದ ಊರಿನ ಬಸ್ ಹತ್ತುವಾಗ ಕಣ್ಣೀರೇ ಆಗಿದ್ರು. ಇನ್ಯಾರ್ಗೂ ಹೀಗಾಗದಿರ್ಲಿ.. ಮುಂದಾದ್ರೂ ಈರುಳ್ಳಿ ಕೃಷಿಕರ ಕಷ್ಟ ನೀಗಲಿ, ಬೆಳೆಗೆ ತಕ್ಕ ದರ ಸಿಗಲಿ ಅನ್ನೋ ಒಂದೇ ಒಂದು ಇಚ್ಛೆ ಮನಸು ತುಂಬಿತ್ತು.
ವಿಡಿಯೋ, ಮಾಹಿತಿ ಕೃಪೆ: ಸಂತೋಷ್ ಗದಗ, ನ್ಯೂಸ್ 18 ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ