ಲಕ್ ಅಂದ್ರೆ ಇದೇ ಕಣ್ರೀ! ಮೆಣಸಿನಕಾಯಿ ಬೆಳೆದಿದ್ದ ಗದಗದ ರೈತರೊಬ್ರನ್ನ ಅದೃಷ್ಟ ದೇವತೆ ಹುಡುಕಿ ಬಂದಿದ್ದಾರೆ. ವಿಷ್ಯ ಏನಪ್ಪಾ ಅಂದ್ರೆ ಗದಗದ ರೈತರೊಬ್ರು ದಾಖಲೆ ಬೆಲೆಯಲ್ಲಿ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.
ಒಂದು ಕ್ವಿಂಟಲ್ ಮೆಣಸಿಗೆ 70,199 ರೂಪಾಯಿ ಸಿಕ್ತು!
ಗದಗ ತಾಲೂಕಿನಲ್ಲಿ ಕೋಟಮಚಗಿಯ ರೈ ಶರಣಪ್ಪ ಜಗ್ಗಲ್ ಎಂಬುವರೇ ಮೆಣಸಿನಕಾಯನ್ನು ದಾಖಲೆ ಬೆಲೆಗೆ ಮಾರಾಟ ಮಾಡಿದ್ದಾರೆ. ಕ್ವಿಂಟಲ್ಗೆ 70,199 ರೂಪಾಯಿ ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ ಈ ರೈತ.
ಇದನ್ನೂ ಓದಿ: Emotional Story: 8 ರೂಪಾಯಿ 36 ಪೈಸೆಗೆ 205 ಕೆಜಿ ಈರುಳ್ಳಿ ಮಾರಾಟ ಮಾಡಿದ ಗದಗದ ರೈತ!
4 ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತ
4 ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿರೋ ರೈತ ಶರಣಪ್ಪ ಜಗ್ಗಲ್ ಈಗಾಗಲೇ ಸುಮಾರು 1 ಲಕ್ಷ ರೂಪಾಯಿಯ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.
ಇದನ್ನೂ ಓದಿ: Uttara Kannada: ಶಿರಸಿಯಲ್ಲಿ ಅರಳುತ್ತಿದೆ ಕಾಫಿ! ಅಡಿಕೆ ತೋಟದಲ್ಲಿ ಕೃಷಿಕರ ಪ್ರಯೋಗ
ಕಾಶ್ಮೀರ ಡಬ್ಬಿ ಎಂಬ ಮೆಣಸಿನ ಬೀಜ ಬಿತ್ತನೆ ಮಾಡಿ ರೈತ ಶರಣಪ್ಪ ಈ ದಾಖಲೆ ಬೆಲೆ ಕಂಡಿದ್ದಾರೆ. ಇನ್ನೂ ಬೆಳೆದ ಮೆಣಸಿನಕಾಯಿಯನ್ನು ಸ್ಟಾಕ್ ಇಟ್ಟಿರುವ ರೈತ ಶರಣಪ್ಪ ಜಗ್ಗಲ್ ಇನ್ನಷ್ಟು ಆದಾಯ ಗಳಿಸುವ ಉತ್ಸಾಹದಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ